28.5 C
ಮಂಗಳೂರು
September 4, 2026
Uncategorizedಕ್ರೈಮ್ಜಿಲ್ಲಾ ಸುದ್ದಿರಾಜ್ಯ/ದೇಶಸಾಮಾಜಿಕ/ಇತಿಹಾಸ

ಪ್ರಜ್ವಲ್ ರೇವಣ್ಣ ಜೈಲಲ್ಲಿ ಫೋನ್ನಲ್ಲಿ ಮಾತಾಡೋ ವಿಡಿಯೋ ವೈರಲ್ಭದ್ರತಾ ಲೋಪದ ಬಗ್ಗೆ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾ‌ರ್ ಅಸಮಧಾನ ;

ವರದಿ/ ಚಿತ್ರ : ಈ ಮೀಡಿಯಾ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ಜೈಲಿನ ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಮೊಬೈಲ್ ಪೋನ್ ಹಿಡಿದು ಬಿಂದಾಸ್ ಆಗಿ ಮಾತನಾಡುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜೈಲು ಆಡಳಿತ ಮಂಡಳಿಯ ನಿದ್ದೆಗೆಡಿಸಿದೆ.ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಅವರು ಜೈಲಿನ ತಮ್ಮ ಬ್ಯಾರತ್ನಲ್ಲಿ ಮೊಬೈಲ್ ಹಿಡಿದು ರಾಜಾರೋಷವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ.

ಯಾವುದೇ ಭಯವಿಲ್ಲದೆ, ಅವರು ಪೋನ್ನಲ್ಲಿ ಸಂಭಾಷಣೆ ನಡೆಸುತ್ತಿದ್ದಾರೆ. ವಿಶೇಷವೆಂದರೆ ಪ್ರಜ್ವಲ್ ಫೋನ್ನಲ್ಲಿ ಮಾತನಾಡುತ್ತಿರುವ ದೃಶ್ಯವನ್ನು ಮತ್ತೊಂದು ಮೊಬೈಲ್ ಮೂಲಕಗುಟ್ಟಾಗಿ ರೆಕಾರ್ಡ್ ಮಾಡಲಾಗಿದೆ. ಅಂದರೆ ಜೈಲಿನೊಳಗೆ ಒಂದಲ್ಲ, ಎರಡಲ್ಲ, ಹತ್ತಾರು ಮೊಬೈಲ್ಗಳು ರಾಜಾರೋಷವಾಗಿ ಓಡಾಡುತ್ತಿವೆಯೇ ಎಂಬ ಸಂಶಯ ಈಗ ದಟ್ಟವಾಗಿದೆ.

ಸಿಸಿಬಿ ದಾಳಿ ವೇಳೆ ಬಯಲಾದ ಸತ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮಿಂಚಿನ ದಾಳಿ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಅವರಿದ್ದ ಬ್ಯಾರಕ್ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿತ್ತು. ಇದು ರಾಜ್ಯಾದ್ಯಂತ ಭಾರಿ ಚರ್ಚೆಗೆ ಮತ್ತು ಟೀಕೆಗೆ ಕಾರಣವಾಗಿತ್ತು. ಈಗ ಆ ಮೊಬೈಲ್ ಅನ್ನು ಪ್ರಜ್ವಲ್ ಹೇಗೆ ಬಳಸುತ್ತಿದ್ದರು ಎಂಬುದಕ್ಕೆ ಈ ವಿಡಿಯೋ ಪ್ರಬಲ ಸಾಕ್ಷಿಯಂತಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಇಲಾಖೆಡಿಜಿಪಿ ಅಲೋಕ್ ಕುಮಾರ್, ಭದ್ರತಾ ಲೋಪದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪ್ರಜ್ವಲ್ ಬ್ಯಾರತ್ನಲ್ಲಿ ಪತ್ತೆಯಾದ ಮೊಬೈಲ್ನಲ್ಲಿ ಆಂಧ್ರ ಮೂಲದ ಏರ್ಟೆಲ್ ಸಿಮ್ ಬಳಸಲಾಗಿದೆ. ಜೈಲಿನ ಜಾಮರ್ ಇದ್ದರೂ ಏರ್ಟೆಲ್ 5G ನೆಟ್ವರ್ಕ್ ಹೇಗೆ ಸಿಗುತ್ತಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ.

ಈಗಾಗಲೇ ಜೈಲಿನ ಓರ್ವ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಮತ್ತು ಎಸ್ಪಿಗೆ ನೋಟಿಸ್ ನೀಡಲಾಗಿದೆ.ಜೈಲಿನ ನಿಯಮಗಳನ್ನು ಗಾಳಿಗೆ ತೂರಿ, ಸಮವಸ್ತ್ರ ಕೂಡ ಧರಿಸದೆ ಪ್ರಜ್ವಲ್ ರೇವಣ್ಣ ನಡೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

Related posts

ತುಳುನಾಡ ಸಾಂಸ್ಕೃತಿಕ ಪತ್ರಿಕೋದ್ಯಮದ ವಿಶಿಷ್ಟ ಧ್ವನಿ ಪರಮಾನಂದ ಸಾಲ್ಯಾನ್ ಇನ್ನಿಲ್ಲ;

Voiceoftulunadu

ವಿಜಯ ಕಾಲೇಜು ಮೂಲ್ಕಿ ಗ್ಲೋಬಲ್ ಅಲ್ಯೂಮಿನಿ ಅಸೋಸಿಯೇಶನ್ನೂತನ ಅಧ್ಯಕ್ಷರಾಗಿ ಅಡ್ವೊಕೇಟ್ ಶೇಖರ್ ಎಸ್.ಭಂಡಾರಿ ಆಯ್ಕೆ

Voiceoftulunadu

ಕಟಪಾಡಿ : ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿ ಹಣ ನೀಡದೆ ಪರಾರಿಯಾದ ಕಾರು ಚಾಲಕ ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ಸ್ ಕಾರಿನಲ್ಲಿ ಬಂದ ಮೂವರು ಯುವಕರು;

Voiceoftulunadu

Leave a Comment