28.5 C
ಮಂಗಳೂರು
September 4, 2026
Uncategorizedರಾಜ್ಯ/ದೇಶವಾಣಿಜ್ಯ

ವಲ್ಸಾಡ್–ವೇಲಂಕಣಿ ನಡುವೆ ವಿಶೇಷ ರೈಲು ಸಂಚಾರ ಆರಂಭ;

ವರದಿ /ಚಿತ್ರ: ರೋನ್ಸ್ ಬಂಟ್ವಾಳ್

ಮುಂಬೈ, ಜು. 01: ಪ್ರಯಾಣಿಕರ ಬೇಡಿಕೆಯನ್ನು ಮನಗಂಡ ಪಶ್ಚಿಮ ರೈಲ್ವೆಯು ವಲ್ಸಾಡ್–ವೇಲಂಕಣಿ ವಿಶೇಷ ರೈಲು ಸಂಚಾರ ಆರಂಭಿಸಿದೆ. ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ವಿಶೇಷ ರೈಲುಗಳನ್ನು “Train on Demand” ಸೇವೆಯಡಿ ಎರಡು ಟ್ರಿಪ್‌ಗಳಲ್ಲಿ ಓಡಿಸಲಾಗುತ್ತಿದೆ.

ಗುಜರಾತಿನ ವಲ್ಸಾಡ್ ಹಾಗೂ ತಮಿಳುನಾಡಿನ ಪ್ರಸಿದ್ಧ ತೀರ್ಥಕ್ಷೇತ್ರ ವೇಲಂಕಣಿ ನಡುವೆ ಈ ವಿಶೇಷ ರೈಲು ಸಂಚರಿಸಲಿದೆ.ರೈಲು ಸಂಖ್ಯೆ 09030 (ವಲ್ಸಾಡ್–ವೇಲಂಕಣಿ ವಿಶೇಷ ರೈಲು):03-07-2026 (ಶುಕ್ರವಾರ) ಸಂಜೆ 6:25ಕ್ಕೆ ವಲ್ಸಾಡ್‌ನಿಂದ ಹೊರಡಲಿದೆ.04-07-2026 (ಶನಿವಾರ) ಬೆಳಿಗ್ಗೆ 10:00ಕ್ಕೆ ವೇಲಂಕಣಿ ತಲುಪಲಿದೆ.ರೈಲು ಸಂಖ್ಯೆ 09029 (ವೇಲಂಕಣಿ–ದಹಾನು ರೋಡ್ ವಿಶೇಷ ರೈಲು):06-07-2026 (ಸೋಮವಾರ ಮಧ್ಯರಾತ್ರಿ 12:30ಕ್ಕೆ) ವೇಲಂಕಣಿಯಿಂದ ಹೊರಡಲಿದೆ.

07-07-2026 ಬೆಳಿಗ್ಗೆ 10:30ಕ್ಕೆ ದಹಾನು ರೋಡ್ ತಲುಪಲಿದೆ.ಈ ರೈಲಿನಲ್ಲಿ ಒಟ್ಟು 22 ಬೋಗಿಗಳಿದ್ದು, ಅವುಗಳಲ್ಲಿ:20 ಸ್ಲೀಪರ್ ಕ್ಲಾಸ್ (ಎಸ್‌ಸಿಎನ್) ಬೋಗಿಗಳು2 ಎಸ್‌ಎಲ್‌ಆರ್/ಡಿ ಬೋಗಿಗಳುಈ ರೈಲು ದಹಾನು ರೋಡ್, ಪಾಲ್ಘರ್, ವಸಾಯಿ ರೋಡ್, ಪನ್ವೇಲ್, ಲೋಣಾವಾಲಾ, ಪುಣೆ, ದೌಂಡ್, ಸೊಲ್ಲಾಪುರ, ಕಲಬುರಗಿ, ವಾಡಿ, ಯಾದಗಿರಿ, ಕೃಷ್ಣ, ರಾಯಚೂರು, ಮಂತ್ರಾಲಯಂ ರೋಡ್, ಆದೋನಿ, ಗುಂಟಕಲ್, ತಾಡಿಪತ್ರಿ, ಯೆರಗుంట್ಲ, ಕಡಪ, ರೇಣಿಗುಂಟ, ಕಾಟ್ಪಾಡಿ, ವೇಲೂರು, ತಿರುವಣ್ಣಾಮಲೈ, ವಿಲ್ಲುಪುರಂ, ಚಿದಂಬರಂ, ಮಯಿಲಾಡುತುರೈ, ತಿರುವಾರೂರು, ಕಾರೈಕಲ್, ನಾಗೂರು ಹಾಗೂ ನಾಗಪಟ್ಟಣಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ (Reservation) ಹಾಗೂ ಹೆಚ್ಚಿನ ಮಾಹಿತಿಗಾಗಿ IRCTC/NTES ವ್ಯವಸ್ಥೆ ಅಥವಾ ಸಮೀಪದ ರೈಲ್ವೆ ವಿಚಾರಣಾ ಕೇಂದ್ರವನ್ನು ಸಂಪರ್ಕಿಸಬಹುದು.

Related posts

ಉಡುಪಿ ಮಲಬಾರ್ ಗೋಲ್ಡ್ ನಲ್ಲಿ ” ನುವಾ” ವಜ್ರಾಭರಣ ಅನಾವರಣ: ವಜ್ರಾಭರಣ ಅನಾವರಣಗೊಳಿಸಿದ ರೂಪದರ್ಶಿಗಳಾದ ನಿಧಿ, ಅನುಷಾ, ನಿಹಾರಿಕಾ ಶೆಟ್ಟಿ, ಶ್ರಾವ್ಯ;

Voiceoftulunadu

ರಾಮಮಂದಿರ ಹುಂಡಿ ಕಳ್ಳತನ ಎಫೆಕ್ಟ್‌, ರಾಜ್ಯದ ಎಲ್ಲಾ ಮುಜುರಾಯಿ ದೇಗುಲದ ಇಂಚಿಚೂ ಸಿಸಿಟಿವಿ ಅಳವಡಿಕೆಗೆ ಆದೇಶ;

Voiceoftulunadu

ಪುತ್ತೂರು ವಲಯ ಸಂಚಾಲಕರಾಗಿ ಮನೋಹರ ರೈ, ಮನವಳಿಕೆ ಗುತ್ತು, ನೇಮಕ ;

Voiceoftulunadu

Leave a Comment