September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಆಟಿ ಕೂಟಗಳಿಗೆ ಮೂಲ್ಕಿ ಯುವವಾಹಿನಿಯೇ ಪ್ರೇರಣೆ: ದಯಾನಂದ ಹೆಜ್ಜಾಡಿ;


ಮೂಲ್ಕಿ : ಆಟಿಡೊಂಜಿ ದಿನ ಕಾರ್ಯಕ್ರಮವನ್ನು ದಯಾನಂದ ಹೆಜ್ಜಾಡಿ ಉದ್ಘಾಟಿಸಿದರು.ಇಂದು ಕರಾವಳಿಯಾದ್ಯಂತ ಆಟಿ ಕೂಟ ಗಳು ಅದ್ದೂರಿಯಾಗಿ ನಡೆಯುತ್ತಿದ್ದರೆ ಅದಕ್ಕೆ ಮೂಲ್ಕಿ ಯುವವಾಹಿನಿಯೇ ಮೂಲ ಕಾರಣ ಎಂದು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಅಡಳಿತ ಮೊತ್ತೇಸರ ದಯಾನಂದ ಹೆಜ್ಜಾಡಿ ಹೇಳಿದರು.

ಆಟಿ ಕೂಟಗಳ ನಿರ್ಮಾತೃ ಮೂಲ್ಕಿ ಯುವವಾಹಿನಿ 24 ವರ್ಷದ ಆಟಿಡೊಂಜಿ ದಿನ ಕಾಠ್ಯಕ್ರಮವನ್ನು ಮೂಲ್ಕಿ ಬಿಲ್ಲವ ಸಂಘದ ಸಭಾಭವನದಲ್ಲಿ ಚಿಮಿಣಿ ಲ್ಯಾಂಪ್ ಬೆಳಗಿಸುವ ಮೂಲಕ ಹಿಂದಿನ ಕಾಲಘಟ್ಟದ ನೆನಪನ್ನು ಮಾಡಿಕೊಂಡು ವಿಶಿಷ್ಣವಾಗಿ ಉದ್ಘಾಟಿಸಿ ಮಾತನಾಡಿದರು.


ಆಟಿದ ಮದಿಪು ನೀಡಿದ ಉಗ್ಗೆಲ್‌ಬೆಟ್ಟು ಶ್ರೀ ಬ್ರಹ್ಮಬೈದೇರು ಮತ್ತು ಚಿಕ್ಕಮ್ಮ ದೇವಿ ಗರೋಡಿ ಅಧ್ಯಕ್ಷ ದಯಾನಂದ ಕರ್ಕೇರ ಮಾತನಾಡಿ, ಮರೆಯಾಗುತ್ತಿರುವ ತುಳುನಾಡ ಸಂಪ್ರದಾಯಗಳು ಇದೀಗ ವೇದಿಕೆಯ ಮೂಲಕ ಪ್ರಚುರ ಪಡಿಸಲಾಗುತ್ತಿದೆ ಈ ಪರಂಪರೆ ಉಳಿಯಬೇಕಾದರೆ ಯುವ ಸಮುದಾಯವನ್ನು ಯುವವಾಹಿನಿ ಸಂಸ್ಥೆಯಲ್ಲಿ ಬೆಳೆಸಬೇಕಾಗಿದೆ ಎಂದರು.


ಹಿರಿಯ ಸಮಾಜ ಸೇವಕ ವಾಸು ಪೂಜಾರಿ ಚಿತ್ರಾಪು ಅವರನ್ನು ಆಟಿದ ತಮ್ಮನದೊಂದಿಗೆ ಸನ್ಮಾನಿಸಲಾಯಿತು.
ಕುಡ್ಲ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಡು, ಮೂಲ್ಕಿ ರೋಟರಿ ಕ್ಲಬ್ ನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ಮಾತನಾಡಿದರು. ಕಾರ್ಯಕ್ರಮ ನಿರ್ದೇಶಕಿ ಚಿತ್ರಾ ಸುರೇಶ್ ಜತ್ತನ್ನ ಮತ್ತು ಯುವವಾಹಿನಿ ಕೋಶಾಧಿಕಾರಿ ಭವಿಷ್ ಬಿ. ಸಾಲ್ಯಾನ್ ಇದ್ದರು.


ಮೂಲ್ಕಿ ಯುವವಾಹಿನಿ ಘಟಕ ಅಧ್ಯಕ್ಷೆ ಚರಿಷ್ಠಾ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಜಯಕುಮಾರ್ ಕುಬೆವೂರು ಯಕ್ಷಗಾನ ಭಾಗವತಿಗೆ ಮೂಲಕ ಪ್ರಸ್ತಾವಿಸಿದರು. ನರೇಂದ್ರ ಕೆರೆಕಾಡು ಮತ್ತು ಮೋಹನ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.


ಯುವವಾಹಿನಿ ಕಾರ್ಯದರ್ಶಿ ವೇದಾವತಿ ಜಯಕುಮಾರ್ ವಂದಿಸಿದರು. ಮೂಲ್ಕಿ ಯುವವಾಹಿನಿ ಕಲಾವಿದರಿಂದ ಆಟಿದ ನಲಿಕೆ- ಪದರಂಗಿತ, ಸಿನೆಮಾ ನಟರಾದ ಪ್ರಜ್ವಲ್ ಭಂಡಾರಿ, ಶಶಿರಾಜ್ ಆಚಾರ್ಯ ಪಡುಕುತ್ಯಾರು, ವಿನಾಯಕ ಜೆಪ್ಪು ಅವರಿಂದ ಆಟಿದ ತೆಲಿಕೆ ಹಾಸ್ಯ ಪ್ರಹಸನಗಳು : ನಡೆಯಿತು. ಬಳಿಕ ನಡೆದ ‘ಆಟಿದ ಅಟಿಲ್ಲದ ಕಮೈನೊ’ದಲ್ಲಿ 1,500ಕ್ಕೂ ಅಧಿಕ ಮಂದಿ ಆಟಿ ಊಟ ಸವಿದರು.

ಹಿರಿಯ ಸಮಾಜ ಸೇವಕ ಶಿಕ್ಷಣ ತಜ್ಞ ಶ್ರೀ ವಾಸು ಪೂಜಾರಿ ಚಿತ್ರಾಪು ಅವರನ್ನು ಆಟಿದ ತಮ್ಮನದಲ್ಲಿ ವಿಶೇಷವಾಗಿ ಗೌರವಿಸಲಾಯಿತು

Related posts

ಉಡುಪಿ ಮಲಬಾರ್ ಗೋಲ್ಡ್ ನಲ್ಲಿ ” ನುವಾ” ವಜ್ರಾಭರಣ ಅನಾವರಣ: ವಜ್ರಾಭರಣ ಅನಾವರಣಗೊಳಿಸಿದ ರೂಪದರ್ಶಿಗಳಾದ ನಿಧಿ, ಅನುಷಾ, ನಿಹಾರಿಕಾ ಶೆಟ್ಟಿ, ಶ್ರಾವ್ಯ;

Voiceoftulunadu

ಮೂಡುಬೆಳ್ಳೆ ಸೈಂಟ್ ಲಾರೆನ್ಸ್ ಶಾಲೆಯಲ್ಲಿ ಧರ್ಮಸ್ಥಳ ಗಾ. ಯೋಜನೆಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ: ಕಾರ್ಯಕ್ರಮ ಉದ್ಘಾಟಿಸಿದ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ದೇವದಾಸ್‌ ಹೆಬ್ಬಾ‌ರ್ ;

Voiceoftulunadu

ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ;

Voiceoftulunadu

Leave a Comment