September 5, 2026
Uncategorizedಕ್ರೈಮ್/ಅವಘಡಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮಂಗಳೂರಿನ ಮಹೇಶ್ ಮೋಟರ್ಸ್ ಮಹೇಶ್ ಶೇಕ ವಿಧಿವಶ;

ವರದಿ ಚಿತ್ರ ರೋನ್ಸ್ ಬಂಟ್ವಾಳ್

ಮುಂಬಯಿ, ಜು.29: ಕರ್ನಾಟಕ ಕರಾವಳಿಯ ಹೆಸರಾಂತ ಪ್ರತಿಷ್ಠಿತ ಸಾರಿಗೆ ಉದ್ಯಮಿ ಮಹೇಶ್ ಮೋಟರ್ಸ್ ಮಾಲಕರಾದ ಎ.ಕೆ ಜಯರಾಮ ಶೇಕರ ಪುತ್ರ ಸುಪುತ್ರ ಮಹೇಶ್ ಶೇಕ (49) ಇಂದು ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರು ಅಲ್ಲಿನ ಖಾಸಾಗಿ ಆಸ್ಪತ್ರೆಯಲ್ಲಿ ದೈವಾಧೀನರಾದರು.ಮೃತರು ತಂದೆ, ತಾಯಿ, ಪತ್ನಿ, ಸುಪುತ್ರಿ, ಅಣ್ಣ, ಅಕ್ಕ ಹಾಗೂ ತಂಗಿ ಸಹಿತ ಅಪಾರ ಸಂಖ್ಯೆಯ ಉದ್ಯಮಿಗಳು, ಸ್ನೇಹಿತರನ್ನು ಅಗಲಿದ್ದಾರೆ.

ಮಹೇಶ್ ಅವರ ಆತ್ಮೀಯ ನಗು, ಸರಳ ವ್ಯಕ್ತಿತ್ವ ಮತ್ತು ಪ್ರೀತಿಯ ನಡವಳಿಕೆ ಸದಾ ಎಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಅಗಲಿದ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಹಾಗೂ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಮತ್ತು ಬಂಧು-ಬಳಗದವರಿಗೆ ನೀಡಲಿ ಎಂದು ಪ್ರಾಥಿಸುವುದಾಗಿ ಕರಾವಳಿಯ ಸಾರಿಗೆ ಉದ್ಯಮಿಗಳು, ಮಹೇಶ್ ಮೋಟರ್‍ಸ್ ಸಿಬ್ಬಂದಿಗಳು, ಹಿತೈಷಿಗಳು ತೀವ್ರ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಕೋರಿದ್ದಾರೆ.

ಮೃತರ ಅಂತ್ಯಕ್ರಿಯೆ: ಮೃತರ ಅಂತಿಮ ವಿಧಿ ವಿಧಾನಗಳು ನಾಳೆ (೩೦. ಜುಲೈ,೨೦೨೬) ಗುರುವಾರ ಬೆಳಿಗ್ಗೆ ೧೦.೦೦ ಗಂಟೆಗೆ ಜ್ಯೋತಿ ಪ್ರಕಾಶ ನಿವಾಸ, ಕುಲಶೇಖರ ಮಂಗಳೂರು ಇಲ್ಲಿ ನಡೆಯಲಿರುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ

Related posts

ಡಾ. ಜಿ.ಪರಮೇಶ್ವರ್ ಅವರು ತಮ್ಮ ವ್ಯಕ್ತಿತ್ವದಿಂದ ಶ್ರೀಮಂತರು : ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ;

Voiceoftulunadu

ಉಚ್ಚಿಲ : ಕಸಾಪ ದಿಂದ ಪ್ರತಿಭಾ ಪುರಸ್ಕಾರ, ರ‍್ಯಾಂಕ್ ವಿಜೇತರಿಗೆ ಅಭಿನಂದನೆ;

Voiceoftulunadu

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್‌: ಸೈಬರ್ ಪೊಲೀಸರಿಗೆ ದೂರು ‘ಜಲಗಾರ ಯೂನಿವರ್ಸಿಟಿ‘ ಹೆಸರಿನ ನಕಲಿ ಖಾತೆಯಿಂದ ಮೆಸೇಜ್

voiceoftulunadu

Leave a Comment