27 C
ಮಂಗಳೂರು
July 6, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿರಾಜ್ಯ/ದೇಶ

ಸಾಂತಕ್ರೂಜ್ ; ಪ್ರಭಾತ್ ಕಾಲೊನಿ ಪ್ರೀಮಿಯರ್ ಲೀಗ್-2026 ಕ್ರಿಕೆಟ್ ಟೂರ್ನಮೆಂಟ್ಸಮಾಜ ಸೇವಕ ಶೇಖರ ಜೆ.ಸಾಲಿಯಾನ್‌ಗೆ ‘ಸಮಾಜ ಸೇವಾ ರತ್ನ’ ಪ್ರಶಸ್ತಿ ಪ್ರಧಾನ:

ವರದಿ /ಚಿತ್ರ: ರೋನ್ಸ್ ಬಂಟ್ವಾಳ

ಮುಂಬಯಿ, ಜೂ.11: ಸಾಂತಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಇಲ್ಲಿನ ಕಳೆದ ರವಿವಾರ ಕಲೀನಾ ಇಲ್ಲಿನ ವಿದ್ಯಾನಗರಿಯ ಮುಂಬಯಿ ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ಪ್ರಭಾತ್ ಕಾಲೊನಿ ಪ್ರೀಮಿಯರ್ ಲೀಗ್-2026 ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಪ್ರಭಾತ್ ಕಾಲೊನಿಯಲ್ಲಿನ ಕಾಂಗ್ರೆಸ್‌ನ ಹಿರಿಯ ನೇತಾರ, ಸಮಾಜಸೇವಕರೂ ಆಗಿರುವ ಶೇಖರ ಜೆ.ಸಾಲಿಯಾನ್ ಇವರಿಗೆ ‘ಸಮಾಜ ಸೇವಾ ರತ್ನ’ ಬಿರುದ ಪ್ರದಾನಿಸಿಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಸ್ಥಾನೀಯ ಕಾರ್ಪೊರೇಟರ್ ಪೂಜಾ ವಿಶ್ವನಾಥ ಮಹಾಡೇಶ್ವರ ಉಪಸ್ಥಿತರಿದ್ದು ಶೇಖರ್ ಸಾಲಿಯಾನ್ ಅವರಿಗೆ ಶಾಲು ಹೊದಿಸಿ ಪುಷ್ಪಗುಚ್ಛ, ಬಿರುದಾವಲಿ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.ಶೇಖರ ಸಾಲಿಯಾನ್ ಅವರ ವಿಶೇಷ ಪ್ರಯತ್ನದಿಂದ ಸಂತಾಕ್ರೂಜ್ ಪೂರ್ವದಲ್ಲಿ ರೈಲ್ವೇ ರಿಸರ್ವೇಶನ್ ಆಫೀಸ್ ಮತ್ತು ಎಲ್ಲಾ ರೈಲ್ವೇ ಪ್ರವಾಸಿಗರಿಗೆ ಸೌಕರ್ಯ ಒದಗುವಂತೆ ಎರಡು ಲಿಫ್ಟ್‌ಗಳನ್ನು ತೆರೆಯಲಾಗಿದೆ.೨೦೧೦ರಲ್ಲಿ ವಿ.ಎನ್ ದೇಸಾಯಿ ಆಸ್ಪತ್ರೆಗೆ ೨೦ ಪೇಶೆಂಟ್ ಬೆಡ್‌ಸೆಟ್ ಹಾಗೂ ೨೦೧೧ರಲ್ಲಿ ‘ಮಹಿಳಾ ಪ್ರಸೂತಿಗೃಹ’ಕ್ಕೆ ಸಮವಸ್ತ್ರಗಳನ್ನು ನೀಡಿ ಸೇವೆ ಸಲ್ಲಿಸಿದ್ದು, ಪ್ರಭಾತ್ ಕಾಲೋನಿ ಪರಿಸರದ ಎಲ್ಲರಿಗೂ ಮಹಾನಗರ ಗ್ಯಾಸ್ ಪೈಪ್‌ಲೈನ್ ಸಂಪರ್ಕ ಸೌಕರ್ಯವನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಸಂಘಟಕರು ನೆನಪಿಸಿಕೊಂಡರು. ಅದರಂತೆ ಅನೇಕ ವರ್ಷಗಳಿಂದ ಇವರು ‘ಆರೋಗ್ಯ ಶಿಬಿರ’ಗಳನ್ನು ಅಯೋಜಿಸುತ್ತಾ ಬರುತ್ತಿದ್ದಾರೆ.

ನೇತ್ರ ಚಿಕಿತ್ಸಾ ಶಿಬಿರ ನಡೆದ ಎಲ್ಲಾ ಸಂದರ್ಭದಲ್ಲಿ ಉಚಿತ ಕನ್ನಡಕಗಳನ್ನು ಅನೇಕರಿಗೆ ವಿತರಿಸಿದ್ದರು. ೨೦೨೧ರಲ್ಲಿ ಅನೇಕ ಮಹಾಜನರಿಗೆ ಕೋವಿಡ್ ಲಸಿಕೆಗಳನ್ನೂ ನೀಡಲಾಗಿತ್ತು. ಇಂತಹ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ರೀ ಪೇಜಾವರ ಮಠದಲ್ಲಿ ಆಯೋಜಿಸಿದ್ದರು. ಅಂತೆಯೇ ‘ಪರ್ಯಾವರಣ ವಿಭಾಗ’ಕ್ಕೆ ಸಹಕಾರಿಯಾಗುವಂತೆ ನೆಹರೂ ರಸ್ತೆ, ಬಿಲ್ಲವ ಭವನದಿಂದ ಸಂಪೂರ್ಣ ಪ್ರಭಾತ್ ಕಾಲನಿ ಪರಿಸರದಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ‘ವೃಕ್ಷಾರೋಪಣ ಕಾರ್ಯಕ್ರಮ’ ಹಾಗೂ ಸದಾ ಅಹರ್ನಿಶಿ ಶ್ರಮಿಸಿ ವಿಧದ ಅನುಕೂಲ ಕಲ್ಪಿಸಿಕೊಡಲು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ಸ್ಮರಿಸಿಕೊಳ್ಳಲಾಯಿತು.

ಪ್ರಭಾತ್ ಕಾಲೊನಿ ಸಂಸ್ಥೆಯ ಸಂಘಟಕರಾದ ಸಂದೀಪ್ ಗೌಡ, ದೇವದಾಸ್ ಶಾಂತಿ ಮತ್ತು ರಾಜು ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಂದೀಪ್ ಗೌಡ ಸ್ವಾಗತಿಸಿ ಶೇಖರ ಸಾಲಿಯಾನ್ ಮತ್ತು ಅತಿಥಿಗಳನ್ನು ಪರಿಚಯಿಸಿದರು. ದೇವದಾಸ್ ಶಾಂತಿ ಕಾರ್ಯ ನಿರೂಪಿಸಿ ವಂದಿಸಿದರು.

Related posts

ಅಡಿಕೆ, ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪ್ರಿಮಿಯಂ ಪ್ರಾರಂಭ :ಪ್ರಭಾಕರ ಪ್ರಭು;

Voiceoftulunadu

ಸಿ ಎಲ್ ಪಿ (CLP) ನೂತನ ನಾಯಕರಾಗಿ ಡಿ. ಕೆ. ಶಿವಕುಮಾರ್ ಆಯ್ಕೆ

Voiceoftulunadu

ಮೂಲ್ಕಿಯಲ್ಲಿ ಕೋಸ್ಟಲ್ ಫಿಲಂ ಅವಾಡ್ಸ್೯ 2026 ಗೆ ಚಾಲನೆ ; ತುಳು ಸಿನಿಮಾ ಬೆಳವಣಿಗೆಗೆ ಕೋಸ್ಟಲ್ ಅವಾಡ್೯ ಪ್ರೇರಣೆ:

voiceoftulunadu

Leave a Comment