28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಶ್ರೀರಸ್ತು ಸೌಹಾರ್ದ ಸೊಸೈಟಿ ವತಿಯಿಂದ ಮಕ್ಕಳಿಗಾಗಿ ಸಹಕಾರ ಧ್ವಜ ಚಿತ್ರ ಬಿಡಿಸುವ ಸ್ಪರ್ಧೆ;

ವರದಿ/ ಚಿತ್ರ:ವಿನೋದ್ ಶೆಟ್ಟಿ ಉಡುಪಿ

ಉಡುಪಿ: ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯವು ಐದು ಯಶಸ್ವಿ ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಉಡುಪಿಯ ಶ್ರೀರಸ್ತು ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ವತಿಯಿಂದ ಮಕ್ಕಳಿಗಾಗಿ ಸಹಕಾರಿ ಧ್ವಜದ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಯಿತು.
ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ನಾಲ್ವರು ಪ್ರಥಮ ಹಾಗೂ ನಾಲ್ವರು ದ್ವಿತೀಯ ಸ್ಥಾನ ವಿಜೇತರನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು. ಅಲ್ಲದೆ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ನೆನಪಿನ ಉಡುಗೊರೆಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷರಾದ ಆರ್.ವಿ. ಕುಂದರ್ ವಹಿಸಿದ್ದರು. ಉದ್ಯಮಿ ಎಸ್.ಎನ್. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಹಕಾರ ಚಳವಳಿಯ ಮಹತ್ವ, ಸಹಕಾರ ಸಚಿವಾಲಯದ ಸಾಧನೆಗಳು ಹಾಗೂ ಸಹಕಾರಿ ಧ್ವಜದ ಇತಿಹಾಸ ಮತ್ತು ಅದರ ಸಂದೇಶವನ್ನು ಮಕ್ಕಳಿಗೆ ತಿಳಿಸಿದರು.
ಸ್ಪರ್ಧೆಗೆ ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿಯ ಕಲೆ ಮತ್ತು ಕರಕುಶಲ ಶಿಕ್ಷಕ ಅಂಕಿತ್ ಆರ್. ಪೂಜಾರಿ, ತುಳು ಮತ್ತು ಕನ್ನಡ ಸಾಹಿತಿ ಧರ್ಮದತ್ತ ದೆಂದೂರು ದಯಾನಂದ ಕೆ. ಶೆಟ್ಟಿ, ಸಾಹಿತಿ, ಪತ್ರಕರ್ತ ಹಾಗೂ ಸಿನಿ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.


ಕಾರ್ಯಕ್ರಮದಲ್ಲಿ ಮಹಾಲಕ್ಷ್ಮೀ ಬ್ಯಾಂಕ್, ಹೆಜಮಾಡಿ ಶಾಖೆಯ ಮೆನೇಜರ್ ನಾಗರಾಜ್, ಸೊಸೈಟಿಯ ಉಪಾಧ್ಯಕ್ಷ ಪ್ರಶಾಂತ್ ಎಸ್., ಪ್ರಧಾನ ವ್ಯವಸ್ಥಾಪಕಿ ಸರಿತ, ನಿರ್ದೇಶಕರಾದ ಅಶೋಕ್ ಶೇರಿಗಾರ್ (ಅಲೆವೂರು), ಮಾಧವ ಹಾಗೂ ವಿಶ್ವನಾಥ್ ನಾಯಕ್ ಉಪಸ್ಥಿತರಿದ್ದರು.
ಮೆನೇಜರ್ ದಿವ್ಯ ಸ್ವಾಗತಿಸಿ, ಚೈತ್ರ, ಪ್ರತೀಕ್ಷಾ, ಮತ್ತು ಅಶ್ಮಿತ ಕಾರ್ಯಕ್ರಮ ನಿರೂಪಿಸಿ, ಹರೀಶ್ ವಂದಿಸಿದರು.

Related posts

ಬಿಟ್‌ಕಾಯಿನ್ ಹಗರಣದಲ್ಲಿ ನಲಪಾಡ್ ಪಾಲುದಾರ; ಸ್ನೇಹಿತರ ಮೂಲಕ ಮುಂಬೈನಲ್ಲಿ ನಗದೀಕರಣ – SIT ಚಾರ್ಜ್‌ಶೀಟ್

voiceoftulunadu

ನಿಟ್ಟೆ ವಿ.ವಿ ಇನ್‌ಕ್ಯುಬೇಶನ್ ಸೆಂಟರ್‌ನ ನವೋದ್ಯಮಿಗಳಿಗೆ ರಾಷ್ಟ್ರೀಯ ಗೌರವ;

Voiceoftulunadu

ಕಪಸಮ -ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದಿಂದ ಪತ್ರಕರ್ತರ ದಿನಾಚರಣೆ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀಪ್ರಶಸ್ತಿ ಪ್ರದಾನ;

Voiceoftulunadu

Leave a Comment