September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ವಿದ್ಯಾ ಪ್ರಕಾಶ್‌ ಅಮ್ಮಣ್ಣಾಯರವರ ‘ಭಕ್ತಿ ಭಾವ ಲಹರಿ” ಗೀತಾ ಸಂಕಲನ ಬಿಡುಗಡೆ : ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಪು ತಾಲೂಕು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠ;

ವರದಿ /ಚಿತ್ರ :ಈ ಮೀಡಿಯಾ

ಬಂಟಕಲ್ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದ ಆಶ್ರಯದಲ್ಲಿ ಬಂಟಕಲ್ಲು ಕಸಾಪ ಕಾಪು ತಾಲೂಕು ಕಾರ್ಯಾಲಯ “ನುಡಿ”ಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಉಡುಪಿ ಇಲ್ಲಿನ ಸಹ ಪ್ರಾಧ್ಯಾಪಕರಾದ ವಿದ್ಯಾ ಪ್ರಕಾಶ್ ಅಮ್ಮಣ್ಣಾಯರವರ ಭಕ್ತಿ ಭಾವ ಲಹರಿ” -ಗೀತಾ ಸಂಕಲನವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಬಿಡುಗಡೆ ಗೊಳಿಸಿದರು.

ನಂತರ ಮಾತನಾಡಿದ ಅವರು,ಧ್ವನಿ ಕಾವ್ಯದ ಆತ್ಮ ಎನ್ನುವ ಮಾತಿಗೆ ಪೂರಕವಾಗಿದೆ. ವಿದ್ಯಾ ಇವರ ಕಾವ್ಯ ರಚನೆಗಳಲ್ಲಿ ಭಕ್ತಿ ಭಾವ ತುಂಬಿ ತುಳುಕುವುದರಿಂದ ಸುಶ್ರಾವ್ಯವಾಗಿ ಹಾಡುವ ಕೀರ್ತನೆಗಳಾಗಿವೆ. ಭಜನೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸಲು ಸ್ವರ ಸಂಯೋಜನೆ ಮಾಡಿ ಹಾಡಲು ಯೋಗ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠ ವಹಿಸಿದ್ದರು.ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಮೋಹ‌ರ್, ತಾಲೂಕು ಘಟಕದ ಗೌರವ ಸಲಹಾ ಸಮಿತಿ ಜಿಲ್ಲಾ ಪ್ರತಿನಿಧಿ ಕೆ. ದೇವದಾಸ್ಹೆಬ್ಬಾರ್, ಕಾಪು ತಾಲೂಕು ಘಟಕದ ಗೌ. ಕಾರ್ಯದರ್ಶಿ ನೀಲಾನಂದ ನಾಯ್ಕ, ತಾಲೂಕು ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್, ಸಂಘಟನಾ ಕಾರ್ಯದರ್ಶಿ ದೀಪಕ್ ಬೀರ ಪಡುಬಿದ್ರಿ, ನಿವೃತ್ತ ಉಪನ್ಯಾಸಕ ಕೆ. ಭಾಸ್ಕರ ಕಾಮತ್, ಸತ್ಯಸಾಯಿ ಪ್ರಸಾದ್, ಮಧುಕರ್ ಎಸ್. ಕಲ್ಯಾ, ಜಿನೇಶ್ ಬಲ್ಲಾಳ್ ಕುತ್ಯಾರು, ಸುಂದರ ಟಿ. ಪಾಂಬೂರು ಉಪಸ್ಥಿತರಿದ್ದರು.ಸಹ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ವಂದಿಸಿದರು.

Related posts

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಣ್ಣೂರು ಮಾಲ್ಯಗುತ್ತು ಬಿ.ಬಿ. ಐತ್ತಪ್ಪ ರೈ ನೇಮಕ;

Voiceoftulunadu

ಲೋಬೊ ಪ್ರೊಡಕ್ಶನ್ ಅನಾವರಣ-‘ವೇಳ್ ಘಡಿ’ ಕೊಂಕಣಿ ಸಿನೆಮಾದ ಪೋಸ್ಟರ್ ರಿಲೀಸ್ : ಕೊಂಕಣಿ ಸಿನೆಮಾಗಳು ಅದೃಷ್ಟಶಾಲಿಗಳಾಗಿವೆ : ಲಾರೇನ್ಸ್ ಡಿ’ಸೋಜಾ (ಸಾಜನ್) ;

Voiceoftulunadu

ಕಾಪು ಕಡಲೊರೆತ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ::ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಯುಟಿ ಖಾದ‌ರ್ ;

Voiceoftulunadu

Leave a Comment