28.5 C
ಮಂಗಳೂರು
September 4, 2026
ಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಹಿರಿಯ ಛಾಯಾ ಪತ್ರಕರ್ತ ಅಸ್ಟ್ರೋ ಮೋಹನ್ ಅವರಿಗೆ ಅಮೆರಿಕದ ಪ್ರತಿಷ್ಠಿತ ಪಿಪಿಎಸ್ಎ ಗೌರವ

ವರದಿ ಚಿತ್ರ: ಮಂಜುನಾಥ್ ಕಾಮತ್ ಉಡುಪಿ

ಹಿರಿಯ ಛಾಯಾ ಚಿತ್ರ ಪತ್ರಕರ್ತ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಅಸ್ಟ್ರೋ ಮೋಹನ್ ಅವರಿಗೆ ವಿಶ್ವದ ಅತ್ಯಂತ ಪ್ರತಿಷ್ಠಿತ ಛಾಯಾಗ್ರಹಣ ಸಂಸ್ಥೆಗಳಲ್ಲಿ ಒಂದಾದ ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕದ (ಪಿಎಸ್‌ಎ) ಪ್ರತಿಷ್ಠಿತ ಪಿಪಿಎಸ್ಎ (ಪ್ರೊಫಿಷಿಯನ್ಸಿ ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕಾ) ಗೌರವವನ್ನು ಪ್ರದಾನ ಮಾಡಲಾಗಿದೆ.

ವಿಶ್ವದಾದ್ಯಂತ ಪಿಎಸ್‌ಎ ಮಾನ್ಯತೆ ಪಡೆದ ಅಂತರರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನಗಳು ಹಾಗೂ ಸ್ಪರ್ಧೆಗಳಲ್ಲಿ ನಿರಂತರವಾಗಿ ಉತ್ಕೃಷ್ಟ ಸಾಧನೆ ಮತ್ತು ಗಮನಾರ್ಹ ಯಶಸ್ಸು ದಾಖಲಿಸಿರುವ ಛಾಯಾಗ್ರಾಹಕರಿಗೆ ಈ ಗೌರವವನ್ನು ನೀಡಲಾಗುತ್ತದೆ.

ಮೂರು ದಶಕಗಳಿಗೂ ಅಧಿಕ ಅವಧಿಯಿಂದ ಛಾಯಾ ಚಿತ್ರ ಪತ್ರಿಕೋದ್ಯಮ ಹಾಗೂ ದೃಶ್ಯ ಕಥನ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಅಸ್ಟ್ರೋ ಮೋಹನ್ ಅವರು ಕರ್ನಾಟಕದ ಹೆಸರಾಂತ ಛಾಯಾಗ್ರಾಹಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸಮಾಜದ ವಿವಿಧ ಆಯಾಮಗಳು, ಮಹತ್ವದ ಘಟನೆಗಳು, ಮಾನವೀಯ ಬದುಕಿನ ಸ್ಪಂದನೆಗಳು, ಸಂಸ್ಕೃತಿ, ಆಧ್ಯಾತ್ಮಿಕತೆ, ಕ್ರೀಡೆ ಹಾಗೂ ಸಾಮಾಜಿಕ ವಾಸ್ತವಗಳನ್ನು ತಮ್ಮ ಛಾಯಾಚಿತ್ರಗಳ ಮೂಲಕ ದಾಖಲಿಸಿರುವ ಅವರು, ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ಪ್ರಶಂಸೆ ಹಾಗೂ ಮಾನ್ಯತೆ ಗಳಿಸಿದ್ದಾರೆ.

Related posts

ಶ್ರೀವಿದ್ಯಾ ತಂತ್ರ ಸಾರ; ‘ಮೈಂಡ್ ಮೆಕ್ಯಾನಿಸಂ’ ಪ್ರಸ್ತುತ ಪಡಿಸುವ, ಶ್ರೀ ವಿದ್ಯಾ ತಂತ್ರ ಸಾರ | ಲೌಕಿಕ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ಲಲಿತಾ ತ್ರಿಪುರ ಸುಂದರಿ ಸಹಸ್ರನಾಮ ಪ್ರಯೋಗ :

voiceoftulunadu

ಉಡುಪಿ : ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮನೆಗೊಂದು ಗ್ರಂಥಾಲಯ10 ಗ್ರಂಥಾಲಯಗಳ ಅನುಷ್ಠಾನ ಕಾರ್ಯಕ್ರಮ;

Voiceoftulunadu

ಉಚಿತ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ, ಸಮಾನ ಮನಸ್ಕ ತಂಡ ಉಡುಪಿ ಸಹಯೋಗದ ಕಾರ್ಯಕ್ರಮ;

Voiceoftulunadu

Leave a Comment