November 3, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಿಶೇಷ ಅಂಕಣಸಾಮಾಜಿಕ/ಇತಿಹಾಸ

ನೃತ್ಯದ ನಾದದಲ್ಲಿ ಮಿಂಚುತ್ತಿರುವ ಕರುನಾಡಿನ ಕುವರಿ: ಉಡುಪಿಯ ಹೆಮ್ಮೆಯ ಪ್ರತಿಭೆ – ಸಾಹಿತ್ಯಾ ಶೆಟ್ಟಿ ;

ಲೇಖನ: ಸತೀಶ್ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

ಕಲೆ ಎನ್ನುವುದು ಮನುಷ್ಯನ ಆತ್ಮದ ಭಾಷೆ,ಅದರಲ್ಲೂ ಭರತನಾಟ್ಯವೆಂದರೆ ನಮ್ಮ ಸಂಸ್ಕೃತಿಯ ಸ್ಪಂದನ, ದೇವರೊಂದಿಗಿನ ಮೌನ ಸಂವಾದ.”ಉಡುಪಿಯ ಮಣ್ಣಿನ ಸೊಗಡನ್ನು ಮೈದುಂಬಿಕೊಂಡು, ಮಂಡ್ಯದ ಕಲಾ ಗರ್ಭದಲ್ಲಿ ಅಚ್ಚಳಿಯದ ಛಾಪು ಮೂಡಿಸುತ್ತಿರುವ ಚಿಣ್ಣಿ ಸಾಹಿತ್ಯಾ ಶೆಟ್ಟಿ ಇಂದು ಕಲಾಪ್ರೇಮಿಗಳ ಮನಸ್ಸನ್ನು ಸೂರೆಗೊಳ್ಳುತ್ತಿದ್ದಾರೆ.

ಕೇವಲ ಹತ್ತನೇ ತರಗತಿಯ ಹರೆಯದಲ್ಲೇ ವಿದ್ಯಾಭ್ಯಾಸದ ಜತೆಗೆ ಭರತನಾಟ್ಯದ ಕಠಿಣ ಸಾಧನೆಯನ್ನು ಮೈಗೂಡಿಸಿಕೊಂಡಿರುವ ಈ ಯುವ ಪ್ರತಿಭೆ, ಇಂದಿನ ಯುವ ಪೀಳಿಗೆಗೆ ನಿಜಕ್ಕೂ ಒಂದು ಜೀವಂತ ಸ್ಫೂರ್ತಿ!ಶಿಕ್ಷಣ ಮತ್ತು ಕಲೆಯ ಅಪರೂಪದ ಸಂಗಮಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಸಾಹಿತ್ಯಾ, ಅಕ್ಷರದ ಲೋಕದಲ್ಲೂ ಸೈ, ಅಭಿನಯದ ಲೋಕದಲ್ಲೂ ಜೈ ಎನಿಸಿಕೊಳ್ಳುತ್ತಿದ್ದಾರೆ.

ತಂದೆ ಪ್ರದೀಪ್ ಕುಮಾರ್ ಹಾಗೂ ತಾಯಿಯಾದ ಶಿಕ್ಷಕಿ ರಂಜಿತಾ ಅವರ ಪ್ರೀತಿಯ ಪ್ರೋತ್ಸಾಹ ಈ ಕಲಾಪಯಣದ ದಾರಿದೀಪ. ಶಾಲೆಯ ಪುಸ್ತಕಗಳ ನಡುವೆ ಕಳೆದುಹೋಗದೇ, ಗುರು ಡಾ. ಚೇತನ ರಾಧಾಕೃಷ್ಣ ಅವರ ಮಾರ್ಗದರ್ಶನದಲ್ಲಿ ‘ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್’ನ ವೇದಿಕೆಯಲ್ಲಿ ಭರತನಾಟ್ಯದ ವಿದ್ವತ್ ಹಂತದ ಮೆಟ್ಟಿಲುಗಳನ್ನು ಹತ್ತುತ್ತಿರುವುದು ರೋಮಾಂಚನಕಾರಿ.

ಹೆಜ್ಜೆಯಲ್ಲೊಂದು ಭಕ್ತಿ, ಭಾವದಲಿ ಸ್ಪಂದನೆಶಾಸ್ತ್ರೀಯ ಕಲೆಯ ಗತ್ತು-ಗಾರಿಕೆಗಳ ನಡುವೆ, ಜಾನಪದ ಹಾಗೂ ಪಾಶ್ಚಾತ್ಯ ನೃತ್ಯಗಳಲ್ಲೂ ತನ್ನ ವಿಶಿಷ್ಟ ಪ್ರತಿಭೆಯನ್ನು ಸಾಹಿತ್ಯಾ ಮೆರೆದಿದ್ದಾರೆ. ವೇದಿಕೆಯ ಮೇಲೆ ಕಾಲ್ಗೆಜ್ಜೆಗಳು ಸದ್ದು ಮಾಡಿದಾಗ, ಅಲ್ಲಿ ಕೇವಲ ಹೆಜ್ಜೆಗಳಿರುವುದಿಲ್ಲ; ಬದಲಿಗೆ ಭಾರತೀಯ ಸಂಸ್ಕೃತಿಯ ಜೀವಂತ ಜೀವನಾಡಿ ಮಿಡಿಯುತ್ತದೆ.

ಪ್ರತಿಯೊಂದು ಮುಖಭಾವದಲ್ಲೂ ಭಕ್ತಿ, ಸಮರ್ಪಣೆ ಮತ್ತು ಕಲೆಯ ಮೇಲಿನ ಅಪ್ಪಟ ಪ್ರೀತಿ ಕಣ್ಣಿಗೆ ರಾಚುತ್ತದೆ.ಯುವ ಜನತೆಗೆ ಪ್ರೇರಣೆಯ ಬೆಳಕುಇಂದಿನ ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ಸಂಪ್ರದಾಯ ಹಾಗೂ ಪರಂಪರೆ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ, ಸಾಹಿತ್ಯಾ ಶೆಟ್ಟಿ ಅವರಂತಹ ಚಿಕ್ಕ ವಯಸ್ಸಿನ ಮಕ್ಕಳು ಈ ನೆಲದ ಬೇರುಗಳನ್ನು ಗಟ್ಟಿಯಾಗಿ ಹಿಡಿದು ನಿಂತಿರುವುದು ಹೆಮ್ಮೆಯ ವಿಷಯ.

ನಮ್ಮ ಆಶಯ : ಉಡುಪಿಯ ಗ್ರಾಮೀಣ ಸೊಗಡಿನಿಂದ ಬೆಳೆದು ಬಂದ ಈ ಮುದ್ದು ಕುವರಿ ಸಾಹಿತ್ಯಾ ಶೆಟ್ಟಿ ಅವರ ಹೆಜ್ಜೆಗಳು ಹೀಗೆಯೇ ಮುನ್ನಡೆಯಲಿ. ಕಲೆಯ ಆಕಾಶದಲ್ಲಿ ಉತ್ತುಂಗಕ್ಕೇರಿ, ಭಾರತೀಯ ನಾಟ್ಯ ಪರಂಪರೆಯ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಲಿ ಎಂದು ಕಲಾಭಿಮಾನಿಗಳ ಹಾರೈಕೆ.ಕಲೆಯ ಜೊತೆ ಬೆರೆತ ಈ ಕಂದನ ಪಯಣವು ಮುಂದಿನ ದಿನಗಳಲ್ಲಿ ಇಡೀ ನಾಡಿಗೆ ಬೆಳಕಾಗಲಿ.

Related posts

ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡೊನೊಂದಿಗೆ ಬಿಪಿಎಲ್ ಕಾರ್ಡ್ ಹೊಂದಿರುವ ಹೃದಯ ರೋಗಿಗಳಿಗೆ ಆಳ್ವಾಸ್ ಹೆಲ್ತ್ ಸೆಂಟರ್ ನಲ್ಲಿ ಉಚಿತ ಅಂಜಿಯೋಪ್ಲಾಸ್ಟಿ ಚಿಕಿತ್ಸೆ :

voiceoftulunadu

ಮೋದಿ ಸರ್ಕಾರದಿಂದ ಕಠಿಣ ಕಾನೂನು – ಪ್ರಶ್ನೆಪತ್ರಿಕೆ ಲೀಕಾಸುರರಿಗೆ 10 ವರ್ಷ ಜೈಲು, 10 ಕೋಟಿವರೆಗೆ ದಂಡ;

Voiceoftulunadu

ಇಂದು ಬಿಡುಗಡೆಯಾಗುತ್ತಿದ್ದಾಳೆ “ಈ ಶತಮಾನದ ಮಾದರಿ ಹೆಣ್ಣು” : ಬಿ ಆರ್ ಫಿಲ್ಮ್ ಐಕಾನ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿರುವ ಕಿರುಚಲನಚಿತ್ರ ;

Voiceoftulunadu

Leave a Comment