ವರದಿ /ಚಿತ್ರ: ಈ ಮೀಡಿಯಾ
ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ವತಿಯಿಂದ ಎಂಆರ್ ಜಿ ಗ್ರೂಪ್ ಬೆಂಗಳೂರು ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 9ರಂದು ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಕೌನ್ಸೆಲಿಂಗ್, ಪ್ಲೇಸ್ಕೆಂಟ್ ಮತ್ತು ತರಬೇತಿ ವಿಭಾಗದ ಸಹಯೋಗದಲ್ಲಿ ಕುಂತಳನಗರ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಸನ್ ಸೆಂಟರ್ನಲ್ಲಿ ನಡೆಯಲಿರುವ 5ನೇ ಬೃಹತ್ ಉದ್ಯೋಗ ಮೇಳದ ಪೂರ್ವಭಾವಿ ಸಭೆ ಜರುಗಿತು.
ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಕೌನ್ಸೆಲಿಂಗ್, ಪ್ಲೇಸ್ಕೆಂಟ್ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಭರತ್ ಕುಮಾರ್ನೇತೃತ್ವದ ತಂಡವು ಸಂಘದ ಸ್ಕಿಲ್ ಡೆವಲಪ್ಟೆಂಟ್ ಕೇಂದ್ರಕ್ಕೆ ಭೇಟಿ ನೀಡಿ, ಉದ್ಯೋಗ ಮೇಳದ ಆಯೋಜನೆ, ಸಂಸ್ಥೆಗಳ ಭಾಗವಹಿಸುವಿಕೆ ಹಾಗೂ ಅಭ್ಯರ್ಥಿಗಳ ಸೌಲಭ್ಯಗಳ ಕುರಿತು ಆಯೋಜಕರೊಂದಿಗೆ ಸಮಾಲೋಚನೆ ನಡೆಸಿತು.
ಉಡುಪಿ ಗ್ರಾಮೀಣ ಬಂಟರ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, 5ನೇ ಬಾರಿಯ ಈ ಉದ್ಯೋಗ ಮೇಳವು ಗ್ರಾಮೀಣ ಯುವಜನತೆಗೆ ಒದಗಿಸುವ ಉದ್ಯೋಗಾವಕಾಶ ದೃಷ್ಟಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದವೇದಿಕೆಯಾಗಲಿದೆ ಎಂದರು.ಭರತ್ ಕುಮಾರ್ ಮಾತನಾಡಿ, ಈವರೆಗಿನ ಉದ್ಯೋಗ ಮೇಳಗಳ ಮೂಲಕ ಅಭ್ಯರ್ಥಿಗಳಿಗೆ ನಾನಾ ಒಳ್ಳೆಯ ಕಂಪನಿಗಳಲ್ಲಿ ಉದ್ಯೋಗ ಸಿಕ್ಕಿದೆ. ಈ ಬಾರಿಯೂ ಒಳ್ಳೆಯ ಕಂಪನಿಗಳು ಬರುವ ರೀತಿಯಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ಟ್ರಸ್ಟ್ ಕೋಶಾಧಿಕಾರಿ ವಿಜಿತ್ ಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ಪದ್ಮನಾಭ ಹೆಗ್ಡೆ ಮತ್ತು ರಂಜನಿ ಹೆಗ್ಡೆ, ನಿಟ್ಟೆ ಎಂಜಿನಿಯರಿಂಗ್ ಕಾಲೇಜು ಟೀಮ್ ಸದಸ್ಯರು ಸಮಾಲೋಚನೆಯಲ್ಲಿ ಭಾಗವಹಿಸಿದ್ದರು.
