ವರದಿ /ಚಿತ್ರ: ಈ ಮೀಡಿಯಾ
ಉಡುಪಿ ಉಡುಪಿ : ಶ್ರೀ ಕೃಷ್ಣ ಮಠ ಪರ್ಯಾಯ Be ಶೀರೂರು ಮಠ ಆಶ್ರಯದಲ್ಲಿ ‘ಉಡುಪಿಗೆ ಬನ್ನಿ’ ನೇತೃತ್ವದಲ್ಲಿ ಎನ್. ಎನ್. ಇಸ್ಟ್ರಾಸ್ಟ್ರಕ್ಟರ್ ಡೆವಲಪರ್ಸ್, ಚಿತ್ರಕೂಟ ಆಯುರ್ವೇದ, ಅನಂತ ವೈದಿಕ ಕೇಂದ್ರ ಉಡುಪಿ ಸಹಕಾರದೊಂದಿಗೆ ವಿಟ್ಲಪಿಂಡಿ ಪ್ರಯುಕ್ತ ‘ಕೃಷ್ಣ ರಂಗ’ ರಾಜ್ಯಮಟ್ಟದ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಯ ಪೋಸ್ಟರ್ ಅನ್ನು ಪರ್ಯಾಯ ಮಠಾಧೀಶರಾದ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಬುಧವಾರ ಬಿಡುಗಡೆಗೊಳಿಸಿ ಸ್ಪರ್ಧೆಯು ಯಶಸ್ವಿಯಾಗಿ ನಡೆಯಲಿ ಎಂದು ಅನುಗ್ರಹ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ‘ಉಡುಪಿಗೆ ಬನ್ನಿ’ ನಿರ್ವಾಹಕರಾದ ಡಾ. ಗಣೇಶ್ಪ್ರಸಾದ್ ಜಿ. ನಾಯಕ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಹೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗೀಯ ಅಧ್ಯಕ್ಷರಾದ ಉದಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಸ್ಪರ್ಧೆಯ ವಿವರ : ಸ್ಪರ್ಧಿಗಳು ಸೆಪ್ಟೆಂಬರ್ 5 ರಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ವಿಟ್ಲಪಿಂಡಿಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಆಯ್ದ ಅಂಶಗಳನ್ನು ರೀಲ್ಸ್ ನಲ್ಲಿ ಪ್ರಸ್ತುತಪಡಿಸಬೇಕು. ರೀಲ್ಸ್ ನ್ನು ಇನ್ಸಾಗ್ರಾಮ್ ನಲ್ಲಿ ಪ್ರಕಟಿಸಿ ‘ಉಡುಪಿಗೆ ಬನ್ನಿ’ ಕೊಲೇಬೊರೇಟ್ ಮಾಡಬೇಕು.
ರೀಲ್ಸ್ ಕಳುಹಿಸಲು ಸೆಪ್ಟೆಂಬರ್ 15ಕೊನೆಯ ದಿನವಾಗಿದ್ದು ಫಲಿತಾಂಶವನ್ನು ಸೆಪ್ಟೆಂಬರ್ 19 ಕ್ಕೆ ಪ್ರಕಟಿಸಲಾಗುವುದು.ಪ್ರಥಮ ಬಹುಮಾನ ರೂ. ಹತ್ತು ಸಾವಿರ ಮತ್ತು ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ ರೂ. ಐದು ಸಾವಿರ ಮತ್ತು ಪ್ರಶಸ್ತಿ ಪತ್ರ ಮತ್ತು 5 ಮಂದಿಗೆ ರೂ. ಒಂದು ಸಾವಿರ ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ಸ್ಪರ್ಧಿಸಿದ ಪಾರ್ಟಿಸಿಪೇಶನ್ ಪ್ರತಿಯೊಬ್ಬರಿಗೂ ಸರ್ಟಿಫಿಕೇಟ್ ನೀಡಲಾಗುವುದು ಮತ್ತು ಸ್ಪರ್ಧೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ‘ಉಡುಪಿಗೆ ಬನ್ನಿ’ ಇನ್ಫೋಗ್ರಾಮ್ ಪೇಜ್ ನಲ್ಲಿ ನೋಡಬಹುದು ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.
