ವರದಿ/ ಚಿತ್ರ :ವಿನೋದ್ ಶೆಟ್ಟಿ ಉಡುಪಿ

ಉಡುಪಿ : ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಜ್ಞಾನಜ್ಯೋತಿ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತಿಯ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ, ಶ್ರೀ ಶನೈಶ್ಚರ ಕ್ಷೇತ್ರ, ಬಳೆಗಾರಬೆಟ್ಟು, ಗುಂಡಿಬೈಲು, ಉಡುಪಿ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿವರ : ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತಿ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ
ದಿನಾಂಕ : 28-08-2026, ಶುಕ್ರವಾರ,ಸಮಯ : ಸಂಜೆ 4.00 ಗಂಟೆಯಿಂದ.
ಸ್ಥಳ : ಗುಂಡಿಬೈಲು ಶ್ರೀ ಶನೀಶ್ವರ ಕ್ಷೇತ್ರ, ಈ ಪವಿತ್ರ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತನು-ಮನ-ಧನಗಳಿಂದ ಸಹಕರಿಸಬೇಕಾಗಿ ಸಮಿತಿಯವರು ವಿನಂತಿಸಿದ್ದಾರೆ.
ಸರ್ವರಿಗೂ ಆದರದ ಸ್ವಾಗತ ಬಯಸುವವರು : ಅಧ್ಯಕ್ಷರು ಹಾಗೂ ಸರ್ವಸದಸ್ಯರು,ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ, ಶ್ರೀ ಶನೈಶ್ಚರ ಕ್ಷೇತ್ರ, ಗುಂಡಿಬೈಲು, ಉಡುಪಿ.ಮೊ: 9844434207.
