ವರದಿ/ಚಿತ್ರ: ದಿತೇಶ್ ಪೂಜಾರಿ ಮಂಗಳೂರು
ಮಂಗಳೂರು: ಶಾಲೆಗಳುಮತ್ತು ಆಸ್ಪತ್ರೆಯ ವಠಾರದಲ್ಲಿ ಜಂಕ್ ಫುಡ್ಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿರುವುದು ಸ್ವಾಗತಾರ್ಹ. ಆದರೆ ಇದನ್ನು ಇನ್ನಷ್ಟು ಪರಿಣಾಮಕಾರಿ ಮಾಡಬೇಕಾದ ಅಗತ್ಯ ಇದೆ.
ಕುರುಕುರು ತಿಂಡಿಗಳು ಈಗ ಸಣ್ಣಪುಟ್ಟ ಗೂಡಂಗಡಿಗಳಲ್ಲೂ ಧಾರಾಳವಾಗಿ ಸಿಗುತ್ತಿದ್ದು, ಅದು ಸುಲಭವಾಗಿ ಮಕ್ಕಳ ಕೈಗೆ ತಲು ಪುತ್ತವೆ. ಕೇವಲ ಶಾಲೆಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ನಿರ್ಬಂಧಿಸಿದ ಮಾತ್ರಕ್ಕೆ ಇದರಿಂದ ಮಕ್ಕಳನ್ನು ದೂರ ಇರಿ ಸಲು ಸಾಧ್ಯವಿಲ್ಲ. ಸಣ್ಣಪುಟ್ಟ ಅಂಗಡಿಗಳಲ್ಲಿ ಇವು ಮಾರಾಟವಾಗದಂತೆ ನೋಡಿಕೊಳ್ಳಬೇಕಾಗಿದೆ.
ಸಾಧ್ಯವಾದರೆ ಇಂಥ ಅನಾರೋಗ್ಯಕರ ಆಹಾರಗಳ ತಯಾರಿಯನ್ನೇ ನಿರ್ಬಂಧಿಸಲು ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ.ಈಗೀಗ ಮಕ್ಕಳು ಇಂಥ ಆಹಾ ರಗಳನ್ನು ಹೆಚ್ಚೆಚ್ಚು ತಿನ್ನುತ್ತಾ ಆರೋಗ್ಯ ವನ್ನು ಹಾಳು ಮಾಡಿಕೊಳ್ಳುತ್ತಿರುತ್ತಾರೆ. ಅದಕ್ಕೆ ಅವು ಸುಲಭದಲ್ಲಿ ಲಭ್ಯವಾಗುತ್ತಿರುವುದು ಹಾಗೂ ಅವುಗಳ ಬೆಲೆ ಯೂ ಕಡಿಮೆ ಇರುವುದು ಕಾರಣ. ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನ ಬೇಕು ಎಂದು ಅನಿಸುವಂಥ ರುಚಿ ಯನ್ನೂ ಇದು ಹೊಂದಿರುತ್ತವೆ.
ಆದರೆ ಆರೋಗ್ಯದ ವಿಷಯ ದಲ್ಲಿ ಮಾತ್ರ ಇದು ತುಂಬಾ ಹಾನಿ ಕಾರಕ. ಇದು ಗೊತ್ತಿದ್ದರೂ ಮನೆಯ ವರ ಒಪ್ಪಿಗೆಯಿಂದಲೇ ಇಂಥ ಆಹಾರಗ ಳನ್ನು ಮಕ್ಕಳು ಹೆಚ್ಚೆಚ್ಚು ತಿನ್ನುತ್ತಿರುವುದು ತುಂಬಾ ಆತಂಕ ಕಾರಿ ಸಂಗತಿ. ಆದ್ದರಿಂದ ಸಚಿವ ಖಾದರ್ ಅವರು ಈ ನಿಟ್ಟಿನಲ್ಲಿ ಗಂಭೀರ ಕ್ರಮಗಳನ್ನು ಕೈಗೊಳ್ಳಬೇ ಕಿದೆ. ಇಂಥ ಆಹಾರಗಳಿಂದ ಮಕ್ಕಳ ನ್ನು ದೂರ ಇರಿಸಲು ಪರಿಣಾಮ ಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ.
