ವರದಿ /ಚಿತ್ರ :ಈ ಮೀಡಿಯಾ
ಕಾಪು : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಕೆನರಾ ಕಾಪು ವಲಯದ ವಾರ್ಷಿಕ ಸಭೆಯು ಕಾಪು ಕೆ1 ಸಭಾಂಗಣದಲ್ಲಿ ಜರುಗಿತು.ಕೆನರಾ ಕಾರ್ಯಕ್ರಮವನ್ನು ಸೌತ್ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷರಾದ ನವೀನ್ ರೈ ಪಂಜಲ ಉದ್ಘಾಟಿಸಿದರು.
ಅವರು ಮಾತನಾಡಿ, ಛಾಯಾಗ್ರಾಹಕರು ವೃತ್ತಿಯಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದು ಜೊತೆಗೆ ಆರ್ಥಿಕವಾಗಿಯೂ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಛಾಯಾಗ್ರಾಹಕರ ಕುಟುಂಬದ ಭದ್ರತೆಗಾಗಿ ಜಿಲ್ಲಾ ಸಮಿತಿಯ ವತಿಯಿಂದ ಛಾಯಾ ಸಾಂತ್ವಾನ ಯೋಜನೆಯನ್ನು ಮುಂದಿನದಿನದಲ್ಲಿ ಹಮ್ಮಿಕೊಳ್ಳುವ ಉದ್ದೇಶ ಇದೆ. ನಮ್ಮ ನಮ್ಮ ಹಿರಿಯರು ಸ್ಥಾಪಿಸಿದ ಈ ಸಂಘಟನೆಯನ್ನು ಇನ್ನಷ್ಟು ಬಲಿಷ್ಠ ಗೊಳಿಸುವ ಜವಾಬ್ದಾರಿ ಎಲ್ಲಾ ಸದಸ್ಯರ ಮೇಲಿದೆ ಎಂದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಕಾಪು ವಲಯದ ಅಧ್ಯಕ್ಷ ಸಂತೋಷ್ ಕಾಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭ ಎಸ್ಕೆಪಿಎ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಜಯ್ ಮಂಗಳೂರು, ಉಪಾಧ್ಯಕ್ಷಕಾರ್ಕಳ, ಎಸ್ಕೆಪಿಎ ದತ್ತಾತ್ರೇಯ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ರವಿಕುಮಾರ್ ಕಟಪಾಡಿ, ಜಿಲ್ಲಾ ಛಾಯಾ ಕಾರ್ಯದರ್ಶಿ ರಾಜೇಶ್ ಶಂಕರಪುರ, ವಲಯದ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಜಿಲ್ಲಾ ಕಟ್ಟಡ ಸಮಿತಿಯ ಸದಸ್ಯ ವಿನೋದ್ ಕಾಂಚನ್, ವಲಯ ಛಾಯಾ ಸುರಕ್ಷಾ ಪ್ರತಿನಿಧಿ ವೀರೇಂದ್ರ ಶಿರ್ವ ಮತ್ತಿತರರು ಉಪಪಸಿತರಿದ್ದರು.
ವಲಯದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ವರದಿ ವಾಚಿಸಿದರು. ಕೋಶಾಧಿಕಾರಿ ಕಿರಣ್ ಲೆಕ್ಕಪತ್ರ ಮಂಡಿಸಿದರು.ಸುರೇಶ್ ಎರ್ಮಾಳು ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಆಚಾರ್ಯ ವಂದಿಸಿದರು.
