ವರದಿ /ಚಿತ್ರ: ದಿತೇಶ್ ಮಂಗಳೂರು
ಮಂಗಳೂರು/ಅಜ್ಞಾನ್: 1997 ರಲ್ಲಿ ಡಾ. ತುಂಬೆ ಮೊಯ್ದಿನ್ ಅವರ ನೇತೃತ್ವದಲ್ಲಿ ಆರಂಭಗೊಂಡ ತುಂಬೆ ಗ್ರೂಪ್ ಯುನೈಟೆಡ್ ಅರಬ್ ಎಮಿರೇ ಟ್ಸ್‌ನಲ್ಲಿ(ಯುಎಇ) 30ನೇ ವರ್ಷಕ್ಕೆ ಕಾಲಿಟ್ಟಿದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರ ದಲ್ಲಿ ಸಣ್ಣ ಹೆಜ್ಜೆಯೊಂದಿಗೆ ಆರಂಭಗೊಂಡ ಸಂಸ್ಥೆ ಇಂದು ಶಿಕ್ಷಣ, ಆರೋಗ್ಯ ಸೇವೆ, ಸಂಶೋಧನೆ ಸೇರಿ ದಂತೆ 15ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ವೈವಿಧ್ಯಮಯ ಸಮೂಹವಾಗಿ ಬೆಳೆದಿದೆ.
ಅಚ್ಚಾನ್ ಆಡಳಿತ ಕುಟುಂಬದ ಆಹ್ವಾನದ ಮೇರೆಗೆ ಡಾ. ಮೊದ್ದೀನ್ ಅವರು ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಮೂಲಕ ಯುಎಇಯಲ್ಲಿ ಹೊಸ ಅಧ್ಯಾಯ ಆರಂಭಿಸಿದರು. 1998ರಲ್ಲಿ ಆರಂಭಗೊಂಡ ಗಲ್ಫ್ ಮೆಡಿಕಲ್ ಕಾಲೇಜು ಬಳಿಕ ಗಲ್ಫ್ ಮೆಡಿಕಲ್ ಯೂನಿ ವರ್ಸಿಟಿ (GMU)ಯಾಗಿ ವಿಸ್ತಾರ ಗೊಂಡಿದ್ದು, ಇಂದು ಗಲ್ಫ್ ಪ್ರದೇಶದ ಪ್ರಮುಖ ಖಾಸಗಿ ವೈದ್ಯಕೀಯ ವಿಶ್ವ ವಿದ್ಯಾಲಯಗಳಲ್ಲಿ ಒಂದಾಗಿದೆ.
‘GMUನಲ್ಲಿ ಏಳು ಕಾಲೇಜುಗಳು ಹಾಗೂ 50ಕ್ಕೂ ಅಧಿಕ ಮಾನ್ಯತೆ ಪಡೆದ ಶೈಕ್ಷಣಿಕ ಕಾರ್ಯಕ್ರಮಗಳಿದ್ದು, 111ಕ್ಕೂ ಅಧಿಕ ದೇಶಗಳ ಸುಮಾರು 5,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 70ಕ್ಕೂ ಅಧಿಕ ಅಂತಾ ರಾಷ್ಟ್ರೀಯ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳೊಂದಿಗೆ ಶೈಕ್ಷಣಿಕ ಹಾಗೂ ಸಂಶೋಧನಾ ಸಹಯೋಗಸಂಶೋಧನಾ ಅನುದಾನಕ್ಕಾಗಿ ಪ್ರತಿವರ್ಷ ಸುಮಾರು 1 ಕೋಟಿ ದಿರ್ಹಂ ಹೂಡಿಕೆ ಮಾಡಲಾಗುತ್ತಿದೆ.
‘1.9 ಕೋಟಿ ರೋಗಿಗಳಿಗೆ ಚಿಕಿತ್ಸೆ ತುಂಬೆ ಗ್ರೂಪ್‌ನ ಆರೋಗ್ಯ ಸೇವಾ ಜಾಲವು ಶೈಕ್ಷಣಿಕ ಆಸ್ಪತ್ರೆಗಳು, ಕ್ಲಿನಿಕ್ ಗಳು, ವೈದ್ಯಕೀಯ ಕೇಂದ್ರಗಳು, ರೋಗನಿರ್ಣಯ ಪ್ರಯೋಗಾಲ ಯಗಳು ಹಾಗೂ ಔಷಧಾಲಯ ಗಳನ್ನು ಒಳಗೊಂಡಿದೆ.
ಈವರೆಗೆ 175 ರಾಷ್ಟ್ರಗಳ 19 ಕೋಟಿಗೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, 1 ಲಕ್ಷಕ್ಕೂ ಹೆಚ್ಚು ಹೆರಿಗೆಗಳು ನಡೆ ದಿವೆ. ಅಚ್ಚಾನ್‌ನ ಆಲ್ ಜುರ್ಫ್ ನಲ್ಲಿರುವ 25 ಎಕರೆ ಪ್ರದೇಶದ ತುಂಬೆ ಮೆಡಿಸಿಟಿ ಸಮಗ್ರ ವೈದ್ಯಕೀಯ ಮತ್ತುಹೊಂದಿದೆ.ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದೆ.
ಇಲ್ಲಿ 350 ಹಾಸಿಗೆಗಳ ತುಂಬೆ ಯೂನಿವರ್ಸಿಟಿ ಆಸ್ಪತ್ರೆ, ತುಂಬೆ ಡೆಂಟಲ್ ಆಸ್ಪತ್ರೆ ಹಾಗೂ ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿ ಟೇಶನ್ ಆಸ್ಪತ್ರೆಗಳು ಕಾರ್ಯನಿರ್ವಹಿ ಸುತ್ತಿವೆ. ಪ್ರತಿದಿನ ಸುಮಾರು 15,000 ಮಂದಿ ಈ ಸಮಗ್ರ ಕೇಂದ್ರಕ್ಕೆ ಭೇಟಿನೀಡುತ್ತಾರೆ.
ಹೊಸ ಯೋಜನೆಗಳಿಗೆ ಚಾಲನೆ ಕಳೆದ ಒಂದು ವರ್ಷದಲ್ಲಿ ಶಾರ್ಜಾ ಹೆಲ್ತ್ಕೇರ್ ಸಿಟಿಯಲ್ಲಿ 120 ಹಾಸಿ ಗೆಗಳ ಮನೋವೈದ್ಯಕೀಯ ಮತ್ತು ಪುನರ್ವಸತಿ ಆಸ್ಪತ್ರೆ, ತುಂಬೆ ಮೆಡಿಸಿಟಿ ಯಲ್ಲಿ ತುಂಬೆ ವೆಟರ್ನರಿ ಟೀಚಿಂಗ್ ಆಸ್ಪತ್ರೆ ಮತ್ತು ತುಂಬೆ ಕಾಲೇಜ್ ಆಫ್ ವೆಟರ್ನರಿ ಮೆಡಿಸಿನ್ ಹಾಗೂ ತುಂಬಿ ಇಂಟರ್ ನ್ಯಾಷನಲ್ ರಿಸರ್ಚ್ ಸೆಂಟ ರ್‌ಗೆ ಶಿಲಾನ್ಯಾಸ ನೆರವೇರಿಸಲಾಗಿದೆ.
ತುಂಬೆ ಮೆಡಿಸಿಟಿ ದುಬೈ ಮುಂದಿನ ಪ್ರಮುಖ ಯೋಜನೆಯಾಗಿದ್ದು, ಸುಮಾರು 1,000 ಉದ್ಯೋಗಾವಕಾಶ ಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಸಿಟ್ಟ ರ್ಲೆಂಡ್ನ ಜೆನೀವಾ ಕಾಲೇಜ್ ಆಫ್ ಲಾಂಜಿವಿಟಿ ಸೈನ್ಸ್ ಸಹಯೋಗದಲ್ಲಿ ಯುಎಇಯಲ್ಲಿ ಮೊದಲ ಬಾರಿಗೆ ದೀರ್ಘಾಯುಷ್ಯ ವೈದ್ಯಕೀಯ ಕ್ಷೇತ್ರದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸುವುದಾಗಿ ಸಂಸ್ಥೆ ಘೋಷಿ ಸಿದೆ.
ಡಾ. ತುಂಬೆ ಮೊದ್ದೀನ್ ಹಲವು ಗೌರವತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದಿನ್ ಅವರಿಗೆ 2024ರ ಅಕ್ಟೋಬರ್ ನಲ್ಲಿ ಕರ್ನಾಟಕದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
2026ರ ಜನವರಿಯಲ್ಲಿ ಅಕಾಡೆಮಿ ಆಫ್ ಜನರಲ್ ಎಜು ಕೇಶನ್, ಮಣಿಪಾಲ ಹಾಗೂ ಮಣಿ ಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ಜಂಟಿ ಯಾಗಿ ನ್ಯೂ ಇಯರ್ ಅವಾರ್ಡ್ ಪ್ರದಾನ ಮಾಡಲಾಗಿದೆ. ಮೂರು ಖಂಡಗಳ ವಿಶ್ವವಿದ್ಯಾಲಯಗಳಿಂದ ಐದು ಗೌರವ ಡಾಕ್ಟರೇಟ್ಗಳನ್ನೂ ಅವರು ಪಡೆದಿದ್ದಾರೆ.1997ರಲ್ಲಿ ಆರಂಭಗೊಂಡ ಸಂಸ್ಥೆ ಇಂದು ಯುನೈಟೆಡ್ ಅರಬ್ ಎಮಿ ರೇಟ್ಸ್ನ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆ ದಿದೆ. ನಾವೀನ್ಯತೆಯ ಮೂಲಕ ಬೆಳ ವಣಿಗೆ ಎಂಬುದು ಸಂಸ್ಥೆಯ ಮುಂದಿನ ಪಯಣದ ಮಾರ್ಗದರ್ಶಕ ತತ್ವವಾ ಗಿದೆ ಎಂದು ಡಾ. ತುಂಬೆ ಮೊದ್ದೀನ್ ಹೇಳಿದ್ದಾರೆ.
