28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

17 ಕೈಗಾರಿಕಾ ಯೋಜನೆಗಳಿಗೆ ಸರ್ಕಾರ ಅಸ್ತು; 66 ಸಾವಿರ ಜನರಿಗೆ ಉದ್ಯೋಗಾವಕಾಶ ಸೃಷ್ಟಿ;

ಬೆಂಗಳೂರು: ರಾಜ್ಯದಲ್ಲಿ 66 ಸಾವಿರ ಜನರಿಗೆ ಉದ್ಯೋಗಾವಕಾಶ ಒದಗಿಸುವ ಕೈಗಾರಿಕಾ ಕ್ಷೇತ್ರದಲ್ಲಿ ಒಟ್ಟು 29,679 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ 17 (9 ಹೊಸ ಮತ್ತು 8 ಹೆಚ್ಚುವರಿ ಹೂಡಿಕೆಯ) ಕೈಗಾರಿಕಾ ಯೋಜನೆಗಳಿಗೆ ಗ್ರೀನ್ ಸಿಗ್ನಲ್ ದೊರೆತಿದೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ಕೈಗಾರಿಕೆಗಳ ಸ್ಥಾಪನೆಗೆ ಅನುಮೋದನೆ ನೀಡುವ ಸಂಬಂಧ ನಡೆದ ಉನ್ನತ ಮಟ್ಟದ ಒಪ್ಪಿಗೆ ಸಮಿತಿಯು 9 ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗು 8 ಕೈಗಾರಿಕೆ ಯೋಜನೆಗಳ ವಿಸ್ತರಣೆಗೆ ಅನುಮತಿ ಕೊಟ್ಟಿದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯವು ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

ಹೊಸ ಕೈಗಾರಿಕೆ ಯೋಜನೆಗಳ ಅಡಿಯಲ್ಲಿ ವೈಬ್ರನ್ಸಿ ರೆನ್ಯೂಅಬಲ್ ಎನರ್ಜೀಸ್ 2,194.94 ಕೋಟಿ ರೂ. ಹೂಡಲಿದ್ದು, 30 ಸಾವಿರ ಜನರಿಗೆ ಉದ್ಯೋಗ ನೀಡಲಿದೆ.

ಹಾಗೆಯೇ ಮಹೀಂದ್ರ ಏರೋಸ್ಟ್ರಕ್ಚರ್ಸ್ 2,300 ಕೋಟಿ (3,000 ಉದ್ಯೋಗ), ಏಕಸ್ ಕನ್ಸೂಮರ್ ಪ್ರಾಡಕ್ಟ್ಸ್ 1,104 ಕೋಟಿ ರೂಪಾಯಿ (4,813 ಉದ್ಯೋಗ), ಹೀರೋ ಫ್ಯೂಚರ್ ಎನರ್ಜೀಸ್ 9,760 ಕೋಟಿ ರೂಪಾಯಿ (3,200 ಉದ್ಯೋಗ), ಎಪ್ಸಿಲಾನ್ 1,500 ಕೋಟಿ ರೂಪಾಯಿ, ಟೊಯೋಟಾ ಕಿರ್ಲೋಸ್ಕರ್ ₹1,200 ಕೋಟಿ, ನಿರಾಣಿ ಶುಗರ್ಸ್ ₹4,062 ಕೋಟಿ, ಟ್ರೂಆಲ್ಟ್ ಬಯೋ ಎನರ್ಜಿ ₹2,988 ಕೋಟಿ ಮತ್ತು ಲೈಟ್ಹೌಸ್ ಆಲ್ಟರ್ನೇಟಿವ್ ಅಸೆಟ್ಸ್ 600 ಕೋಟಿ ರೂಪಾಯಿ ಬಂಡವಾಳ ತೊಡಗಿಸಲಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಎಂಎಸ್ಪಿಎಲ್ ಕಂಪನಿಯು ₹884.25 ಕೋಟಿ, ಎನ್ಶೂರ್ ರಿಲಯನ್ಸ್ ಪವರ್ ಸೊಲ್ಯೂಷನ್ಸ್ 250 ಕೋಟಿ, ಹೋಂಡಾ ಕಾರ್ಸ್ ₹437 ಕೋಟಿ, ಭೀಮಾ ಫೈನ್ ಕೆಮಿಕಲ್ಸ್ ₹605 ಕೋಟಿ, ಸನ್ಸೇರಾ ₹492.24 ಕೋಟಿ,

Related posts

ಪುತ್ತೂರಿನ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ವನಮಹೋತ್ಸವ ;

Voiceoftulunadu

ಬೆಂಗಳೂರಿನಲ್ಲಿ ಉಡುಪಿಯ ವಿನೋದ್ ಶೆಟ್ಟಿ ಅವರಿಗೆ “ಭಾರತ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ” ಪ್ರದಾನ ;

Voiceoftulunadu

ಉಡುಪಿಯ “ಸಂವಿಧಾನ ಅಂದು ಹಾಗೂ ಇಂದು” ಉಪನ್ಯಾಸಪ್ರಸಿದ್ಧ ಅಂಕಣ ಬರಹಗಾರ, ವಾಗ್ನಿ ರೋಹಿತ್ ಚಕ್ರತೀರ್ಥರಿಂದ ಉಪನ್ಯಾಸ;

Voiceoftulunadu

Leave a Comment