
ಬೆಂಗಳೂರು : “ಹಂಬಲಿಸಿದೆ ಈ ಮನ” ಎಂಬ ಕಿರುಚಲನಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ನಮ್ಮ ವಾಹಿನಿಯೊಂದಿಗೆ ಚಿತ್ರತಂಡವು ಹಂಚಿಕೊಂಡಿದೆ.

ಕಿರುಚಲನಚಿತ್ರದ ವಿವರಗಳು ಇಲ್ಲಿವೆ :
ನಿರ್ಮಾಪಕರು: ಯಾದ್ವಿ ಸಂದೀಪ್ / ಜೀವನ್ ಗೌಡ.
ನಿರ್ದೇಶನ: ಜೀವನ್ ಗೌಡ.
ಪ್ರಸ್ತುತಪಡಿಸುವವರು: ಡಿ ಸೆನ್ಸರ್ / ಬಿಆರ್ಕೆ ಪಿಕ್ಚರ್.
ಛಾಯಾಗ್ರಹಣ: ಚಂದ್ರು ವೈ.ಎಂ.
ಸಂಗೀತ: ಸಲಾಂ ವೀರೋಳಿ.

ತಾರಾಗಣ:ಧ್ರುವಂತ್ ಧ್ರುವ್ / ಜಕ್ಷ್ ಜಿ / ರೋಹಿಣಿ ಕಶ್ಯಪ್ / ರೋಹಿಣಿ / ರಾಧಾ ಚಂದು /ಉಷಾ ದೇವರಾಜ್ / ಕೃಷ್ಣ ಮೋಹನ್ / ಕಮಲೇಶ್.ಕೆ / ಕೀರ್ತಿ ಎಂ.
ಕಥಾ ಸಾರಾಂಶ : ಅನಾಥ ಆಶ್ರಮದ ಅಮ್ಮಾಜಿಯ ಮಡಿಲಿಗೆ ಒಂದು ಅನಾಥ ಮಗು ಸೇರುಕೊಳ್ಳುತ್ತದೆ,ಆ ಮಗು ಬೆಳೆಯುವ ಹಾದಿಯುದ್ಧಕ್ಕೂ ತನ್ನ ಹೆತ್ತವರನ್ನು ಹಂಬಲಿಸುತ್ತಲೇ ಬೆಳೆಯುತ್ತದೆ … ಆ ಮಗು ಹೆತ್ತವರ ಮಡಲಿಗೆ ಸೇರುತ್ತಾ..? ಅಥವಾ ಅನಾಥವಾಗಿಯೇ ಉಳಿಯುತ್ತಾ..? ಹಂಬಲಿಸಿದೆ ಈ ಮನ..
