November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಬಂಟ್ವಾಳ ತಾಲೂಕಿನ ಪೆರಾಜೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಪೆರಾಜೆ ಶ್ರೀ ಗುಡ್ಡ ಚಾಮುಂಡೇಶ್ವರೀ ಸೇವಾ ಟ್ರಸ್ಟ್ (ರಿ.) ಪೆರಾಜೆ ಇವರ ವತಿಯಿಂದ ” ಪೆರಾಜೆ ಗಣೇಶೋತ್ಸವ” ;

ವರದಿ : ಸುರೇಶ್ ಬಾಬು ಮಾಣಿ

ಬಂಟ್ವಾಳ/ಪೆರಾಜೆ: ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಪೆರಾಜೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಪೆರಾಜೆ ಶ್ರೀ ಗುಡ್ಡ ಚಾಮುಂಡೇಶ್ವರೀ ಸೇವಾ ಟ್ರಸ್ಟ್ (ರಿ.) ಪೆರಾಜೆ ಇವರ ವತಿಯಿಂದ ” ಪೆರಾಜೆ ಗಣೇಶೋತ್ಸವ” ವು ವಿಜೃಂಭಣೆಯಿಂದ ನಡೆಯಲಿದೆ.

ಕಾರ್ಯಕ್ರಮದ ವಿವರ :

ಸ್ಥಳ ಹಾಗೂ ದಿನಾಂಕ: ಪೆರಾಜೆ ಶಾಲಾ ವಠಾರ,ಸೋಮವಾರ 14 ,2026

ಸೆಪ್ಟೆಂಬರ್ ಬೆಳಿಗ್ಗೆ ಗಂಟೆ 10.00 ರಿಂದ ಮಧ್ಯಾಹ್ನ ಗಂಟೆ 12.30ರ ತನಕ ಶ್ರೀ ಉಳ್ಳಾಲ್ತಿ ಯಕ್ಷಪ್ರಿಯ ಕಲಾ ಸಂಘ ಮಾಣಿಶ್ರೀ ಗಣೇಶ್ ಪಾಲೆಚ್ಚಾರ್ ಇವರ ಶಿಷ್ಯರಿಂದ ಮಕ್ಕಳ ಪೌರಾಣಿಕ ಯಕ್ಷಗಾನ ಬಯಲಾಟ ‘ ರತಿ ಕಲ್ಯಾಣ’ ನಡೆಯಲಿದೆ.

ಈ ಪ್ರಯುಕ್ತ ಪೂರ್ವ ರಂಗ ಸಹಿತ ಶ್ರೀಕೃಷ್ಣನ ಒಡೋಲಗ ಹಾಗೂ ಹಿಮ್ಮೇಳ ಗುರುಗಳಾದ ಶ್ರೀ ಕಿನಿಲಕೋಡಿ ಗಿರೀಶ್ ಭಟ್ ಇವರ 7 ಮಂದಿ ಶಿಷ್ಯರಿಂದಚೆಂಡೆ ಮದ್ದಳೆಯ ರಂಗಪ್ರವೇಶಮತ್ತು ಗುರು ವಂದನಾ ಕಾರ್ಯಕ್ರಮ ನಡೆಯಲಿರುವುದು.

ಮಧ್ಯಾಹ್ನ ಗಂಟೆ 3.00 ರಿಂದ ಸಂಜೆ ಗಂಟೆ 6.00 ತನಕ ಚಾ ಪರ್ಕ ಕಲಾವಿದೆರ್ ಕುಡ್ಲ ಅಭಿನಯಿಸುವ ,27 ವರ್ಷಗಳ ಹಿಂದೆ ರಂಗಭೂಮಿಯಲ್ಲಿ ಚಾರ್ರಿಕ ರಾಜಲೆ ನಿರ್ಮಿಸಿರುವ ‘ಯಾನೊರಿ ಬರೋಲಿಯಾ ‘ ಎಂಬ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ಸಾಯಂಕಾಲ ಗಂಟೆ 6.30ರ ಮಹಾಪೂಜೆಯ ನಂತರ ಶ್ರೀ ವಿನಾಯಕ ದೇವರ ಶೋಭಾಯಾತ್ರೆಯು ಖ್ಯಾತ ಚೆಂಡೆವಾದನ, ಕುಣಿತ ಭಜನೆ ತಂಡದೊಂದಿಗೆ ವಿಜೃಂಭಣೆಯಿಂದ ನಡೆಯಲಿದ್ದು,ಪೆರಾಜೆ ಶಾಲಾ ವಠಾರದಿಂದ ಬೊಳ್ಳುಕಲ್ಲು-ಬುಡೋಳಿ-ಜೋಗಿಬೆಟ್ಟು ಮಾರ್ಗವಾಗಿ ಗಡಿಯಾರದ ಕೆರೆಯಲ್ಲಿ ಮೂರ್ತಿ ವಿಸರ್ಜನೆಗೊಳ್ಳಲಿದೆ.

ಸರ್ವರಿಗೂ ಆದರದ ಸ್ವಾಗತವನ್ನು ಬಯಸುವವರು,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಪೆರಾಜೆ.

Related posts

ಸೈಂಟ್ ಮಿಲಾಗ್ರಿಸ್ ಕೋ ಆ. – ಸೊಸೈಟಿ ವತಿಯಿಂದ ಸ್ಪಂದನ ದಿವ್ಯಾಂಗರ ಕೇಂದ್ರಕ್ಕೆ ಸಹಾಯ ಹಸ್ತ ಸಮಾಜ ಸೇವೆಯು ಹಣಕಾಸು ಸಂಸ್ಥೆಗಳಿಗೆ ಮಾದರಿ: ವಂ. ಫಾ. ಡೆನ್ನಿಸ್ ಡೇಸಾ;

Voiceoftulunadu

ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಆವರಣದಲ್ಲಿ ವನಮಹೋತ್ಸವ :ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ವೈ ಸುಧೀ‌ರ್ ಕುಮಾರ್ ;

Voiceoftulunadu

ಸಾಂಪ್ರದಾಯಿಕ ನಾಟಿ ಮುಂದುವರಿಸುತ್ತಿರುವ ಯುವ ರೈತ ಹರೀಶ್ ಪೂಜಾರಿ ಕಿಶೋ‌ರ್ ಪೂಜಾರಿ : ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಲ್ಲೂರು ಶಶಿಧರ್ ಶೆಟ್ಟಿ, ಸದಸ್ಯರಿಂದ ಶ್ಲಾಘನೆ;

Voiceoftulunadu

Leave a Comment