28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬಂಟರು ಬಿಪಿಎಲ್ ಕಾರ್ಡ್‌ನಿಂದ ಮುಕ್ತಿ ಪಡೆಯಬೇಕು: ಬರೋಡ ಶಶಿಧರ ಶೆಟ್ಟಿಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ಸಭೆ ;

ವರದಿ/ ಚಿತ್ರ :ಈ ಮೀಡಿಯಾ

ಮಂಗಳೂರು: ತಳ ಮಟ್ಟದಲ್ಲಿರುವ ಬಂಟರನ್ನು ಮೇಲಕ್ಕೆ ತರುವ ಪ್ರಯತ್ನ ನಡೆಯಬೇಕಾಗಿದೆ. ಪ್ರತಿಯೊಬ್ಬ ಬಂಟರು ಬಿಪಿಎಲ್ ಕಾರ್ಡ್‌ನಿಂದ ಮುಕ್ತಿ ಪಡೆಯ ಬೇಕು. ಬಂಟರಲ್ಲಿ ಛಲ ಇದ್ದಾಗ ಮಾತ್ರ ಇಂಥವುಗಳನ್ನು ಮಾಡಲು ಸಾಧ್ಯವಿದೆ ಎಂದು ಬರೋಡ ಶಶಿ ಕ್ಯಾಟರಿಂಗ್ ನ ಮಾಲಕರಾದ ಶಶಿಧರ ಶೆಟ್ಟಿ ಬರೋಡ ತಿಳಿಸಿದರು.ಅವರು ಬಂಟ್ಸ್ಸ್ ಹಾಸ್ಟೆಲ್ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟ ಕಳೆದ ಏಳೆಂಟು ವರ್ಷಗಳಿಂದ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಅಧ್ಯಕ್ಷರಾಗಿ 25 ಕೋಟಿ ರೂಪಾಯಿಗೂ ಮಿಕ್ಕಿ ಪರಿಹಾರ ಧನವನ್ನು ಬಡವರಿಗೆ ವಿತರಿಸಿದ್ದಾರೆ. ಪ್ರಸಕ್ತ ಮುಲ್ಕಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಸಭಾಭವನದ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಅದರ ಉದ್ಘಾಟನೆಗೆ ನಾವೆಲ್ಲರೂ ಸಾಕ್ಷಿಯಾಗೋಣ ಎಂದರು.

ನಮ್ಮಲ್ಲಿ ಅನೇಕ ಸಾಧಕರಿದ್ದಾರೆ. ಡಾ. ಕೆ ಪ್ರಕಾಶ್ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿಕಿರಣ್ ಶೆಟ್ಟಿ, ರಾಕ್ಷಿ ಬಿಲ್ಡರ್ಸ್‌ನ ರಾಜೇಶ್ ಶೆಟ್ಟಿ ಮೊದಲಾದವರ ಸಾಧನೆ ನಮಗೆಲ್ಲ ದಾರಿದೀಪವಾಗಿದೆ. ಇಂತಹ ಅನೇಕ ಮಂದಿ ಸಾಧಕರು ನಮ್ಮ ಸಮಾಜದಲ್ಲಿದ್ದಾರೆ. ಬಂಟ ಸಮಾಜ ಇತರ ಸಮಾಜಕ್ಕೆ ಮಾದರಿಯಾಗಬೇಕು.ಒಳ್ಳೆಯ ಕೆಲಸಗಳನ್ನು ಮಾಡುವಾಗ ಪರವಿರೋಧ ಚರ್ಚೆಗಳು ಬರುವುದು ಸಹಜ. ಎಲ್ಲರೂ ಸಮಾಜದ ಅಭಿವೃದ್ಧಿಗಾಗಿ ಕೆಲಸ ಬೇಕೆಂದರು.

ಒಕ್ಕೂಟದ ನಿರ್ದೇಶಕ ಮುನಿಯಾಲು ಉದಯಕುಮಾ‌ರ್ ಶೆಟ್ಟಿ ಮಾತನಾಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರ ಸಮಾಜಪರ ಕೆಲಸದಲ್ಲಿ ತೊಡಗಿಕೊಂಡಿದೆ. ಐಕಳ ಹರೀಶ್ ಶೆಟ್ಟಿಯವರ ಸಂಘಟನೆ ಮತ್ತು ಪದಾಧಿಕಾರಿಗಳ ಕೆಲಸ ಕಾರ್ಯಗಳಿಂದ ಬಡವರ ವಿವಿಧ ಕಾರ್ಯಗಳಿಗೆ ವಿನಿಯೋಗಿಸಿದೆ ಎಂದರು. ಒಕ್ಕೂಟ ಹಲವು ಕೋಟಿ ರೂ.ಗಳನ್ನುಸಮಾರಂಭದಲ್ಲಿ ಉದ್ಯಮಿ ಒಕ್ಕೂಟದ ನಿರ್ದೇಶಕ ಹುಬ್ಬಳ್ಳಿ- ಧಾರಾವಾಡ ಬಂಟರ ಸಂಘದ ಅಧ್ಯಕ್ಷ ರಾಜೇಂದ್ರ ವಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಎಲ್ಲಾ ಬಂಟರ ಸಂಘಗಳು ಪ್ರತೀವರ್ಷದಂತೆ ನೋಂದಾವಣೆಯನ್ನು ಮಾಡಿಕೊಂಡು ಸಂಘದ ಕಾರ್ಯಕ್ರಮಗಳಲ್ಲಿ ಡಿಸೆಂಬರ್ ಭಾಗವಹಿಸುವಂತೆ ವಿನಂತಿಸಿದರು. ಮುಲ್ಕಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಸಭಾಭವನವನ್ನು ತಿಂಗಳ ಒಳಗೆ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲು ಸಹಕಾರ ಬೇಕು ಎಂದರು.

ಎಲ್ಲರಪೋಷಕ ಸದಸ್ಯ ನವೀನ್ ಚಂದ್ರ ಶೆಟ್ಟಿ ಪಡುಬಿದ್ರಿ, ನಿರ್ದೇಶಕರಾದ ಶಶಿಧರ ಶೆಟ್ಟಿ ಇನ್ನಂಜೆ, ಇಂಜಿನಿಯರ್ ಗೋಪಾಲ ಭಟ್, ಸುಧಾಕರ ಶೆಟ್ಟಿಉತ್ರಿಂಜೆ ಬೆಹರಿನ್, ಸತೀಶ್ಚಂದ್ರ ಶೆಟ್ಟಿ ಅಕ್ಕುಂಜೆ, ಒಕ್ಕೂಟದ ಕೋಶಾಧಿಕಾರಿ ಉಳ್ಳೂರು ಮೋಹನ್ ದಾಸ್ ಶೆಟ್ಟಿ, ಯುವ ವಿಭಾಗದ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್, ಸಂಚಾಲಕ ಬಾಲಕೃಷ್ಣ ರೈ ಕೊಲ್ಲಾಡಿ ಮೊದಲಾದವರು ಉಪಸ್ಥಿತರಿದ್ದರು.ಸಭೆಯಲ್ಲಿ ಹಿರಿಯಡ್ಕ ಬಂಟರ ಸಂಘದ ನೂತನ ಅಧ್ಯಕ್ಷ ರವೀಂದ್ರನಾಥ ಹೆಗ್ಡೆ, ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಹರ್ಷ ಶೆಟ್ಟಿ, ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ ಚೇತನ್ ಶೆಟ್ಟಿ ಕೋವಾಡಿ, ಮೂಡಬಿದ್ರೆ ಯುವ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಯುವ ಸಮಿತಿಯ ಸಂಚಾಲಕ ಶಿಶಿರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವಿವಿಧ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ತ್ರೈಮಾಸಿಕ ಲೆಕ್ಕಪತ್ರಗಳ ಮಂಡನೆ, ವರದಿ ವಾಚನ, ಲೆಕ್ಕಪತ್ರಗಳಿಗೆ ಮಂಜೂರಾತಿ, ಫಲಾನುಭವಿಗಳಿಗೆ ನೀಡಲ್ಪಟ್ಟ ಆರ್ಥಿಕ ಸಹಾಯಧನಕ್ಕೆ ಮಂಜೂರಾತಿ ಪಡೆಯಲಾಯಿತು.

30 ನೇ ವಾರ್ಷಿಕ ಮಹಾಸಭೆಗೆ ದಿನ ನಿಗದಿಪಡಿಸಲಾಯಿತು.ಅನೂಪ್ ಶೆಟ್ಟಿ ಸುರತ್ಕಲ್ ಪ್ರಾರ್ಥಿಸಿದರು. ಐಕಳ ಹರೀಶ್ ಶೆಟ್ಟಿ ಸ್ವಾಗತಿಸಿದರು. ಗಿರೀಶ್ ಶೆಟ್ಟಿ ವಂದಿಸಿದರು. ಡಾ. ಪ್ರಿಯಾ ಶೆಟ್ಟಿ, ಡಾ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Related posts

ಬೆಂಜನಪದವು: ಸಾರ್ವಜನಿಕ ಶ್ರೀಕೃಷ್ಣ ಲೀಲೋತ್ಸವ, ಧಾರ್ಮಿಕ ಸಭೆ. ಒಗ್ಗಟ್ಟೇ ನಮ್ಮ ಶಕ್ತಿ, ಸನಾತನವೇ ನಮ್ಮ ಸಂಸ್ಕೃತಿ: ಡಾ.ರವೀಶ್ ಪಡುಮಲೆ ;

Voiceoftulunadu

ಆಕಾಶ್ ಎಜುಕೇಷನಲ್ ಸರ್ವೀಸಸ್ ನಿಂದ ಅತಿದೊಡ್ಡ ಪ್ರತಿಭಾನ್ವೇಷಣೆ :ಪರೀಕ್ಷೆ ಕಳೆದ 16 ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಪರೀಕ್ಷೆ ;

Voiceoftulunadu

ಪಡುಬಿದ್ರಿ ಬಂಟರ ಸಂಘದ ಆಯೋಜನೆಯಲ್ಲಿ “ಪಡ್ಡೆದ್ರ ಬಂಟೆರ್ನ ಕೆಸರ್ದ ಗೊಬ್ಬು”:ಕಾರ್ಯಕ್ರಮ ಉದ್ಘಾಟಿಸಿದ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ;

Voiceoftulunadu

Leave a Comment