28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮಹಿಳಾ ಸಮಾಜ ಮಣಿಪಾಲದಿಂದ ಸಂಸ್ಥಾಪಕರ ದಿನಾಚರಣೆ: ಶ್ರೀಮತಿ ಶಾರದಾ ಎಂ. ಪೈ ಹಾಗೂ ಡಾ. ಎ. ಪದ್ಮರಾವ್ ಅವರ ಸ್ಮರಣಾರ್ಥ ಸಂಸ್ಥಾಪಕರ ದಿನಾಚರಣೆ ;

ವರದಿ ಚಿತ್ರ ಈ ಮೀಡಿಯಾ

ಮಣಿಪಾಲ: ಮಹಿಳಾ ಸಮಾಜ ಮಣಿಪಾಲ ವತಿಯಿಂದ ಸಂಸ್ಥೆಯ ದೂರದೃಷ್ಟಿಯುಳ್ಳ ಸಂಸ್ಥಾಪಕರಾದ ಶ್ರೀಮತಿ ಶಾರದಾ ಎಂ. ಪೈ ಹಾಗೂ ಡಾ. ಎ. ಪದ್ಮರಾವ್ ಅವರ ಸ್ಮರಣಾರ್ಥ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು.ಈ ವರ್ಷ ಡಾ. ಎ. ಪದ್ಮರಾವ್ ಅವರ ಶತಮಾನೋತ್ಸವ ಜನ್ಮದಿನದ ವಿಶೇಷ ಸಂದರ್ಭವೂ ಆಗಿತ್ತು.

ದೀಪ ಬೆಳಗಿಸಿ ಸಂಸ್ಥಾಪಕರಿಗೆ ಪುಷ್ಪನಮನ ಸಲ್ಲಿಸಲಾಯಿತು.ಶಾರದಾ ಎಂ. ಪೈ ಅವರ ಸೊಸೆಯಂದಿರಾದ ಶ್ರೀಮತಿ ವಸಂತಿ ರಾಮದಾಸ್ ಪೈ, ಶ್ರೀಮತಿ ಕುಸುಮಾ ಪಾಂಡುರಂಗ ಪೈ, ಶ್ರೀಮತಿ ಉಷಾ ನಾರಾಯಣ ಪೈ ಹಾಗೂ ಶ್ರೀಮತಿ ಗಾಯತ್ರಿ ಪೈ, ಮತ್ತು ಡಾ. ಎ. ಪದ್ಮರಾವ್ ಅವರ ಪುತ್ರಿಯರಾದ ಡಾ. ಗಿರಿಜಾ ಎ. ಹಾಗೂ ಡಾ. ಶುಭಗೀತಾ ಉಪಸ್ಥಿತರಿದ್ದರು.

ಹಿರಿಯ ಸದಸ್ಯರಾದ ಶ್ರೀಮತಿ ರೂಮಾ ಅಯ್ಯಂಗಾರ್ ಹಾಗೂಶ್ರೀಮತಿ ವಿಜಯಾ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.ಹೊಸಬದುಕು ಸಂಸ್ಥೆಗೆ ದೇಣಿಗೆ ನೀಡಲಾಗಿದ್ದು, ಸಂಸ್ಥೆಯ ಪರವಾಗಿ ವಿನಯಚಂದ್ರ ಅವರನ್ನು ಸನ್ಮಾನಿಸಲಾಯಿತು.ಸಿಟಿ ಆಸ್ಪತ್ರೆಯ ಸಲಹಾ ತಜ್ಞೆ ಡಾ. ಇಂದಿರಾ ಶಾನಭಾಗ ಮುಖ್ಯ ಅತಿಥಿಯಾಗಿದ್ದರು.

ಉಪಾಧ್ಯಕ್ಷೆ ಶ್ರೀಮತಿ ದೀಪಾ ಭಂಡಾರಿ ಹಾಗೂ ಜಂಟಿ ಕಾರ್ಯದರ್ಶಿ ಶ್ರೀಮತಿ ಶಾರ್ಲೆಟ್ ವರ್ಗೀಸ್ ಉಪಸ್ಥಿತರಿದ್ದರು.ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ವೈಜಯಂತಿ ಕಾಮತ್ ಸ್ವಾಗತಿಸಿದರು. ಶ್ರೀಮತಿ ಸಾಧನಾ ಮಲ್ಯ ಕಾರ್ಯಕ್ರಮ ನಿರೂಪಿಸಿದರು. ಡಾ. ಸೋನಾಲಿ ಚಿತ್ತೋಡ್ಕರ್ ವಂದನಾರ್ಪಣೆ ಸಲ್ಲಿಸಿದರು.

Related posts

ಮಂತ್ರಾಲಯದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತ: ಮಂಗಳೂರು ಹಾಪ್ ಕಾಮ್ಸ್ ಸಿಇಒ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ದುರ್ಮರಣ;

Voiceoftulunadu

ಮೀನುಗಾರಿಕಾ ಋತು ಆರಂಭ ಹಿನ್ನೆಲೆ ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ:ಬಂದರಿನ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ ಶಾಸಕ ಯಶ್ಪಾಲ್;

Voiceoftulunadu

ಜೈನಕಾಶಿ ಮೂಡುಬಿದಿರೆಯ 18 ಬಸದಿಗಳಲ್ಲಿ ನಾಗರ ಪಂಚಮಿ ಆಚರಣೆ ;

Voiceoftulunadu

Leave a Comment