September 4, 2026
Uncategorizedಕ್ರೈಮ್ಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ ಪೊಲೀಸರಿಂದ ರೌಡಿ ಶೀಟರ್ಗಳಾದ ಮನೋಜ್ ಕೋಡಿಕೆರೆ ಹಾಗೂ ಚೇತು ಪಡಿಲ್ ಸೆರೆ;

ವರದಿ / ಚಿತ್ರ : ಕುಂದೇಶ್ವರ ಬುಲೆಟಿನ್

ಉಡುಪಿ/ ಮಂಗಳೂರು : ಕೊಲೆ, ಕಿಡ್ನ್ಯಾಪ್, ಸುಲಿಗೆಯಂತಹ ಅಪರಾಧ ಕೃತ್ಯಗಳನ್ನೆಸಗಿ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಶೀಟರ್‌ಗಳು ಕಾನೂನಿನ ಬಲೆಗೆ ಬಿದ್ದಿದ್ದಾರೆ!ಸಾರ್ವಜನಿಕರು ನೀಡಿದ ಖಚಿತ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಉಡುಪಿ ಪೊಲೀಸರು, ಕರಾವಳಿ ಜಿಲ್ಲೆಗಳಲ್ಲಿ ದಿಗಿಲು ಹುಟ್ಟಿಸಿದ್ದ ಮನೋಜ್‌ ಕೊಡಿಕೆರೆ (ಅಲಿಯಾಸ್‌ ಮನೋಜ್‌ ಕುಲಾಲ್‌) ಮತ್ತು ಚೇತನ್‌ (ಅಲಿಯಾಸ್‌ ಚೇತು ಪಡೀಲ್‌) ಎಂಬ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿನಿಮೀಯ ಶೈಲಿಯ ಕಿಡ್ನ್ಯಾಪ್, ₹3 ಕೋಟಿಗೆ ಬೇಡಿಕೆ!ಕಳೆದ 2025ರ ನವೆಂಬರ್ 19 ರಂದು ಬ್ರಹ್ಮಾವರ ತಾಲೂಕಿನ ಹೋಟೆಲೊಂದರ ಮುಂಭಾಗದಿಂದ ಉದ್ಯಮಿ ಎನ್. ಮೋಹನದಾಸ್ ಶೆಟ್ಟಿ ಅವರ ಪುತ್ರ ತೇಜಸ್‌ನನ್ನು ಈ ಗ್ಯಾಂಗ್ ಸಿನಿಮೀಯ ಶೈಲಿಯಲ್ಲಿ ಅಪಹರಿಸಿತ್ತು. ಬಳಿಕ ಆತನ ಬಿಡುಗಡೆಗಾಗಿ ಬರೋಬ್ಬರಿ ₹3 ಕೋಟಿ ಹಣಕ್ಕೆ ಬೇಡಿಕೆಯಿಟ್ಟು ಬೆದರಿಕೆ ಹಾಕಿತ್ತು. ಈ ಭೀಕರ ಅಪರಾಧಕ್ಕೆ ಸಂಬಂಧಿಸಿ ಕೋಟ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೇರಿದಂತೆ ಕಠಿಣವಾದ ‘ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ’ (KCOCA) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಪೊಲೀಸರ ಕೈಗೆ ಸಿಗದೆ ಇಬ್ಬರೂ ಎಸ್ಕೇಪ್ ಆಗಿದ್ದರು.ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?ಆರೋಪಿಗಳ ಪತ್ತೆಗಾಗಿ ಉಡುಪಿ ಪೊಲೀಸರು ₹50,000 ಬಹುಮಾನ ಘೋಷಿಸಿದ್ದರು.ಸಾರ್ವಜನಿಕರಿಂದ

ಸಿಕ್ಕ ಮಹತ್ವದ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಏಪ್ರಿಲ್ 30 ರಂದು ಚೇತನ್‌ನನ್ನು ಹಾಗೂ ಗುರುವಾರ ಮನೋಜ್‌ನನ್ನು ಸೆರೆಹಿಡಿದಿದ್ದಾರೆ. “ಮಾಹಿತಿ ನೀಡಿದ ಇಬ್ಬರು ಧೈರ್ಯಶಾಲಿ ಸಾರ್ವಜನಿಕರಿಗೆ ಘೋಷಿತ ಬಹುಮಾನದ ಮೊತ್ತವನ್ನು ವಿತರಿಸಲಾಗಿದೆ,” ಎಂದು ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.ಇಬ್ಬರ ಮೇಲೂ ಇವೆ ಡಜನ್‌ಗೂ ಹೆಚ್ಚು ಕೇಸ್‌ಗಳು!ಬಂಧಿತರ ಕ್ರಿಮಿನಲ್ ಇತಿಹಾಸ ನೋಡಿದರೆ ಬೆಚ್ಚಿಬೀಳುವಂತಿದೆ:ಮನೋಜ್ ಕೊಡಿಕೆರೆ: ಈತನ ವಿರುದ್ಧ ಉಡುಪಿ ಮತ್ತು ಮಂಗಳೂರಿನಲ್ಲಿ 3 ಕೊಲೆ, 5 ಕೊಲೆ ಯತ್ನ, 10 ಹಲ್ಲೆ ಹಾಗೂ 1 ಅಪಹರಣ ಸೇರಿದಂತೆ ಒಟ್ಟು 19 ಗಂಭೀರ ಪ್ರಕರಣಗಳು ದಾಖಲಾಗಿವೆ.ಚೇತನ್ ಪಡೀಲ್: ಈತನ ಮೇಲೆ ಮಂಗಳೂರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 2 ಕೊಲೆ, 2 ಕೊಲೆ ಯತ್ನ, 6 ಹಲ್ಲೆ, 2 ಡ್ರಗ್ಸ್ ಸೇವನೆ ಹಾಗೂ 1 ಅಪಹರಣ ಸೇರಿದಂತೆ ಒಟ್ಟು 13 ಕ್ರಿಮಿನಲ್ ಪ್ರಕರಣಗಳು ಇವೆ.

Related posts

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ರಾಜ್ಯಮಟ್ಟದಲ್ಲಿ ಕಾಪು ಯೋಜನಾ ಕಚೇರಿಗೆ ದ್ವಿತೀಯ ಸ್ಥಾನ ಅಭಿನಂದನಾ ಪತ್ರ ಸ್ವೀಕರಿಸಿದ ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ;

Voiceoftulunadu

ಶ್ರೀ ನಾರಾಯಣ ಗುರುಗಳ ಸಂದೇಶ : ಅನ್ವರ್ ಅಲಿ ಕಾಪು ಅವರಿಂದ ವಿಶೇಷ ಲೇಖನ : ನಾರಾಯಣ ಗುರುಗಳ “ಒಂದು ಜಾತಿ, ಒಂದು ಧರ್ಮ, ಒಂದು ದೇವರು – ಮನುಷ್ಯನಿಗೆ”ಎಂಬ ಸಂದೇಶ ಸಕಾಲಿಕ ;

Voiceoftulunadu

ಕಾಪು ಹೊಸ ಮಾರಿಗುಡಿಗೆ ರಾಜ್ಯ ಸಮಗ್ರ ಶಿಕ್ಷಣ ಇಲಾಖಾ ಯೋಜನಾ ನಿರ್ದೇಶಕಿ ಡಾ. ವಿದ್ಯಾಕುಮಾರಿ ಭೇಟಿ: ವಿಶೇಷ ಪೂಜೆ ಸಲ್ಲಿಸಿ ಅನುಗ್ರಹ ಪ್ರಸಾದ ನೀಡಿದ ಮಾರಿಗುಡಿಯ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ;

Voiceoftulunadu

Leave a Comment