28.5 C
ಮಂಗಳೂರು
September 4, 2026
Uncategorized

ಸಾಹಿತಿ ಪುಷ್ಪ ಪ್ರಸಾದ್‌ ಅವರಿಗೆ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ: ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಉಡುಪಿ, ಜು. 23: ಉಡುಪಿಯ ಖ್ಯಾತ ಸಾಹಿತಿ ಶ್ರೀಮತಿ ಪುಷ್ಪ ಪ್ರಸಾದ್ ಅವರು ಪ್ರತಿಷ್ಠಿತ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದಲ್ಲಿ ನಡೆಯಲಿದೆ.

ಮೂಲತಃ ಮಡಿಕೇರಿಯವರಾದ ಪುಷ್ಪ ಪ್ರಸಾದ್ ಅವರು ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪ್ರಸ್ತುತ ಉಡುಪಿಯ ನ್ಯಾಯಾಲಯ ಇಲಾಖೆಯಲ್ಲಿ ಶೀಘ್ರ ಲಿಪಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಸೇವೆಯನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿರುವ ಅವರು, ಹಲವಾರು ಸಾಹಿತ್ಯ ಹಾಗೂ ಸಂಘಟನೆಗಳಲ್ಲಿ ಸಾಮಾಜಿಕ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ ಅವರು ಉಡುಪಿ ಜಿಲ್ಲಾ ಬರಹಗಾರರ ಸಂಘದ ಜಿಲ್ಲಾಧ್ಯಕ್ಷೆ, ಆಮಂತ್ರಣ ಉಡುಪಿ ಜಿಲ್ಲಾಧ್ಯಕ್ಷೆ ಹಾಗೂ ಉಡುಪಿ ಜಿಲ್ಲಾ ಸಿರಿಗನ್ನಡ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರ ಸಾಹಿತ್ಯ ಕೃತಿಗಳಲ್ಲಿ ‘ಒಸಗೆಯ ಎಸಳು’, ‘ಭಾವ ನೈವೇದ್ಯ’, ‘ಹೆಜ್ಜೆ ತಾಳದ ಗೆಜ್ಜೆ ಘಲಿರು’, ‘ನಕ್ಷತ್ರ ಪುಂಜ’, ‘ಪುಟಾಣಿ ಸ್ವರ್ಗ’, ‘ಸೃಷ್ಟಿಯ ತೋರಣ’, ‘ಗುಡಿಗಾರ’, ‘ದಿವ್ಯಾಕ್ಷರಿ’ ಹಾಗೂ ‘ಸುಖ ಧರೆ’ ಪ್ರಮುಖವಾಗಿದ್ದು, ಕವನ, ಲೇಖನ, ನೀತಿಕಥೆ ಹಾಗೂ ನ್ಯಾನೋ ಕಥೆಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅವರ ಬರಹಗಳು ಅನೇಕ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.

ಹಲವಾರು ಸಾಹಿತ್ಯ ಗೋಷ್ಠಿಗಳಲ್ಲಿ ಅಧ್ಯಕ್ಷತೆ ವಹಿಸಿ, ಉಪನ್ಯಾಸಕಿ ಹಾಗೂ ನಿರೂಪಕಿಯಾಗಿ ಸೇವೆ ಸಲ್ಲಿಸಿರುವ ಪುಷ್ಪ ಪ್ರಸಾದ್ ಅವರಿಗೆ ದೊರೆತಿರುವ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಉಡುಪಿ ಜಿಲ್ಲೆಯ ಸಾಹಿತ್ಯ ವಲಯಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದೆ.

Related posts

ಮೂಲ್ಕಿ ಬಳಿಯ ಕೆರೆಕಾಡು ಅಕ್ಷಯ ಮಹಿಳಾ ಮಂಡಳಿಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾಧವ ಶೆಟ್ಟಿಗಾರ್ ದಂಪತಿಯನ್ನು ಸನ್ಮಾನ : ತುಳುನಾಡಿನ ಆಹಾರ ಪದ್ಧತಿ ಶ್ರೇಷ್ಟ , ಅಮೂಲ್ಯ ಶೆಟ್ಟಿ ಕಟೀಲು;

Voiceoftulunadu

ಸೈಂಟ್ ಮಿಲಾಗ್ರಿಸ್ ಕೋ ಆ. – ಸೊಸೈಟಿ ವತಿಯಿಂದ ಸ್ಪಂದನ ದಿವ್ಯಾಂಗರ ಕೇಂದ್ರಕ್ಕೆ ಸಹಾಯ ಹಸ್ತ ಸಮಾಜ ಸೇವೆಯು ಹಣಕಾಸು ಸಂಸ್ಥೆಗಳಿಗೆ ಮಾದರಿ: ವಂ. ಫಾ. ಡೆನ್ನಿಸ್ ಡೇಸಾ;

Voiceoftulunadu

ಪೊಳಲಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಇದರ ವಾರ್ಷಿಕ ಮಹಾಸಭೆ ;

Voiceoftulunadu

Leave a Comment