November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸ

ಉಡುಪಿ ಪತಂಜಲಿ ಯೋಗ ಸಮಿತಿ, ಶ್ರೀ ಪುತ್ತಿಗೆ ಮಠದ ಸಹಭಾಗಿತ್ವದಲ್ಲಿ ಸ್ವಚ್ಛ ಭಾರತ್‌ ಅಭಿಯಾನ : ಗೀತಾ ಮಂದಿರ, ರಾಜಾಂಗಣ ಹಾಗೂ ಪತಂಜಲಿ ಕಾರ್ಯಾಲಯದ ಪರಿಸರದಲ್ಲಿ ಅಭಿಯಾನ;

ಉಡುಪಿ: ಜಯಂತಿ ಪ್ರಯುಕ್ತ ಪತಂಜಲಿ ಯೋಗ ಸಮಿತಿ, ಉಡುಪಿ ಹಾಗೂ ಶ್ರೀ ಪುತ್ತಿಗೆ ಮಠದ ಸಹಭಾಗಿತ್ವದಲ್ಲಿ ಗೀತಾ ಮಂದಿರ, ರಾಜಾಂಗಣ ಹಾಗೂ ಪತಂಜಲಿ ಕಾರ್ಯಾಲಯದ ಪರಿಸರದಲ್ಲಿ ಸ್ವಚ್ಛ ಭಾರತ್ ಅಭಿಯಾನ ನಡೆಯಿತು.ಶ್ರೀ ಪುತ್ತಿಗೆ ಮಠದ ದಿವಾನರಾದ ಆಚಾರ್ಯರವರು ನಾಗರಾಜ ದೀಪ ಪ್ರಜ್ವಲಿಸಿ, ತುಳಸಿ ಗಿಡ ನೆಟ್ಟು ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ತಮ್ಮ ಸಂದೇಶದಲ್ಲಿ ಅವರು, ಸ್ವಚ್ಛ ಭಾರತ ಅಭಿಯಾನವು ಒಂದೇ ದಿನಕ್ಕೆ ಮೀಸಲಾಗದೆ, ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕಾರ್ಯದಲ್ಲಿನೀಡಿದರು. ತೊಡಗಿಸಿಕೊಳ್ಳಬೇಕು ಎಂದು ಕರೆಕಾರ್ಯಕ್ರಮದಲ್ಲಿ ಪತಂಜಲಿ ರಾಜ್ಯ ಸಮಿತಿ ಸದಸ್ಯ ಕೆ. ರಾಘವೇಂದ್ರ ಭಟ್ ರವರು ಸ್ವಾಗತಿಸಿ ಪ್ರಸ್ತಾವನೆಗೈದರು.ಪತಂಜಲಿ ಯೋಗ ಸಮಿತಿ, ಉಡುಪಿಯು ಸತತ ಐದು ವರ್ಷಗಳಿಂದ ವಿವಿಧ ಕಕ್ಷೆಗಳಲ್ಲಿ ಪ್ರತಿ ತಿಂಗಳ ಪ್ರಥಮ ಭಾನುವಾರ ಕಕ್ಷೆಯ ಪರಿಸರ, ದೇವಸ್ಥಾನ, ಪಾರ್ಕಿಂಗ್ ಪ್ರದೇಶಗಳಲ್ಲಿ ಮಾಸಿಕ ಸ್ವಚ್ಛ ಭಾರತ್ ಅಭಿಯಾನ ನಡೆಸುತ್ತಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಭಾರತ್ ಸ್ವಾಭಿಮಾನ ಟ್ರಸ್ಟ ವೆಂಕಟೇಶ್ ಮೆಹಂದಲೆ, ಯುವ ಪ್ರಭಾರಿ ಜಗದೀಶ್ ಕುಮಾರ್, ಮೀಡಿಯಾ ಪ್ರಭಾರಿ ಹರಿಪ್ರಸಾದ್ ಕೆ.,ಮಹಿಳಾ ಪ್ರಭಾರಿ ಶ್ರೀಮತಿ ಲೀಲಾ ಆ‌ರ್. ಅಮೀನ್, ತಾಲೂಕು ಪ್ರಭಾರಿಗಳಾದ ನಾಗರಾಜ ಶೇಟ್, ಶ್ರೀಮತಿ ಶ್ಯಾಮಲಾ ಕೆ., ಗೌರವ ಸದಸ್ಯರಾದ ಸದಾಶಿವ ರಾವ್, ಜಿಲ್ಲಾ ಸಮಿತಿಯ ಶ್ರೀ ಗಿರೀಶ್, ಲಕ್ಷ್ಮಣ ಕಾಮತ್, ರೋಹಿತ್, ಸಂತೋಷ ಶೆಟ್ಟಿ, ರಾಜು ನಂಬಿಯಾರ್, ರೋಹಿತ್ ಬಲ್ಲಾಳ್, ವಿವಿಧ ಕಕ್ಷೆಗಳ ಮುಖ್ಯ ಯೋಗ ಶಿಕ್ಷಕರು ಹಾಗೂ ಯೋಗಾರ್ಥಿಗಳು ಉಪಸ್ಥಿತರಿದ್ದರು.ಮಠದ ವ್ಯವಸ್ಥಾಪನಾ ಸಮಿತಿಯ ಕಿರಣ್ ಜೀ ರವರು ಯೋಗಾರ್ಥಿಗಳೆಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಿದ್ದರು

Related posts

ಬಂಟಕಲ್ ತಾಂತ್ರಿಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಯೋಗೇಶ್ವರಿ ಬಿ. ಹೆಚ್. ಲೇಖನಬೆಳಗ್ಗಿನ ಪ್ರಾವೀಣ್ಯತೆ: ಯಶಸ್ಸಿನ ಶಿಸ್ತು;

Voiceoftulunadu

ಮಂಗಳೂರಿನಲ್ಲಿ ಶೈನ್ ಫೌಂಡೇಶನ್ ಆಯೋಜಿಸುತ್ತಿರುವ “ಡೀಪ್ ಟೆಕ್ ಇಗ್ನೈಟ್” ಎಂಬ ಬೂಟ್ ಕ್ಯಾಂಪ್ ನಲ್ಲಿ ಭಾಗವಹಿಸಲು ಸಂಸ್ಥೆ /ಸಂಸ್ಥಾನಗಳಿಗೆ ಆಹ್ವಾನ ;

Voiceoftulunadu

ಕಟಪಾಡಿ ಸಿ.ಎ. ಬ್ಯಾಂಕ್ ಎಜಿಎಂ ಅವರ ಮನೆಯಂಗಳದಲ್ಲಿ ಚಾಪೆ ನೇಜಿ : ಇನ್ನಂಜೆ ಅಜಿಲಕಾಡುವಿನ ರಮೇಶ್ ಪೂಜಾರಿಯವರಿಂದ 6 ಎಕರೆ ಗದ್ದೆಯಲ್ಲಿ ಚಾಪೆ ನೇಜಿ ನಾಟಿಯ ಕೃಷಿ ;

Voiceoftulunadu

Leave a Comment