September 5, 2026
Uncategorizedಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಶೀಂಬ್ರ ಸಿದ್ಧಿ ವಿನಾಯಕ ದೇವಸ್ಥಾನದ ನದಿ ಸ್ನಾನಘಟ್ಟ ಲೋಕಾರ್ಪಣೆ: ಸ್ವರ್ಣೆಗೆ ಬಾಗಿನ ಸಮರ್ಪಣೆ ;

ವರದಿ /ಚಿತ್ರ :ದಿತೇಶ್ ಮಂಗಳೂರು

ಉಡುಪಿ: ಮೂಡು ಪೆರಂಪಳ್ಳಿ ಶೀಂಬ್ರ ಸಿದ್ದಿ ವಿನಾಯಕ ದೇವಸ್ಥಾನದ ನೂತನ ನದಿ ಸ್ನಾನ ಘಟ್ಟ ಲೋಕಾ ರ್ಪಣೆಯನ್ನು ಉಡುಪಿ ಶಾಸಕ ಯಶ್ 2 ಪಾಲ್ ಸುವರ್ಣ ಹಾಗೂ ದೇವ ಸ್ಥಾನದ ಪ್ರಮುಖರು ಉಡುಪಿಯ – ಜೀವನಾಡಿಯಾಗಿರುವ ಸ್ವರ್ಣ ನದಿಗೆ ಬಾಗಿನ ಸಮರ್ಪಣೆ ಮಾಡುವ 2 ‘ಮೂಲಕ ಲೋಕಾರ್ಪಣೆಗೊಳಿಸ ಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ ಇತಿ ಹಾಸ ಪ್ರಸಿದ್ಧ ಶೀಂಬ್ರ ಸಿದ್ಧಿ ವಿನಾಯಕ ದೇವಸ್ಥಾನದ ನದಿ ಸ್ನಾನ ಘಟ್ಟ ಹಲವು ವರ್ಷಗಳಿಂದ ತೀವ್ರ ನದಿ ಕೊರೆತ ದಿಂದ ಹಾನಿಗೀಡಾಗಿತ್ತು.

ಪ್ರತಿವರ್ಷ ಕೃಷ್ಣಂಗಾರಕ ಚತುರ್ದಶಿಯಂದು ವಿವಿಧ ರಾಜ್ಯಗಳಿಂದ ತೀರ್ಥಸ್ನಾನಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಸಮಸ್ಯೆಗಳ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯ ಮನವಿಯಂತೆ ಸಣ್ಣ ನೀರಾವರಿ ಇಲಾಖೆಯ ಮೂಲಕ 2.25 ಕೋಟಿ ಅನುದಾನ ಒದಗಿಸಿ ಇಂದು ಕೃಷ್ಣಂ ಗಾರಕ ಚತುರ್ದಶಿ ಯಂದೇ ಉಡುಪಿಯ ಜೀವನಾಡಿ ಯಾಗಿ ಕುಡಿಯುವ ನೀರು, ಆಸರೆ ಯಾಗಿರುವ ಸ್ವರ್ಣ ನದಿಗೆ ದೇವ ಸ್ಥಾನದ ವತಿಯಿಂದ ಬಾಗಿನಸಮರ್ಪಣೆ ಮಾಡುವ ಮೂಲಕ ನೂತನ ಸ್ನಾನ ಘಟ್ಟದ ಲೋಕಾರ್ಪಣೆ ಗೊಳಿಸಲಾಗಿದ್ದು, ಮುಂದಿನ ದಿನಗಳ ‘ಲ್ಲಿಯೂ ದೇವಸ್ಥಾನದ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಸಹ ಕಾರ ನೀಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷೆ ಪ್ರಭಾಕರ ಪೂಜಾರಿ, ಗಣ್ಯರಾದ ಅಜಿತ್ ಪೈ, ರಮೇಶ್ ರಾವ್, ಬಾಲಾಜಿ ರಾಘವೇಂದ್ರ ಆಚಾರ್ಯ, ಯುವ ಬ್ರಾಹ್ಮಣ ಪರಿಷತ್ತಿನ ಚಂದ್ರಕಾಂತ ಕೆ.ಎನ್., ನಾಗರಾಜ ತಂತ್ರಿ, ಹರಿಕೃಷ್ಣ ಶಿವತ್ತಾಯ, ಪ್ರಶಾಂತ ಭಟ್ ಪೆರಂಪಳ್ಳಿ, ಅನಿಟ ಬೆಲಿಂಡಾ ಡಿಸೋಜಾ, ಮಂಜುನಾಥ ಮಣಿ ಪಾಲ, ಸುಮಾ, ವಿಜಯ ಪೂಜಾರಿ, ಗಣಪತಿ ಭಟ್, ವಾದಿರಾಜ ಆಚಾರ್ಯ, ಬಿಜೆಪಿ ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ಶಶಾಂಕ್ ಶಿವತ್ತಾಯ, ಗೋಪಾಲಾಚಾರ್ ಸೇರಿದಂತೆ ವಿದ್ವಾಂಸರು ಹಾಗೂ ಗಣ್ಯರು ಉಪಸ್ಥಿತರಿದ್ದರು.-

Related posts

ಜಾಗತಿಕ ಡಿಜಿಟಲ್ ಲೋಕದ ಸಾಧಕ ಅತುಲ್ ಹೆಗ್ಡೆ ಸ್ವರ್ಗಸ್ಥ;

Voiceoftulunadu

ರೋಟರಿ ಕ್ಲಬ್ ಕಲ್ಯಾಣಪುರ ವತಿಯಿಂದ ಪರೀಕ್ಷಾ ಪೂರ್ವ ತಯಾರಿಯ ಉಪನ್ಯಾಸ ಕಾರ್ಯಕ್ರಮ: ವಿನಯ ಕುಮಾ‌ರ್ ಕಬ್ಬಾಡಿ ಅವರಿಂದ “ಮೊಬೈಲ್ ಬಿಡಿ ಪುಸ್ತಕ ಹಿಡಿ” ಎಂಬ ವಿಷಯದ ಕುರಿತು ಮಾಹಿತಿ ;

Voiceoftulunadu

ಸಹಕಾರ ಭಾರತಿ ಉಡುಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಜಿಲ್ಲಾ ಅಧ್ಯಕ್ಷ ದಿನೇಶ್‌ ಹೆಗ್ಡೆ ಆತ್ರಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ;

Voiceoftulunadu

Leave a Comment