September 6, 2026
Uncategorizedಆರೋಗ್ಯಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಫರಂಗಿಪೇಟೆ :ಸೇವಾಂಜಲಿಯಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆ. ಸಮಾಜ ಸೇವೆ ಮನುಷ್ಯನ ಆಂತರ್ಯ ದಲ್ಲಿರುವ ಒಳ್ಳೆಯ ಗುಣ : ಪ್ರಕಾಶ್ ಕಾರಂತ್;

ಬಂಟ್ವಾಳ: ಸಮಾಜ ಸೇವೆ ಮನುಷ್ಯನ ಆಂತರ್ಯದಲ್ಲಿರುವ ಒಳ್ಳೆಯ ಗುಣ.‌ ಕೃಷ್ಣ ಕುಮಾರ್ ಪೂಂಜ ಅವರ ಮೂಲಕ ಸೇವಾಂಜಲಿ ಸಂಸ್ಥೆಯ ಸೇವಾ ಕಾರ್ಯದ ಪ್ರಯೋಜನ ಈ ಭಾಗದ ಜನರಿಗೆ ಸಿಗುತ್ತಿದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಪ್ರಕಾಶ್ ಕಾರಂತ್ ಹೇಳಿದರು.

ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಸೇವಾಂಜಲಿ ಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಿಸಿ ಮಾತನಾಡಿದರು. ಇಂದು ನೆರವು ಪಡೆಯುತ್ತಿರುವ ರೋಗಿಗಳು ರೋಗ ಗುಣಮುಖರಾದ ಬಳಿಕವೂ ಸೇವಾಂಜಲಿಯತ್ತ ಹಿಂದಿರುಗಿ ನೋಡುವ ಕಾರ್ಯ ಆಗಬೇಕಿದೆ. ನಾವು ಸಾಗಿ ಬಂದ ಹಾದಿಯ ಗುರುತನ್ನು ನೆನೆಪಿಸಿಕೊಳ್ಳಬೇಕು ಎಂದು ತಿಳಿಸಿದರು.

ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ಷಯ ರೋಗಿಗಳಿಗೆ ಆಹಾರದಕಿಟ್ ನೀಡುವ ಮಹೋನ್ನತ ಕಾರ್ಯವನ್ನು ಸೇವಾಂಜಲಿ ಸಂಸ್ಥೆ ಮಾಡುತ್ತಿದೆ.‌ ಇದು ಇತರ ಸಂಘ ಸಂಸ್ಥೆಗಳಿಗೆ ಮಾದರಿ ಎಂದು ತಿಳಿಸಿದರು.ಸದಾನಂದ ಆಳ್ವ ಅರ್ಕುಳ ಕಂಪ ಶುಭ ಹಾರೈಸಿದರು.

ವೇದಿಕೆಯಲ್ಲಿ ಗಿರೀಶ್ ಪದೆಂಜಾರ್, ಟ್ರಸ್ಟಿ ನಾರಾಯಣ ಬಡ್ಡೂರು ಉಪಸ್ಥಿತರಿದ್ದರು.ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಕ್ಷಯ ರೋಗಿಗಳನ್ನು ಗುರುತಿಸಿ ಪೌಷ್ಠಿಕಾಂಶದ ಆಹಾರವನ್ನು ದಾನಿಗಳ ಸಹಕಾರದಿಂದ ನೀಡುತ್ತಾ ಬರುತ್ತಿದ್ದೇವೆ ಎಂದು ತಿಳಿಸಿದರು.ಪ್ರಶಾಂತ್ ತುಂಬೆ, ಗಾಯತ್ರಿ, ಸಾರಮ್ಮ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.

Related posts

ಸುಲೋಚನಾ ಪಿ.ಕೆ ಯವರ “ದಧೂಟಿ ಬನ ಕಾದಂಬರಿ ಉಡುಪಿ ತುಳುಕೂಟದ ಪಣಿಯಾಡಿ ಪ್ರಶಸ್ತಿಗೆ ಆಯ್ಕೆತುಳು ಚಳವಳಿಯ ಪ್ರವರ್ತಕ ದಿ. ಎಸ್.ಯು. ಪಣಿಯಾಡಿ ಅವರ ಸ್ಮರಣಾರ್ಥ ನೀಡುವ ಪ್ರಶಸ್ತಿ;

Voiceoftulunadu

ಸೆಪ್ಟೆಂಬರ್ 4-6 : ಜಗದೊಡೆಯ ಉಡುಪಿ ಶ್ರೀಕೃಷ್ಣನ ಜನ್ಮಾಷ್ಟಮಿ ಸಡಗರ ಪರ್ಯಾಯ ಶಿರೂರು ಶ್ರೀ ವೇದವರ್ಧನ ತೀರ್ಥ ಶ್ರೀಗಳಿಂದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ;

Voiceoftulunadu

ಪ್ರಜ್ವಲ್ ರೇವಣ್ಣ ಜೈಲಲ್ಲಿ ಫೋನ್ನಲ್ಲಿ ಮಾತಾಡೋ ವಿಡಿಯೋ ವೈರಲ್ಭದ್ರತಾ ಲೋಪದ ಬಗ್ಗೆ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾ‌ರ್ ಅಸಮಧಾನ ;

Voiceoftulunadu

Leave a Comment