September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ರೋಟರಿ ಸಂಸ್ಥೆಯು ಸಮಾಜಕ್ಕೆ ಸೇವೆ ನೀಡುವ ಮಾದರಿ ಸಂಸ್ಥೆ : ರೋಟರಿ ಜಿಲ್ಲಾ ಗವರ್ನರ್ ಬಿ.ಎಂ. ಭಟ್ ಪಡುಬಿದ್ರಿ ಸಹಕಾರಿ ಸಂಸ್ಥೆಯ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿ;

ವರದಿ/ ಚಿತ್ರ: ಈ ಮೀಡಿಯಾ

ಪಡುಬಿದ್ರಿ : ರೋಟರಿ ಸಂಸ್ಥೆಯು ಸ್ವಹಿತ ಮೀರಿದ ಸೇವೆಯನ್ನು ಸಮಾಜಕ್ಕೆ ನೀಡುವ ಮೂಲಕ ಮಾದರಿ ಸಂಸ್ಥೆಯಾಗಿದೆ. ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆಯಂತಹ ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು 3182 ರೋಟರಿ ಜಿಲ್ಲಾ ಗವರ್ನರ್ ಬಿ.ಎಂ. ಭಟ್ ಹೇಳಿದರು.ಅವರು ಭಾನುವಾರ ಪಡುಬಿದ್ರಿ ರೋಟರಿ ಕ್ಲಬ್ ಗೆ ಆಗಮಿಸಿದ ಸಂದರ್ಭಜರಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ರೋಟರಿ 3182 ಜಿಲ್ಲೆಯಲ್ಲಿ ನಾಲ್ಕು ಕಂದಾಯ ಜಿಲ್ಲೆಗಳ ವ್ಯಾಪ್ತಿಯಲ್ಲಿ 90 ರೋಟರಿ ಕ್ಲಬ್ ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಕ್ಲಬ್ ಮೂಲಕವೂ ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸ್ತುತಸಾಲಿನಲ್ಲಿ ರೋಟರಿ ಫೌಂಡೇಶನ್ ಗ್ಲೋಬಲ್ ಗ್ರಾಂಟ್ ಯೋಜನೆಯಡಿ ₹37 ಲಕ್ಷ ಮೊತ್ತವನ್ನು 16 ವಿಶೇಷ ಚೇತನ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ರೋಟರಿ ಜಿಲ್ಲೆಯ ವತಿಯಿಂದ ರಸ್ತೆ ಸುರಕ್ಷತೆ, ಬಾಲವಿಕಾಸ, ವಿಶೇಷ ಚೇತನರ ಸಬಲೀಕರಣ, ಪರಿಸರ ಸ್ವಚ್ಛತೆ ಹಾಗೂ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಪಡುಬಿದ್ರಿ ರೋಟರಿ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡುತ್ತಿರುವ ರೋಟರಿ, ಹೆಜಮಾಡಿ ಕೋಡಿ ವಿದ್ಯಾ ಪ್ರಸಾರ ವಿದ್ಯಾಮಂದಿರ ಶಾಲೆಗೆ ಶುದ್ಧ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಿದೆ.

ಶಾಲಾ-ಕಾಲೇಜುಗಳಲ್ಲಿ ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ರಸ್ತೆ ಸುರಕ್ಷತೆ ಹಾಗೂ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಡಿಸೆಂಬರಿನಲ್ಲಿ ನಡೆಯಲಿರುವ ರೋಟರಿ ಸಪ್ತಾಹದ ಅಂಗವಾಗಿ ವಿವಿಧ ಸಮಾಜಮುಖಿ ಹಾಗೂ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಹಾಯಕ ಗವರ್ನರ್ ಸುರೇಶ್ ನಾಯಕ್, ಪೂರ್ವ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ ಉಚ್ಚಿಲ ಹಾಗೂ ಪಡುಬಿದ್ರಿ ರೋಟರಿ ಕಾರ್ಯದರ್ಶಿ ಕಾರ್ತಿಕ್ ಮಟ್ಟು ಉಪಸ್ಥಿತರಿದ್ದರು.

Related posts

ರೋಟರಿ ಕ್ಲಬ್ ಕಲ್ಯಾಣಪುರ ವತಿಯಿಂದ ಪರೀಕ್ಷಾ ಪೂರ್ವ ತಯಾರಿಯ ಉಪನ್ಯಾಸ ಕಾರ್ಯಕ್ರಮ: ವಿನಯ ಕುಮಾ‌ರ್ ಕಬ್ಬಾಡಿ ಅವರಿಂದ “ಮೊಬೈಲ್ ಬಿಡಿ ಪುಸ್ತಕ ಹಿಡಿ” ಎಂಬ ವಿಷಯದ ಕುರಿತು ಮಾಹಿತಿ ;

Voiceoftulunadu

ಸೀತಾರಾಮನ್ ಭೇಟಿ ;ದೇವಳದ ಆವರಣದಲ್ಲಿ ಸಸಿ ನೆಟ್ಟ ಸಚಿವೆ ನಿರ್ಮಲಾ ಸೀತಾರಾಮನ್

voiceoftulunadu

ಜೈನಕಾಶಿ ಮೂಡುಬಿದಿರೆಯ 18 ಬಸದಿಗಳಲ್ಲಿ ನಾಗರ ಪಂಚಮಿ ಆಚರಣೆ ;

Voiceoftulunadu

Leave a Comment