28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸ

ದೆಹಲಿಯಲ್ಲಿ ಆಟಿ ಅಮಾವಾಸ್ಯೆ ಆಚರಣೆ: ತುಳುವರಿಂದ ಕಷಾಯ, ಮೆಂತ್ಯ ಗಂಜಿ ವಿತರಣೆ ಪ್ರಕಾಶ್ ಶೆಟ್ಟಿ ಉಳೆಪಾಡಿ ಹಾಗೂ ಉಸ್ಮಾನ್ ಅಬ್ದುಲ್ ಷರೀಫ್‌ ನೇತೃತ್ವ ;

ವರದಿ/ ಚಿತ್ರ: ಈ ಮೀಡಿಯ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೆಲೆಸಿರುವ ತುಳುನಾಡಿಗರು ‘ಆಟಿ ಅಮಾವಾಸ್ಯೆ’ಯ ವಿಶೇಷ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಿದರು.

ಕಳೆದ ಐದು ವರ್ಷಗಳಿಂದ ನಿರಂತರವಾಗಿ ಪ್ರಕಾಶ್ ಶೆಟ್ಟಿ ಉಳೆಪಾಡಿ ಹಾಗೂ ಉಸ್ಮಾನ್ ಅಬ್ದುಲ್ ಷರೀಫ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ಆಯೋಜನೆಗೊಳ್ಳುತ್ತಾ ພ໐໖໖.

ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯ ಸಂಕೇತವಾದ ఆటి ಅಮಾವಾಸ್ಯೆಯ ಅಂಗವಾಗಿ 150 ಆಯೋಜಿಸಲಾಗಿದ್ದ ಈ ಕೂಟದಲ್ಲಿ ಸುಮಾರು ಹೆಚ್ಚು ತುಳು-ಕನ್ನಡಿಗರು ಹಾಗೂ ಉತ್ತರ ಭಾರತೀಯರು ಉತ್ಸಾಹದಿಂದ ಭಾಗವಹಿಸಿದ್ದರು. ಆಗಮಿಸಿದ ಎಲ್ಲಾ ಬಂಧು-ಮಿತ್ರರಿಗೆ ಸಾಂಪ್ರದಾಯಿಕ ಆಟಿ ಕಷಾಯ ಹಾಗೂ ಆರೋಗ್ಯವರ್ಧಕ ಮೆಂತ್ಯ ಗಂಜಿಯನ್ನು ಉಚಿತವಾಗಿ ವಿತರಿಸಲಾಯಿತು.

ಆಟಿ ಅಮಾವಾಸ್ಯೆಯಂದು ಸೇವಿಸುವ ಈ ವಿಶೇಷ ಕಷಾಯವು ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುವುದರಿಂದ, ನೆರೆದವರೆಲ್ಲರೂ ಇದನ್ನು ಸ್ವೀಕರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಮಾರ್ಗದರ್ಶಕರಾದ ನಿರಂಜನ್ ನಾಯಕ್, ಉಪಾಧ್ಯಕ್ಷರು – ಸರ್ಜಿಕಲ್ ಆಂಕಾಲಜಿ, ಪಾರಸ್ ಹೆಲ್ತ್ ಆಸ್ಪತ್ರೆ ಅವರು ভে১. ಕಾರ್ಯಕ್ರಮವನ್ನು ಉದ್ಘಾಟಿಸಿ, ಹಾಗೂ ಆಟಿ ಕಷಾಯದ ವೈಜ್ಞಾನಿಕ ಹಿನ್ನೆಲೆ, ಔಷಧೀಯ ಗುಣಗಳು ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಇದರ ಪ್ರಾಮುಖ್ಯತೆಯನ್ನು ಸಭಿಕರಿಗೆ ವಿವರವಾಗಿ ತಿಳಿಸಿಕೊಟ್ಟರು.

ಉಲ್ಲೇಖನೀಯ ಸಂಗತಿಯೆಂದರೆ, ಕಳೆದ ಬಾರಿ “ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಪಾಲೆದ ಕಷಾಯದ ವೈಜ್ಞಾನಿಕ ಉಪಯೋಗಗಳು” ಎಂಬ ವಿಷಯದ ಮೇಲೆ ವಿವಿಧ ಕ್ಷೇತ್ರದ ದೇಶದ ಅತ್ಯುನ್ನತ ನುರಿತ ತಜ್ಞ ವೈದ್ಯರೊಂದಿಗೆ ರಾಷ್ಟ್ರೀಯ ಸಂವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಈ ದೆಹಲಿಯ ತಂಡಕ್ಕಿದೆ.

ಕಾರ್ಯಕ್ರಮದ ಯಶಸ್ಸಿನ ಹಿಂದೆ ಸ್ವಯಂಸೇವಕರ ಶ್ರಮ ಅನನ್ಯವಾಗಿತ್ತು. ಮುಂಜಾನೆ 3:30 ಕ್ಕೇ ಎದ್ದು ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡ ಸ್ವಯಂಸೇವಕರಾದ ಹರ್ಷಿತಾ ಕುಶಾಲಪ್ಪ, ಮೋಹನ್ ದಾಸ್ ಮತ್ತು ಸತ್ಯನಾರಾಯಣ ಅವರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಲಾಯಿತು. ಪಾಲೆ ಮರದ ತೊಗಟೆ ತರುವುದರ ಜೊತೆಗೆ ಕಷಾಯ ಮತ್ತು ಗಂಜಿ ತಯಾರಿಯಲ್ಲಿ ನೆರವಾದ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

ನಮ್ಮ ನಾಡಿನ ಆಚಾರ-ವಿಚಾರ ಮತ್ತು ಕಷಾಯದ ಸಾಂಪ್ರದಾಯಿಕ ಮಹತ್ವವನ್ನು ಅರಿತು ಪ್ರೀತಿಯಿಂದ ಭಾಗವಹಿಸಿದ ಎಲ್ಲಾ ಬಾಂಧವರ ಸಹಕಾರವು ಎಂದೆಂದಿಗೂ ಹೀಗೆಯೇ ಮುಂದುವರಿಯಲಿ ಎಂದು ಸಂಘಟಕರು ಆಶಿಸಿದ್ದಾರೆ.

Related posts

ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ₹2,500 ಹಣ ಪಡೆಯಲು ‘ಗರ್ಭಕಂಠ ಕ್ಯಾನ್ಸರ್ ಲಸಿಕೆ’ ಪಡೆಯುವುದು ಕಡ್ಡಾಯ! ;

Voiceoftulunadu

ಉಚ್ಚಿಲ : ಕಸಾಪ ದಿಂದ ಪ್ರತಿಭಾ ಪುರಸ್ಕಾರ, ರ‍್ಯಾಂಕ್ ವಿಜೇತರಿಗೆ ಅಭಿನಂದನೆ;

Voiceoftulunadu

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ:ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ;

Voiceoftulunadu

Leave a Comment