September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ವಿಜಯ ಕಾಲೇಜು ಮೂಲ್ಕಿ ಗ್ಲೋಬಲ್ ಅಲ್ಯೂಮಿನಿ ಅಸೋಸಿಯೇಶನ್ನೂತನ ಅಧ್ಯಕ್ಷರಾಗಿ ಅಡ್ವೊಕೇಟ್ ಶೇಖರ್ ಎಸ್.ಭಂಡಾರಿ ಆಯ್ಕೆ

ಮುಂಬಯಿ, ಮೇ.೩೧: ವಿಜಯ ಕಾಲೇಜು ಮೂಲ್ಕಿ ಗ್ಲೋಬಲ್ ಅಲ್ಯೂಮಿನಿ ಅಸೋಸಿಯೇಶನ್ (ವಿಸಿಎಂಜಿಎಎಎಂ) ಇದರ ಕಾರ್ಯಕಾರಿ ಸಮಿತಿಯ ಸಭೆಯು ಕಳೆದ ಶನಿವಾರ ನಡೆಯಿತು. ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ೨೦೨೬-೨೦೨೬ನೇ ಸಾಲಿನ ಅಧ್ಯಕ್ಷರಾಗಿ ಅಡ್ವೊಕೇಟ್ ಶೇಖರ್ ಎಸ್.ಭಂಡಾರಿ ಇವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಗೊಳಿಸಿತು.ಗೌರವಾಧ್ಯಕ್ಷ ಆಗಿ ವಾಸುದೇವ ಎಂ.ಸಾಲ್ಯಾನ್, ಉಪಾದ್ಯಕ್ಷ ಆಗಿ ಭಾಸ್ಕರ್ ಭೋಜ ಶೆಟ್ಟಿ, ಕಾರ್ಯದರ್ಶಿ ಆಗಿ ಸಿಎ| ರೋಹಿತಾಕ್ಷ ದೇವಾಡಿಗ ಮತ್ತು ಖಜಾಂಗಿ ಆಗಿ ಸರಿತಾ ಸುನಿಲ್ ರಾವ್ ಅವರು ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಸಿಎ| ಶಂಕರ್ ಬಿ ಶೆಟ್ಟಿ, ಸಿಎ| ಸೋಮನಾಥ್ ಕುಂದರ್, ಕರ್ನೀರೆ ವಿಶ್ವನಾಥ್ ಶೆಟ್ಟಿ, ಆನಂದ ಶೆಟ್ಟಿ, ಸಿಎ| ಕಿಶೋರ್ ಕುಮಾರ್ ಸುವರ್ಣ, ಪ್ರವೀಣ್ ಬಿ.ಶೆಟ್ಟಿ, ಅಶೋಕ್ ದೇವಾಡಿಗ, ಲಕ್ಷಿ ಶ ರಾವ್, ಪ್ರಸಾದ್ ಭಂಡಾರಿ, ರಂಜನ್ ಶೆಟ್ಟಿ, ಲಾರೆನ್ಸ್ ಡಿಸೋಜಾ ಮತ್ತು ಸ್ವರ್ಣಜ್ಯೋತಿ ಶೆಟ್ಟಿ ಆಯ್ಕೆಯಾದರು.ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾಥಿs ಸಂಘ ಮುಂಬಯಿ ಘಟಕದ ಸ್ಥಾಪಕ ಅಧ್ಯಕ್ಷ ಸಿಎ| ಶಂಕರ್ ಬಿ.ಶೆಟ್ಟಿ ಅವರು ನೂತನ ಅಧ್ಯಕ್ಷ ಅಡ್ವೊಕೇಟ್ ಶೇಖರ್ ಭಂಡಾರಿ ಮತ್ತಿತರ ಪದಾಧಿಕಾರಿಗಳಿಗೆ ಪುಷ್ಪಗುಚ್ಛ ನೀಡಿ ಗೌರವಿಸಿ ಅಭಿನಂದಿಸಿ ಶುಭಾರೈಸಿದರು.

Related posts

ವಿ ವಿ ಕಾಲೇಜು ಪ್ರಾಂಶುಪಾಲರಾಗಿ ಡಾ. ಜಯವಂತ ನಾಯಕ್:

voiceoftulunadu

ಪತ್ರಿಕಾ ದಿನಾಚರಣೆ-2026: ‘ಮಾಧ್ಯಮಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲಿ’ – ಸಿಎಂ ಡಿಕೆ ಶಿವಕುಮಾರ್ ಕರೆ;

Voiceoftulunadu

ಹೆಜಮಾಡಿ ಹದಗೆಟ್ಟ ಪ್ರಮುಖ ರಸ್ತೆಗಳು : ಹೆಜಮಾಡಿ ಆಟೋ ರಿಕ್ಷಾ ಯೂನಿಯನ್ ನಿಂದ ಪ್ರತಿಭಟನೆಹೆಜಮಾಡಿ ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷ ಶೇಖ‌ರ್ ಹೆಜಮಾಡಿ ನೇತೃತ್ವದಲ್ಲಿ ಪ್ರತಿಭಟನೆ;

Voiceoftulunadu

Leave a Comment