ವರದಿ/ ಚಿತ್ರ: ಈ ಮೀಡಿಯಾ
ನವದೆಹಲಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು39 ನೇ ಚಾತುರ್ಮಾಸ್ಯವನ್ನು ನವದೆಹಲಿಯಲ್ಲಿ ಕೈಗೊಂಡಿದ್ದು, ಮಹತ್ವದ ಕೊಡುಗೆ ಎಂಬಂತೆ ದೆಹಲಿ ಮಹಾನಗರ ಪಾಲಿಕೆ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ ವಸಂತ್ ಕುಂಜ್ ಪ್ರದೇಶದ ಬೃಹತ್ ಸರ್ಕಲ್ ಒಂದಕ್ಕೆ ಜಗದ್ಗುರು ಶ್ರೀ ಮಧ್ವಾಚಾರ್ಯ ವೃತ್ತ ಮತ್ತು ಆ ವೃತ್ತದಿಂದ ಸುಮಾರು ಎರಡು ಕಿ ಮೀ ಮುಖ್ಯ ರಸ್ತೆಗೆ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಮಾರ್ಗ ಎಂದು ನಾಮಕರಣಗೊಳಿಸಿ ಗೌರವಿಸಿದೆ.
ಗುರುವಾರದಂದು ಸಂಜೆ ಪೇಜಾವರ ಸ್ವಾಮೀಜಿಯವರು ಈ ಎರಡನ್ನೂ ಉದ್ಘಾಟಿಸಿದರು.ದೆಹಲಿ ಮೇಯರ್ ಪರ್ವೇಶ್ ವಾಹಿ, ಸ್ಥಳೀಯ ಶಾಸಕ ಕೈಲಾಶ್ ಗೆಹೋಟ್, ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಾಜ್ ಬಬ್ಬರ್, ಸದಸ್ಯ ಇಂದ್ರಜಿತ್ ಸೆರಾವತ್, ವಾಸುದೇವ ಭಟ್ ಪೆರಂಪಳ್ಳಿ, ಡಾ ವಿಠೋಬಾಚಾರ್ಯ, ಕೃಷ್ಣಮೂರ್ತಿ ಭಟ್, ಅಶ್ವಿನ್ ಕುಮಾರ್ ಉಪಸ್ಥಿತರಿದ್ದರು.
