28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಅಖಿಲ ಭಾರತ ದೈವರಾಧಾಕರ ಒಕ್ಕೂಟ ಕೇಂದ್ರೀಯ( ರಿ) ಉಡುಪಿ ತಂಡದ ವತಿಯಿಂದ ಪುತ್ತೂರು ವಿಧಾನಸಭಾ ಶಾಸಕರಾದ ಅಶೋಕ್ ರೈಯವರನ್ನು ಅವರ ಕಚೇರಿಯಲ್ಲಿ ಭೇಟಿ : ಒಕ್ಕೂಟದ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಮನವಿ;

ವರದಿ/ ಚಿತ್ರ :ವಿನೋದ್ ಶೆಟ್ಟಿ ಉಡುಪಿ

ಉಡುಪಿ/ಪುತ್ತೂರು: ಅಖಿಲ ಭಾರತ ದೈವರಾಧಾಕರ ಒಕ್ಕೂಟ ಕೇಂದ್ರೀಯ( ರಿ) ಉಡುಪಿ ಜಿಲ್ಲೆ ಇವರ ವತಿಯಿಂದ ಪುತ್ತೂರು ವಿಧಾನಸಭಾ ಶಾಸಕರಾದ ಅಶೋಕ್ ರೈಯವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಒಕ್ಕೂಟ ಪ್ರಮುಖ ಬೇಡಿಕೆಗಳನ್ನು ನೆರವೇರಿಸುವ ಕುರಿತಾಗಿ ಮನವಿ ಸಲ್ಲಿಸಲಾಯಿತು.

ಒಕ್ಕೂಟದ ಪ್ರಮುಖ ಬೇಡಿಕೆಗಳ ವಿಷಯ :

ದೈವಾರಾಧನೆಯ ಕ್ಷೇತ್ರದಲ್ಲಿ ದುಡಿಯುವ ದೈವ ಚಾಕ್ರಿ ಅವರನ್ನು ಸರ್ಕಾರದ ಸಂಬಂಧಪಟ್ಟ ಇಲಾಖೆಗೆ ಸೇರ್ಪಡೆಗೊಳಿಸುವುದರ ಕುರಿತು ಮನವಿ ಸಲ್ಲಿಸಲಾಯಿತು.

ಮನವಿಯ ಮುಖ್ಯ ಅಂಶಗಳು:

1.ದೈವಾರಾಧನೆಯ ಕ್ಷೇತ್ರದಲ್ಲಿ ತುಳುನಾಡಿನ ಸಂಸ್ಕೃತಿಗೆ ಸಾವಿರ ವರ್ಷಗಳ ಇತಿಹಾಸವಿದೆ. ಉಡುಪಿ ಮಂಗಳೂರಿನಲ್ಲಿ ಸುಮಾರು 10 ರಿಂದ 20 ಸಾವಿರ ಮಂದಿ ದೈವ ಚಾಕ್ರಿ ಅವರು ಇದ್ದಾರೆ.16 ವರ್ಗ ದೈವಚಾಕ್ರಿ ವರ್ಗದವರನ್ನು ಸರ್ಕಾರ ಸಂಬಂಧಪಟ್ಟ ಇಲಾಖೆ ಸೇರ್ಪಡೆಗೊಳಿಸಬೇಕು.ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ವೇತನ ಮತ್ತು ಆರೋಗ್ಯ ವಿಮಾ ಯೋಜನೆ ಒದಗಿಸಬೇಕು.

2.ದೈವಾರಾಧನೆಯು ತುಳುನಾಡಿನ ಸಂಸ್ಕೃತಿಯ ಒಂದು ಭಾಗವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಅಕಾಡೆಮಿಯನ್ನು ರಚಿಸಿ ಸಹಾಯ ಮಾಡಬೇಕು.

3.ಹಾಗೆಯೇ ಬಹುಭಾಷಾ ಭಾಷೆಯಲ್ಲಿ ಒಂದಾಗಿರುವ ತುಳು ಮಾತೃಭಾಷೆ ಮತ್ತು ದೈವಾರಾಧನೆಯಲ್ಲಿ ಬಳಸುವುದರಿಂದ ಮೂಲ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಿ, ರಾಷ್ಟ್ರೀಯ ಸ್ಥಾನಮಾನ ಒದಗಿಸಬೇಕು.

4.ಸರ್ಕಾರಿ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ವೇದಿಕೆಗಳಲ್ಲಿ ಮೆರವಣಿಗೆಗಳಲ್ಲಿ ನಮ್ಮ ದೈವಾರಾಧನೆಯ ಸಂಬಂಧಿಸಿದ ವೇಷಭೂಷಣವನ್ನು, ಹಾಸ್ಯಾಸ್ಪದವಾಗಿ ಬಳಸದಂತೆ ಹಾಗೆ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಕಟ್ಟುನಿಟ್ಟಿನ ಕಾನೂನು ತರಬೇಕು.

ಈ ಎಲ್ಲಾ ವಿಷಯಗಳನ್ನು ಸರ್ಕಾರದ ಮಟ್ಟದಲ್ಲಿ ಶೀಘ್ರವಾಗಿ ಪರಿಹರಿಸಿ, ಸರ್ಕಾರದ ಸ್ಥಾನಮಾನವನ್ನು ದೈವಚಾಕ್ರಿ ಅವರಿಗೆ ಸಿಗುವಂತೆ ಒದಗಿಸಬೇಕಾಗಿ ಈ ಮೂಲಕ ಮನವಿ ಪತ್ರವನ್ನು ನೀಡಲಾಯಿತು.

ಈ ಒಂದು ಸಂದರ್ಭದಲ್ಲಿ ಒಕ್ಕೂಟದ ಕೇಂದ್ರೀಯ ಸಂಸ್ಥಾಪಕ ಅಧ್ಯಕ್ಷರಾದ ವಿನೋದ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ ಉಪಾಧ್ಯಕ್ಷರಾದ ನವೀನ್ ಪಾತ್ರಿ ವಾಸು ಶೇರಿಗಾರ ಘಟಕದ ಅಧ್ಯಕ್ಷರಾದ ಸುಂದರ ಪೂಜಾರಿ ಹಾಗೂ ನಗರ ಘಟಕದ ಅಧ್ಯಕ್ಷರಾದ ಪ್ರಭಾಕರ್ ಖಜಾಂಜಿ ಸಮಿತ ಶೆಟ್ಟಿ ಸಂಘಟನೆ ಕಾರ್ಯದರ್ಶಿ ಬಾಲಚಂದ್ರ ಪೂಜಾರಿ ಕೃಷ್ಣ ಪೂಜಾರಿ ಅಂಜಾರು ಹಾಗೂ ರಾಮ ಉಪಸ್ಥಿತಿ ಇದ್ದರು.

Related posts

ಮಣಿಪಾಲ ಕೆಎಂಸಿಯಲ್ಲಿ ಪ್ರಣವ್ ಹೆಗ್ಡೆ ಕುಟುಂಬದಿಂದ ಅಂಗಾಂಗ ದಾನ, ಹಲವರಿಗೆ ಜೀವದಾನ ಪ್ರಣವ್‌ ಹೆಗ್ಡೆ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ;

Voiceoftulunadu

ಕೊಡ್ಮಾಣ್:ಸೆ.05ರಂದು ಶ್ರೀ ಕೃಷ್ಣ ಲೀಲೋತ್ಸವ, ಮೊಸರು ಕುಡಿಕೆ ಉತ್ಸವ.

Voiceoftulunadu

ಮುಂಬೈನಲ್ಲಿ ಮಂಗಳೂರಿನ ಲೆಕ್ಸಾ ಲೈಟಿಂಗ್ ಸಂಸ್ಥೆಗೆ ದೇಶದ ಅತ್ಯುತ್ತಮ ಲೈಟಿಂಗ್ ತಂತ್ರಜ್ಞಾನ ನವೀನತಾ ಪ್ರಶಸ್ತಿ:

Voiceoftulunadu

Leave a Comment