28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನ

ನಿಟ್ಟೆ ವಿ.ವಿ ಇನ್‌ಕ್ಯುಬೇಶನ್ ಸೆಂಟರ್‌ನ ನವೋದ್ಯಮಿಗಳಿಗೆ ರಾಷ್ಟ್ರೀಯ ಗೌರವ;

ವರದಿ/ ಚಿತ್ರ: ದಿತೇಶ್ ಪೂಜಾರಿ ಮಂಗಳೂರು

ಮಂಗಳೂರು: ನಿಟ್ಟೆ ವಿದ್ಯಾಸಂಸ್ಥೆಯ ಪ್ರೋತ್ಸಾಹದೊಂದಿಗೆ ಅಟಲ್ ಇನೊವೇಶನ್ ಮಿಶನ್ (ಎಐಎಂ) ನೀತಿ ಆಯೋಗದ ಸಹಭಾಗಿತ್ವದಲ್ಲಿ ಸ್ಥಾಪಿತ ವಾಗಿರುವ ಹಾಗೂ ನಿಟ್ಟೆ ವಿಶ್ವವಿದ್ಯಾ ಲಯದ ನಿಟ್ಟೆ ಮಹಾಲಿಂಗ ಅಡ್ಯಂ ತಾಯ ಸ್ಮಾರಕ ತಾಂತ್ರಿಕ ಮಹಾವಿ ದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿ ರುವ ಎಐಸಿ ಇನ್‌ಕ್ಯುಬೇಶನ್ ಸೆಂಟರ್ ಮೂಲಕ ಬೆಳೆದ ಮೂವರು ಸ್ಟಾರ್ಟ್ ಅಪ್‌ಗಳ ಸಂಸ್ಥಾಪಕರು, ದೇಶಾದ್ಯಂತ ಆಯ್ಕೆಯಾದ 26 ನವೋದ್ಯಮಿಗಳ ಜೊತೆ ಪ್ರತಿಷ್ಠಿತ ‘ಗ್ರಾಸ್ ರೂಟ್ಸ್ ಇನೋ ವೇಟರ್ ರೆಕಗ್ನಿಷನ್-2026’ ರಾಷ್ಟ್ರೀಯ ಗೌರವಕ್ಕೆ ಪಾತ್ರರಾಗಿದ್ದಾರೆ.

ಆಯ್ಕೆಯಾದ ನವೋದ್ಯಮಿಗಳಾದ ಎಕ್ಸ್‌ಪೆರಿಮೈಂಡ್ ಲ್ಯಾಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಕ್ಷಯ್ ಮಶೇಲ್ಕರ್, ಮಾವೇದಾಸ್ ಫುಡ್ಸ್ ಆ್ಯಂಡ್ ಸೀರಿಯಲ್ಸ್ ಪ್ರೈವೇಟ್ ಲಿಮಿ ಟೆಡ್ ಸಂಸ್ಥೆಯ ಅನುಷಾ ಪ್ರಜ್ವಲ್ ಹಾಗೂ ಡಬ್ಲ್ಯುಡಬ್ಲ್ಯು ಆರ್ ಇನೋ ವೇಶನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ರತ್ನಾಕ‌ರ್ ನಾಯಕ್ ಗೌರ ವಕ್ಕೆ ಆಯ್ಕೆಯಾಗಿದ್ದು, ಜುಲೈ 31ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದೌಪತಿ ಮುರ್ಮು ಅವರು ಸನ್ಮಾನಿಸಲಿರುವರು.

ಎಕ್ಸ್‌ಪೆರಿಮೈಂಡ್ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾ ಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಮತೇಲ್ಕರ್ ಅವರು ಅನುಭವಾಧಾರಿತ ಕಲಿಕೆಯ ಮೂಲಕ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಶಿಕ್ಷಣಕ್ಕೆ ಹೊಸ ಆಯಾಮ ನೀಡುತ್ತಿದ್ದಾರೆ. ಪ್ರತಿಯೊಬ್ಬ ಮಗುವೂ ವಿಜ್ಞಾನ ಮತ್ತು ಗಣಿತವನ್ನು ಯಾವುದೇ ಭಯವಿಲ್ಲದೆ ಕಲಿಯುವ ಭಾರತವನ್ನು ನಿರ್ಮಿಸುವ ದೃಷ್ಟಿಯೊಂ ದಿಗೆ ಈ ಸಂಸ್ಥೆ ಪ್ರಾಯೋಗಿಕ ಸ್ಟೆಮ್ ಕಿಟ್‌ಗಳು, ವಿಜ್ಞಾನ ಮಾದರಿಗಳು ” ಮಾದರಿಗಳು, ಶೈಕ್ಷ ಣಿಕ ಆಟಿಕೆಗಳು ಹಾಗೂ ಚಟುವಟಿಕೆಆಧಾರಿತ ಕಲಿಕಾ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಸಂಕೀರ್ಣ ಪರಿಕಲ್ಪನೆಗಳನ್ನು ಸರಳಗೊಳಿಸುವ ಜೊತೆಗೆ ಮಕ್ಕಳಲ್ಲಿ ಕುತೂಹಲವನ್ನು ಬೆಳೆಸುತ್ತಿದೆ.

ಮಾವೇದಾಸ್ ಫುಡ್ಸ್ ಆ್ಯಂಡ್ ಸೀರಿಯಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕಿ ಅನುಷಾ ಪ್ರಜ್ವಲ್ ಅವರು ಸಾಂಪ್ರದಾಯಿಕ ಆಯುರ್ವೇದೀಯ ಪೌಷ್ಠಿಕ ಜ್ಞಾನ ಪುನರುಜ್ಜಿವನಗೊಳಿಸುವ ನಿಟ್ಟಿನಲ್ಲಿ, ತಲೆಮಾರುಗಳಿಂದ ಬಂದಿರುವ ಕುಟುಂಬದ ಪಾಕವಿಧಾನಗಳನ್ನು ವೈಜ್ಞಾನಿಕವಾಗಿ ಪ್ರಮಾಣೀಕರಿಸಿದ ಆಹಾರ ಉತ್ಪನ್ನಗಳಾಗಿ ರೂಪಾಂತ ರಿಸಿದ್ದಾರೆ. ಈ ಸಂಸ್ಥೆ ಗರ್ಭಿಣಿಯರು, ಹೆರಿಗೆ ನಂತರದ ತಾಯಂದಿರು ಮತ್ತು ಶಿಶುಗಳ ಪೌಷ್ಟಿಕಾಂಶದ ಆಗ ತ್ಯಗಳನ್ನು ಪೂರೈಸುವ ಉದ್ದೇಶ ‘ದಿಂದ, ರಾಸಾಯನಿಕ ಮುಕ್ತ, ಸಂರಕ್ಷ ಕರಹಿತ ಹಾಗೂ ತಕ್ಷಣ ಸೇವನೆಗೆ ಸಿದ್ಧವಾಗಿರುವ ಪೌಷ್ಠಿಕ ಆಹಾರ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ.

ಡಬ್ಲ್ಯುಡಬ್ಲ್ಯುಆರ್ ಇನೋ ವೇಶನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕ ರತ್ನಾಕರ್ ನಾಯಕ್ ಅವರು ಎಟಿಎಂಎಸ್ (ಅಟೊಮೆಟಿಕ್ ಟ್ಯಾಂಕ್ ಮೊನಿಟ ರಿಂಗ್ ಮತ್ತು ಆಟೊಮೇಶನ್ಅಕ್ಷಯ್ ಮಶೇಲ್ಕರ್, ಅನುಷಾ ಪ್ರಜ್ವಲ್, ರತ್ನಾಕರ್ ನಾಯಕ್ಸಿಸ್ಟಮ್) ಎಂಬ ಸ್ಮಾರ್ಟ್ ರ್ವೈಲೆಸ್ ನೀರಿನ ಮಟ್ಟ ನಿಯಂತ್ರಣ ವ್ಯವಸ್ಥೆ ಯನ್ನು ಅಭಿವೃದ್ಧಿಪಡಿಸಿದ್ದಾರೆ. ರೈತರು ಹಾಗೂ ಗ್ರಾಮೀಣ ಕುಟುಂಬಗಳು ಸಾಮಾನ್ಯವಾಗಿ ಎದುರಿಸುವ ನೀರಿನ ಸಮರ್ಪಕ ನಿರ್ವಹಣೆಯ ಸಮಸ್ಯೆಗೆ ಇದು ಪರಿಣಾಮಕಾರಿ ಪರಿಹಾರ ವಾಗಿದೆ. ಎಟಿಎಂಎಸ್ ವ್ಯವಸ್ಥೆಯು ಲಾಂಗ್ ರೇಂಜ್ ಸಂವಹನ ತಂತ್ರ ಜ್ಞಾನ ಬಳಸಿಕೊಂಡು, ಸಿಮ್ ಕಾರ್ಡ್ ಅಥವಾ ವೈಫೈ ಅವಶ್ಯಕತೆ ಇಲ್ಲದೆ ನೀರಿನ ಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತದೆ.

ಇದರಿಂದ ನೀರಿನ ಟ್ಯಾಂಕ್‌ಗಳ ಉಕ್ಕುವಿಕೆ ತಡೆಯು ವುದರ ಜೊತೆಗೆ ಮೋಟಾರ್ ಪಂಪ್ ಗಳನ್ನು ರಕ್ಷಿಸಿ, ನೀರು ಮತ್ತು ವಿದ್ಯುತ್ ವ್ಯರ್ಥವಾಗುವುದನ್ನು ಕಡಿಮೆ ಮಾಡುತ್ತದೆ.ಎಐಸಿ ನಿಟ್ಟೆ ಇಂಕ್ಯುಬೇಷನ್ ಸೆಂಟರ್ ತೃತೀಯ ಹಂತದ (ಟಿಯರ್ ಟಿಯರ್-3) ಪ್ರದೇಶದಿಂದಲೇ ಕೃಷಿ, ಆರೋಗ್ಯ, ಶಿಕ್ಷಣ, ಆಹಾರ ತಂತ್ರ ಜ್ಞಾನ ಹಾಗೂ ಗ್ರಾಮೀಣ ಜೀವನೋ ಪಾಯ ಕ್ಷೇತ್ರಗಳಲ್ಲಿನ ನೈಜ ಸಮಸ್ಯೆ ಗಳಿಗೆ ಪರಿಹಾರ ನೀಡುವ ನವೋ ದ್ಯಮಗಳನ್ನು ಬೆಂಬಲಿಸುವ ಮೂಲಕ ದೇಶದಲ್ಲಿ ಹೊಸತನದ ಚಳವಳಿಗೆ ಮುನ್ನಡೆ ನೀಡುತ್ತಿದೆ.

ಇಂಕ್ಯುಬೇಷನ್, ಮಾರ್ಗದರ್ಶನ, ಅನುದಾನ ಹಾಗೂ ಕೈಗಾರಿಕಾ ಸಂಪರ್ಕಗಳ ಮೂಲಕ ಇದುವರೆಗೆ 137ಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ಗಳನ್ನು ಬೆಳೆಸಿದ್ದು, ಅವುಗಳನ್ನು ಪರಿಣಾಮಕಾರಿ ಉದ್ಯಮಗಳಾಗಿ ರೂಪಿಸಲು ನೆರವಾಗಿದೆ. ಜೊತೆಗೆ ನಿಟ್ಟೆ ವಿಶ್ವವಿದ್ಯಾಲಯ ಹಾಗೂ ಇತರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಇಂಟರ್ನ್‌ ಶಿಪ್, ಲೈವ್ ಪ್ರಾಜೆಕ್ಟ್‌ಗಳು, ಮಾರ್ಗದರ್ಶನ ಹಾಗೂ ಉದ್ಯಮ ಶೀಲತಾ ಕಲಿಕೆಯ ಅವಕಾಶಗಳನ್ನು ಒದಗಿಸುತ್ತಿದೆ.

ಪರಿಶಿಷ್ಟ ಜಾತಿ ಯುವಕರಿಗೆ ಡಿಜಿಟಲ್ ಉದ್ಯಮ ಸ್ಥಾಪನೆಗೆ ಸಹಾಯಧನ: ಅರ್ಜಿ ಆಹ್ವಾನಜಯಕಿರಣ ವರದಿಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪದವಿ ಪಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಜೆಲಿಟ್ಯಾ ಟವರ್ ಸಂಪಗಿರಾ ಮನಗರ ಇಲ್ಲಿ ಪಡೆದು, ಅರ್ಜಿಗಳನ್ನು ಜುಲೈ 30 ರೊಳಗೆ ಸಲ್ಲಿಸಬಹುದು.

Related posts

ಶ್ರೀ ಧಾಮ ಮಾಣಿಲ ಕ್ಷೇತ್ರದಲ್ಲಿ 48 ದಿನಗಳ ಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ: ಇದರ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ;

Voiceoftulunadu

ಮಂಗಳೂರು: ಕೇರಳ ಮೂಲದ ಚಿನ್ನ ವ್ಯಾಪಾರಿಯ ದರೋಡೆ, ಕಾರಿನೊಂದಿಗೆ ಪರಾರಿಸೋಮವಾರ ಮುಂಜಾನೆ ಪಣಂಬೂರು ಬಳಿಯ ಬೈಕಂಪಾಡಿಯಲ್ಲಿ ನಡೆದ ಘಟನೆ ;

Voiceoftulunadu

ಬಂಟರ ಸಂಘ (ರಿ.) ಬಂಟ್ವಾಳ ತಾಲೂಕು,ಬಂಟರ ಸಂಘ ಸಿದ್ಧಕಟ್ಟೆ ವಲಯ ಇದರ ಆಶ್ರಯದಲ್ಲಿಆಟಿದ ಕೂಟ, ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಪ್ರೋತ್ಸಾಹಧನ ವಿತರಣೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ;

Voiceoftulunadu

Leave a Comment