September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಈ ಬಾರಿ ಸಮಾಜ ಸೇವಕ ರವಿ ಕಟಪಾಡಿಯವರಿಂದ ಮರ್ಮೈಡ್’ ಅಂದರೆ ಮತ್ಮಕನ್ಯ ವೇಷ : 1.85 ಕೋಟಿ ರೂ. ಸಂಗ್ರಹಿಸಿ 204 ಮಕ್ಕಳ ಚಿಕಿತ್ಸೆಗೆ ನೆರವಾದ ರವಿಯವರಿಗೆ, ಈಬಾರಿ 15 ಲಕ್ಷ ರೂ. ನಿರೀಕ್ಷೆ ;

ವರದಿ/ ಚಿತ್ರ :ಈ ಮೀಡಿಯಾ

ಕಟಪಾಡಿ:ಸುಮಾರು ಹತ್ತು ವರ್ಷಗಳಿಂದ ಅಷ್ಟಮಿಯಂದು ವೇಷ ಧರಿಸಿ ಸುಮಾರು 1.85 ಕೋಟಿ ರೂ. ಸಂಗ್ರಹಿಸಿ 204 ಮಕ್ಕಳ ಚಿಕಿತ್ಸೆಗೆ ನೆರವಾದ ಸಮಾಜ ಸೇವಕ ರವಿ ಕಟಪಾಡಿ ಈ ಬಾರಿ ಮರ್ಮೈಡ್’ ಅಂದರೆ ಮತ್ತ್ವಕನೈಯಾಗಿದ್ದಾರೆ.ಮಕ್ಕಳ ಪಾಲಿಗೆ ಸೇವಾ ಶಕ್ತಿಯಾದ ರವಿಯವರಿಗೂ ಕಳೆದ ವರ್ಷ ಅನಾರೋಗ್ಯ ಕಾಡಿತ್ತು.

ವೇಷ ಹಾಕಲು ಸಾಧ್ಯವಾಗಿಲಿಲ್ಲ. ವೈದ್ಯರು ಈ ಬಗ್ಗೆ ಜಾಗರೂಕರಾಗಿರುವಂತೆ ತಿಳಿಸಿದ್ದರೂ, ಸೇವಾ ತುಡಿತದ ರವಿಯವರು ಈ ಬಾರಿ ಕೊನೆಯ ಬಾರಿ ವೇಷ ಹಾಕುತ್ತೇನೆ ಎಂಬ ಆಶಾ ಭಾವನೆಯಿಂದ ಈ ಬಾರಿ’ಮರ್ಮೈಡ್’ ಅಂದರೆ ಮತ್ತ್ವಕ, ವೇಷ ಧರಿಸಿ ಉಡುಪಿಯಲ್ಲಿ ಸೆ. 4 ಮತ್ತು 5ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿ, ಕಟಪಾಡಿ, ಬ್ರಹ್ಮಾವರ, ಮಲ್ಪೆ ಪರಿಸರದಲ್ಲಿ ತಂಡದೊಂದಿಗೆ ರೋಡ್ ಶೋ ನಡೆಸಲಿದ್ದಾರೆ.

ಪ್ರಸಾದ್ ರೇಖಾ ದಂಪತಿಯ ಮನೆಯಲ್ಲಿ ವೇಷಕ್ಕಾಗಿ ತಯಾರಿ ಪ್ರಾರಂಭಿಸಿ ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ತಮ್ಮ ಆ ನಿಮಿತ್ತ ಗುರುವಾರ ರಾತ್ರಿಯಿಂದ ಕಟಪಾಡಿ ಮಟ್ಟುವಿನ ಅಂಬಾಡಿ ತಂಡದ ಸುಮಾರು 80ಕ್ಕೂ ಅಧಿಕ ಸ್ವಯಂಸೇವಕರೊಂದಿಗೆ ಹೊರಟ್ಟಿದ್ದಾರೆ.

ಕಟಪಾಡಿ ಪೇಟೆಬೆಟ್ಟು ಶ್ರೀಬಬ್ಬುಸ್ವಾಮಿ, ಕೊರಗಜ್ಜ ಸನ್ನದಾನದಲ್ಲಿ ಪ್ರಾರ್ಥಿಸಿ ತಮ್ಮ ಸಮಾಜ ಸೇವೆಯ ಕಾರ್ಯ ಆರಂಭಿಸಿದ್ದಾರೆ.ಈ ಬಾರಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಸುಮಾರು 6 ಮಕ್ಕಳಿಗೆ ಚಿಕಿತ್ಸೆಗೆ ಸುಮಾರು 15 ಲಕ್ಷ ರೂ. ಸಂಗ್ರಹಿಸಿ ನೀಡುವ ಗುರಿ ಹೊಂದಿದ್ದಾರೆ.ಸಿದ್ದಿ ವಿನಾಯಕ ಆರ್ಟ್ ಕಾಪು ಇದರ ತುಷಾರ್ ಅಂಚನ್ ನೇತೃತ್ವದಲ್ಲಿ 4 ಜನರ ತಂಡ ರವಿ ಕಟಪಾಡಿ ವೇಷದಲ್ಲಿ ಕಲಾಗಾರಿಕೆ ನೀಡಿದ್ದಾರೆ.ಈ ಸಂದರ್ಭ ರವಿ ಕಟಪಾಡಿ ತಂಡದ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು

Related posts

ಮಕ್ಕಳಿಗೆ ಪೋಷಕರೇ ರೋಲ್ ಮಾಡೆಲ್ ಆಗಬೇಕು: ರಾಘವೇಂದ್ರ ಪ್ರಭು ಕರ್ವಾಲು.ಕ್ರಿಶ್ಚನ್ ಹೈಸ್ಕೂಲಿನಲ್ಲಿ ನಡೆದ ಪೋಷಕರು ಮತ್ತು ವಿದ್ಯಾರ್ಥಿಗಳ ಬೃಹತ್ ಸಮಾವೇಶ;

Voiceoftulunadu

ಸಂಧಾನದ ವೇಳೆ ಬೇಡಿಕೆ ಬದಲಾಯಿಸಿದ ರಾಹುಲ್ ಗಾಂಧಿ; ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಆರೋಪ;

Voiceoftulunadu

ಪೊಳಲಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಇದರ ವಾರ್ಷಿಕ ಮಹಾಸಭೆ ;

Voiceoftulunadu

Leave a Comment