November 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ : ಜ. 20 ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆದ ಪ್ರಶ್ನಾ ಚಿಂತನೆ;

ವರದಿ/ ಚಿತ್ರ: ಈ ಮೀಡಿಯಾ

ಕೊಡವೂರು:ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜನವರಿ 20ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಶ್ರೀದೇವಳದಲ್ಲಿ ನಡೆಯಲಿರುವ ದುರಸ್ತಿ ಕಾರ್ಯಗಳು, ಪ್ರಾಯಶ್ಚಿತ ಕೆಲಸಗಳ ಸಲುವಾಗಿ ತಾಂಬೂಲ ಪ್ರಶ್ನಾ ಚಿಂತನೆ ಇಡಲಾಯಿತು.

ವಿದ್ವಾನ್ ಗೋಪಾಲ ಜೋಯಿಸರು, ದೇವಳದ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿ ಹಾಗೂ ಪುತ್ತೂರುವಾದಿರಾಜ ತಂತ್ರಿ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆಯನ್ನು ನೆರವೇರಿಸಿದರು.

ಪ್ರಾರಂಭದಿಂದ ಕೊನೆಯತನಕವು ಒಳ್ಳೆಯ ರಾಶಿ ಮೂಲಕ ಆಡಳಿತ ಮಂಡಳಿ ಕಾರ್ಯಗತ ಗೊಳಿಸುತ್ತಿರುವ ಕಾಮಗಾರಿಗಳಿಗೆ ದೇವರ ಅಪ್ಪಣೆ ಸಿಕ್ಕಿತು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು, ತೊಟ್ಟಂ ಮಧುಸೂದನ ತಂತ್ರಿ, ಪವಿತ್ರಪಾಣಿ ಜನಾರ್ದನ್ ಕೊಡವೂರು, ವ್ಯವಸ್ಥಾಪನಾ ಸಮಿತಿಸದಸ್ಯರಾದ ಸೀತಾರಾಮ ಆಚಾರ್ಯ, ವಾದಿರಾಜ ಸಾಲ್ಯಾನ್, ಭಾಸ್ಕರ್ ಪಾಲನ್, ಕೆ. ಬಾಬ, ಉಷಾ ಆನಂದ ಸುವರ್ಣ, ಶೀಲಾ ದೇವಾಡಿಗ, ಚಂದನ್ ಭಟ್, ಭಕ್ತವೃಂದ ಕಾರ್ಯದರ್ಶಿ ರಾಮ ಸೇರಿಗಾರ್, ಭಗವತಿ ಮಾರಿ ಅಮ್ಮ ಕಟ್ಟಡ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಟಿ., ಶಿವಪ್ಪ ಕಾಂಚನ್, ವಾಸುದೇವ ಉಪಾಧ್ಯ ಉಪಸ್ಥಿತರಿದ್ದರು.

Related posts

ಉಡುಪಿ ಶಾಸಕರಿಂದ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತು : ದೂರು ದಾಖಲು, ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿದ ಕಾಪು ಯುವ ಕಾಂಗ್ರೆಸ್ ವತಿಯಿಂದ ದೂರು;

Voiceoftulunadu

ಹೆಸರಾಂತ ಸಾಹಿತಿ, ಕಾದಂಬರಿಕಾರ, ವಿಜ್ಞಾನಿ, ಪತ್ರಕರ್ತ ಡಾ| ವ್ಯಾಸರಾಯ ನಿಂಜೂರು ನಿಧನ ;

Voiceoftulunadu

ಅರಮನೆಗಳ ನಗರ’ ಮೈಸೂರಿನ ಬದಲಾಗುತ್ತಿರುವ ಮೂಲಸೌಕರ್ಯ ಹಾಗೂ ‘ಪ್ರಕೃತಿಯ ಸ್ವರ್ಗದ’ ಮೇಲೆ ಅದರ ಪರಿಣಾಮ;

Voiceoftulunadu

Leave a Comment