28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಶೈಕ್ಷಣಿಕ ಶ್ರೇಷ್ಠತೆಗೆ ರಯಾನ್ ಇಂಟರ್‌ನ್ಯಾಷನಲ್ ಶಾಲೆಗೆ ರಾಷ್ಟ್ರೀಯ ಗೌರವ;

ವರದಿ/ ಚಿತ್ರ :ರೋನ್ಸ್ ಬಂಟ್ವಾಳ್

ಮುಂಬಯಿ, ಜು.30: ದೇಶದ ಪ್ರತಿಷ್ಠಿತ “ಎಜ್ಯುಕೇಶನ್ ಎಕ್ಸಲೆನ್ಸ್ ಎಂಪವರಿಂಗ್ ಇಂಡಿಯಾ ಅವಾರ್ಡ್ 2026” ಪ್ರಶಸ್ತಿಯ ನಾಲ್ಕನೇ ಆವೃತ್ತಿಯ ಪುರಸ್ಕಾರ ಪ್ರದಾನ ಕಾರ್ಯಕ್ರಮ ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದ ವಿಜೇತ ಶಾಲೆಯಾಗಿ ಮಲಾಡ್‌ನ ರಾಯಾನ್ ಇಂಟರ್‌ನ್ಯಾಷನಲ್ ಸ್ಕೂಲ್ (ಐಸಿಎಸ್‌ಇ /ಐಎಸ್‌ಸಿ) ಆಯ್ಕೆಯಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಹೆಮ್ಮೆಯ ಸಾಧನೆಯನ್ನು ದಾಖಲಿಸಿದೆ.

ನವದೆಹಲಿದಲ್ಲಿ ಕಳೆದ ಮಂಗಳವಾರ ನಡೆದ ಭವ್ಯ ಸಮಾರಂಭದಲ್ಲಿ ಭಾರತದ ಕೇಂದ್ರ ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ ಡಾ। ಸುಕಾಂತ ಮಜುಂದಾರ್ ಅವರು ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ನಿರ್ದೇಶಕಿ ಡಾ| ಸ್ನೇಹಲ್ ಪಿಂಟೊ ಅವರಿಗೆ ಪ್ರಶಸ್ತಿ ಫಲಕ ಪ್ರದಾನಿಸಿ ಅಭಿನಂದಿಸಿದ ರು.

ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಗುಣಮಟ್ಟದ ಸಾಧನೆ, ನವೀನ ಶೈಕ್ಷಣಿಕ ವಿಧಾನಗಳು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನೀಡಿದ ವಿಶೇಷ ಒತ್ತು ಹಾಗೂ ಶೈಕ್ಷಣಿಕ ನಾಯಕತ್ವದಲ್ಲಿ ಸಲ್ಲಿಸಿರುವ ಅತ್ಯುತ್ತಮ ಕೊಡುಗೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ರಯಾನ್ ಇಂಟರ್‌ನ್ಯಾಷನಲ್ ಶಾಲೆಗೆ ನೀಡಲಾಗಿದೆ.

ಈ ಗೌರವವು ಶಾಲೆಯ ನಿರಂತರ ಶೈಕ್ಷಣಿಕ ಉತ್ಕೃಷ್ಟತೆ, ಮೌಲ್ಯಾಧಾರಿತ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ನೀಡುತ್ತಿರುವ ಬದ್ಧತೆಗೆ ಸಂದ ರಾಷ್ಟ್ರೀಯ ಮನ್ನಣೆಯಾಗಿದೆ ಎಂದು ಡಾ| ಸ್ನೇಹಲ್ ಪಿಂಟೊ ತಿಳಿಸಿದರು.

Related posts

ಎರ್ಮಾಳು ಶ್ರೀನಿಧಿ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ: ಪಡುಬಿದ್ರಿ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಶ್ರೀಮತಿ ರಾಜಶ್ರೀ ಕಿಣಿ ಉಪಸ್ಥಿತಿ;

Voiceoftulunadu

ವಿದ್ಯಾ ಪ್ರಕಾಶ್‌ ಅಮ್ಮಣ್ಣಾಯರವರ ‘ಭಕ್ತಿ ಭಾವ ಲಹರಿ” ಗೀತಾ ಸಂಕಲನ ಬಿಡುಗಡೆ : ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಪು ತಾಲೂಕು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠ;

Voiceoftulunadu

ತುಳುನಾಡ ಸಾಂಸ್ಕೃತಿಕ ಪತ್ರಿಕೋದ್ಯಮದ ವಿಶಿಷ್ಟ ಧ್ವನಿ ಪರಮಾನಂದ ಸಾಲ್ಯಾನ್ ಇನ್ನಿಲ್ಲ;

Voiceoftulunadu

Leave a Comment