ಕಾಪು: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಶರಣ್ ಅವರು ಸ್ನೇಹಿತರೊಂದಿಗೆ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿ, ಉಚ್ಚಂಗಿ ಸಹಿತ ಮಾರಿಯಮ್ಮನ ದರ್ಶನ ಪಡೆದು, ಅಮ್ಮನ ಅನುಗ್ರಹ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಹಾಗೂವ್ಯವಸ್ಥಾಪನಾ ಸಮಿತಿ ವತಿಯಿಂದ ನಟ ಶರಣ್ ಅವರನ್ನು ಗೌರವಿಸಲಾಯಿತು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಾಧವ ಆರ್. ಪಾಲನ್ ಹಾಗೂ ರವೀಂದ್ರ ಮಲ್ಲಾರ್ ಉಪಸ್ಥಿತರಿದ್ದರು.
