28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶವಾಣಿಜ್ಯ/ಉದ್ಯಮಸ್ಥಳೀಯ/ಪ್ರಾದೇಶಿಕ ಸುದ್ದಿ

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಶಿಕ್ಷಣ ತಜ್ಞ ಆದರ್ಶ್ ಶೆಟ್ಟಿ ನೇಮಕ;

ವರದಿ/ಚಿತ್ರ: ರವಿರಾಜ್ ಕಾವೂರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಮುಖ ಶಿಕ್ಷಣ ತಜ್ಞ, ಉದ್ಯಮಿ ಹಾಗೂ ವಕೀಲರಾದ ಆದರ್ಶ್ ಶೆಟ್ಟಿ ಅವರು ನೇಮಕಗೊಂಡಿದ್ದಾರೆ.

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಅವರ ಉಪಸ್ಥಿತಿಯಲ್ಲಿ, ರಾಜ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಈ ಮಹತ್ವದ ನೇಮಕಾತಿ ಆದೇಶವನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.

ನಾಯಕತ್ವದ ಹಿನ್ನೆಲೆ ಮತ್ತು ಸೇವೆ:

ಆದರ್ಶ್ ಶೆಟ್ಟಿ ಅವರು ಜೆಸಿಐ ಗಣೇಶಪುರದ ಅಧ್ಯಕ್ಷರಾಗಿ ಹಾಗೂ ಜೆಸಿಐ ಇಂಡಿಯಾ ವಲಯ 15ರ ಜೋನ್ ಆಫೀಸರ್ ಆಗಿ ಕಾರ್ಯನಿರ್ವಹಿಸಿ ಅತ್ಯುತ್ತಮ ಸಾಂಘಿಕ ನಾಯಕತ್ವದ ಅನುಭವ ಹೊಂದಿದ್ದಾರೆ. ಸದಾ ಸಮಾಜಮುಖಿ ಚಿಂತನೆ ಉಳ್ಳವರಾಗಿದ್ದು, ಹತ್ತಾರು ಸಾಮಾಜಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸಮಾಜದ ಅಭಿವೃದ್ಧಿ, ಶಿಕ್ಷಣ, ಯುವಜನರ ಸಬಲೀಕರಣ ಹಾಗೂ ನೊಂದವರಿಗೆ ನೆರವಾಗುವ ನಿಟ್ಟಿನಲ್ಲಿ ಇವರು ನೀಡಿರುವ ಕೊಡುಗೆಗಳು ಶ್ಲಾಘನೀಯವಾಗಿದ್ದು, ಇದೀಗ ಪಕ್ಷ ಸಂಘಟನೆಯಲ್ಲೂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ನೇಮಕಾತಿಯು ಸುರತ್ಕಲ್ ಭಾಗದಲ್ಲಿ ಪಕ್ಷದ ಪ್ರಚಾರ ಕಾರ್ಯಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದು ಹಿರಿಯ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.- ವಾಯ್ಸ್ ಆಫ್ ತುಳುನಾಡು ವರದಿ

Related posts

ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಆಶಾಕಿರಣ: ಉಡುಪಿ ಜಿಲ್ಲೆಗೆ 100 ಜ್ಞಾನ ದೀಪ ಶಿಕ್ಷಕರು ಪೂಜ್ಯ ಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಹತ್ವಕಾಂಕ್ಷಿ ಜ್ಞಾನ ದೀಪ ಯೋಜನೆ;

Voiceoftulunadu

ಬ್ರಾಹ್ಮಣ ಮಹಾಸಭಾ ರಿ. ಪುತ್ತೂರು ಆಶಯದಲ್ಲಿ ವಾರ್ಷಿಕೋತ್ಸವ-ಪ್ರತಿಭಾ ಪುರಸ್ಕಾರ:ಪುತ್ತೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ಭಗವತೀ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ;

Voiceoftulunadu

ಪುಸ್ತಕದ ಸಂಸ್ಕೃತಿ ಮಸ್ತಕದ ಸಂಸ್ಕೃತಿಯಾಗಬೇಕಾಗಿದೆ : ಡಾ. ಮಾನಸ ಪತ್ರಕರ್ತ ಜನಾರ್ದನ ಕೊಡವೂರು, ಲೇಖಕಿ ಪೂರ್ಣಿಮಾ ಜನಾರ್ದನ್ ದಂಪತಿಗಳಿಗೆ ಸನ್ಮಾನ;

Voiceoftulunadu

Leave a Comment