September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕಿನ್ನಿಗೋಳಿಯಲ್ಲಿ ರೋಡ್ ಹಂಪ್ಪೆ ಪೈಂಟ್ ಬಳಿದ ‘ಮೀಡಿಯಾ ಮನಸುಗಳು’ಯುವಕರ ವಿಶಿಷ್ಟ ಹೆಜ್ಜೆಗೆ ವಾಹನ ಸವಾರರು, ಸ್ಥಳೀಯರಿಂದ ಅಭಿನಂದನೆ ;

ಕಿನ್ನಿಗೋಳಿ: ರಾತ್ರಿ ವೇಳೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ರಸ್ತೆ ಹಂಪ್ಸ್ ಗಳಿಗೆ ಬಣ್ಣ ಬಳಿಯುವ ಮೂಲಕ ‘ಮೀಡಿಯಾ ಮನಸುಗಳು’ ತಂಡವು ಅಪಘಾತ ತಡೆಯುವ ಮಹತ್ವದ ಕಾರ್ಯ ಕೈಗೊಂಡಿದ್ದು ಸಾರ್ವತ್ರಿಕ ಶ್ಲಾಘನೆ ವ್ಯಕ್ತವಾಗಿದೆ.ಕಿನ್ನಿಗೋಳಿ ಸೈಂಟ್ ಮೇರಿ ಶಿಕ್ಷಣ ಸಂಸ್ಥೆಗಳು, ಕಾನ್ಸೆಟ್ಟ ಆಸ್ಪತ್ರೆ ಹಾಗೂ ಚರ್ಚ್ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿದ್ದ ರಸ್ತೆ ಉಬ್ಬು ತಗ್ಗು ಬಣ್ಣ ಮಾಸಿಹೋಗಿತ್ತು.

ಇದರಿಂದಾಗಿ ತಡರಾತ್ರಿ ಸಂಚರಿಸುವ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಸವಾರರಿಗೆ ರಸ್ತೆ ಗೋಚರಿಸದೆ ಹಲವಾರು ದ್ವಿಚಕ್ರ ವಾಹನ ಸವಾರರು ಮುಗುಚಿ ಬಿದ್ದು ಗಾಯಗೊಂಡಿದ್ದಾರೆ.ಸಮಸ್ಯೆಯ ಗಂಭೀರತೆಯನ್ನು ಅರಿತ ‘ಮೀಡಿಯಾ ಮನಸುಗಳು’ ತಂಡದ ಸದಸ್ಯರು ತಡರಾತ್ರಿ ಸ್ಥಳಕ್ಕೆ ಆಗಮಿಸಿ, ಹಂಪ್ಪಳಿಗೆ ಬಿಳಿ ಬಣ್ಣ ಬಳಿಯುವ ಕಾರ್ಯಾಚರಣೆ ನಡೆಸಿದರು.

ತಂಡದ ಈ ತುರ್ತು ಸ್ಪಂದನೆಯಿಂದಾಗಿ ಸವಾರರಿಗೆ ಎದುರಾಗಿದ್ದ ದೊಡ್ಡ ಕಂಟಕವೊಂದು ದೂರವಾದಂತಾಗಿದೆ.ಈ ಶ್ರಮದಾನದಲ್ಲಿ ‘ಮೀಡಿಯಾ ಮನಸುಗಳು’ ತಂಡದ ಮುಖಂಡರಾದ ಶಶಿ ಬೆಳ್ಳಾಯರು, ಸಂದೇಶ್ ಶೆಟ್ಟಿ, ಶಿವು ಕುಲಾಲ್, ಮೋಹನ್ ಕುತ್ತಾರ್, ಗಿರೀಶ್ ಮಣೇಲ್ ಮತ್ತು ಹೆಚ್.ಟಿ. ಶಿವು ಕುಮಾರ್ ಭಾಗವಹಿಸಿ ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿಯಾದರು.

ಸಾರ್ವಜನಿಕ ಹಿತದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಶ್ರಮಿಸಿದ ಯುವಕರ ಈ ಕಾರ್ಯಕ್ಕೆ ಕಾರ್ನಾಡ್ ರಚನಾ ಎಂಟರ್ ಪ್ರೈಸಸ್ ಮಾಲಕರು ನೆರವು ನೀಡಿದ್ದಾರೆ. ವಾಹನ ಸವಾರರು ಹಾಗೂ ಸ್ಥಳೀಯರು ಧನ್ಯವಾದ ಅರ್ಪಿಸಿದ್ದಾರೆ.

Related posts

ಬೆಳೆ ವಿಮೆ ಅವಧಿ ವಿಸ್ತರಣೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ಜುಲೈ 15ರವರೆಗೆ ವಿಸ್ತರಿಸಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಿಬಹುದು;

Voiceoftulunadu

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಅಂತರರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವೋತ್ತಮ ಶೆಟ್ಟಿ ಆಯ್ಕೆ: ಶತಮಾನೋತ್ಸವದ ಹೊಸ್ತಿಲಲ್ಲಿ ತುಳುವ ನಾಗರಿಕತೆಯ ವೈಭವವನ್ನು ಮರುಸ್ಥಾಪಿಸುವ ಮಹಾಸಂಕಲ್ಪ;

Voiceoftulunadu

ದಕ್ಷಿಣ ಕನ್ನಡ ಜಿಲ್ಲಾ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿಯಾಗಿ ಈಥನ್ ರಫಾಯೆಲ್ ತೌರೊ ನೇಮಕ

Voiceoftulunadu

Leave a Comment