ವರದಿ /ಚಿತ್ರ : ದಿತೇಶ್ ಪೂಜಾರಿ ಮಂಗಳೂರು
ಮಂಗಳೂರು: ನಗರದಲ್ಲಿ ಇ.ವಿ ಆಟೋ ರಿಕ್ಷಾ ಗಳು ಅಕ್ರಮವಾಗಿ ಬಾಡಿಗೆ ಮಾಡುತ್ತಿರುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ ಮಾಲ ಕರ ಸಂಘಗಳ ಒಕ್ಕೂಟವು ಜಿಲ್ಲಾ ಉಪ ಸಾರಿಗೆ ಆಯುಕ್ತರಿಗೆ ಮನವಿ ಸಲ್ಲಿಸಿ ದ್ದಾರೆ.
ರಾಜ್ಯ ಸರ್ಕಾರವು ಪರಿಸರ ಸಂರಕ್ಷಣೆ ಮತ್ತು ಹಸಿರು ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ ಇ.ವಿ (ಎಲೆಕ್ಟಿಕ್ ವಾಹನ) ಆಟೋ ರಿಕ್ಷಾಗಳಿಗೆ ಪರ ವಾನಿಗೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದು, ಆದೇಶ ಜಾರಿ ಯಾಗಿ ಒಂದು ವರ್ಷ ಕ್ಕಿಂತ ಹೆಚ್ಚು ಕಾಲ ಕಳೆದಿದ್ದರೂ ಮಂಗಳೂರು ನಗರದಲ್ಲಿ ಇ.ವಿ ಆಟೋ ರಿಕ್ಷಾಗಳ ಪರವಾನಿಗೆ ಸಂಬಂಧಿತ ಸಮ ಸ್ಯೆಗಳು ಇನ್ನೂ ಸಂಪೂರ್ಣವಾಗಿ ಇತ್ಯರ್ಥ ಗೊಂಡಿಲ್ಲ.
ಪ್ರಸ್ತುತ ಪರಿಸ್ಥಿತಿಯಲ್ಲಿ ಮಂಗಳೂರು ನಗರದಲ್ಲಿ ಇ.ವಿ ಆಟೋ ರಿಕ್ಷಾ ವ್ಯವ ಸ್ಥೆಯು ನಿಯಂತ್ರಣವಿಲ್ಲದ ವ್ಯವಸ್ಥೆಗೆ ತಲುಪುತ್ತಿರುವುದು ಗಮ ನಾರ್ಹವಾಗಿದೆ. ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ನೋಂ ದಣೆಯಾದ ಅನೇಕ ಇ.ವಿ ಆಟೋರಿಕ್ಷಾಗಳು ನಗರ ಪರವಾನಿಗೆ ಇಲ್ಲದೆ ಮಂಗ ಳೂರು ನಗರ ವ್ಯಾಪ್ತಿ ಯಲ್ಲಿ ಸಂಚರಿಸಿ ಬಾಡಿಗೆ ಕಾರ್ಯಾಚರಣೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣಿ ಸುತ್ತಿದೆ. ಇದು ಸಾರಿಗೆ ನಿಯಮಗಳ ಉಲ್ಲಂಘನೆ ಯಾಗಿದ್ದು, ನಗರ ವ್ಯಾಪ್ತಿಯಲ್ಲಿ ಕಾನೂನು ಸು ಸುವ್ಯವಸ್ಥೆ ಮತ್ತು ಸಮಾನ ಸ್ಪರ್ಧಾತ್ಮಕತೆಯನ್ನು ಹಾನಿಗೊಳಿ ಸುತ್ತಿದೆ.
ಈ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳು ಈಗಾಗಲೇ ಹಳೆಯ ಇವಿ ಆಟೋ ರಿಕ್ಷಾಗಳಿಗೆ ನೀಡಲಾಗಿ ರುವ ಮಂಗಳೂರು ನಗರ ಪರವಾನಿಗೆಯನ್ನು ಹೊಸ ಇವಿ ಆಟೋ ರಿಕ್ಷಾಗಳಿಗೆ ವರ್ಗಾವಣೆ ಮಾಡುವಂತೆ ಹಾಗೂ ಎಲ್ಲರಿಗೂಸಮಾನವಾಗಿ ನಗರ ಪರವಾನಿಗೆ ನೀಡುವಂತೆ ಬೇಡಿಕೆ ಸಲ್ಲಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ, ಇಂತಹ ಬೇಡಿಕೆಗಳನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಪರಿಗಣಿಸುವುದು ನ್ಯಾಯಸಮ್ಮತವಾಗುವುದಿಲ್ಲ ಎಂದು ಒಕ್ಕೂಟ ತಿಳಿಸಿದೆ.
ಮಂಗಳೂರು ನಗರದಲ್ಲಿ ದಲ್ಲಿ ಸಂಚರಿಸಿ ಬಾಡಿಗೆ ಮಾಡುತ್ತಿರುವುದು ನಿಯಮ ಉಲ್ಲಂಘನೆಯಾಗಿದೆ.
ಇದರಿಂದ ನಗರ ಪರವಾನಿಗೆ ಪಡೆದ ವಾಹನ ಮಾಲಕರಿಗೆ ಅನ್ಯಾಯವಾಗುತ್ತಿದೆ.2015 5.30 ಯವರು ಆದೇಶವೊಂದನ್ನು ಹೊರಡಿಸಿದ್ದು, ನೊಂದಣಿಯಾದ ಗ್ರಾಮಾಂತರ ವಾಹನಗಳು ನಗರ ವ್ಯಾಪ್ತಿಯಲ್ಲಿ ಬಾಡಿಗೆ ಮಾಡುತ್ತಿರು ವುದು ಸ್ಪಷ್ಟ ನಿಯಮ ಉಲ್ಲಂಘನೆಯಾ ಗಿದೆ. ಇದನ್ನು ತಕ್ಷಣ ನಿಯಂತ್ರಿಸಬೇಕು ಎಂದು ಒತ್ತಾಯಿಸಲಾಗಿದೆ.
ಒಕ್ಕೂಟದ ಅಧ್ಯಕ್ಷ ಭರತ್ ಕುಮಾರ್, ಪ್ರಮುಖರಾದ ಲೋಕೇಶ್ ಶೆಟ್ಟಿ, ಉದಯ್ ಕುಮಾರ್, ಅಶೋಕ್ ಶೆಟ್ಟಿ ಬೋಳಾರ್, ಶೇಖರ್ ದೇರಳಕಟ್ಟೆ, ಅಬೂಬಕ್ಕರ್, ಗೌರವ ಕೇಶವ ಶೆಟ್ಟಿ, ಕೃಷ್ಣರಾಜ್, ಮಹಮ್ಮದ್ ಇಲಿಯಾಸ್, ಸಂತೋಷ್ ಕುಮಾರ್, ಹರ್ಮರ್ ಮತ್ತಿತ್ತರರು ಉಪಸ್ಥಿತರಿದ್ದರು
