ವರದಿ /ಚಿತ್ರ :ಈ ಮೀಡಿಯಾ
ಉಚ್ಚಿಲ: ಪಡುಬಿದ್ರಿ ಕಂಚಿನಡ್ಕ ಮಿಂಚಿನ ಬಾವಿ ಕೊರ್ದಬ್ಬು ಟ್ರಸ್ಟ್ ವತಿಯಿಂದ ಉಚ್ಚಿಲ ಬಡಾ ಗ್ರಾಮದ ಪೊಲ್ಯದಲ್ಲಿರುವ ಅಂಗನವಾಡಿಯ 20 ವಿದ್ಯಾರ್ಥಿಗಳಿಗೆ ಉಚಿತ ವಿತರಿಸಲಾಯಿತು.
ಸಮವಸ್ತ್ರಕೊರ್ದಬ್ಬು ಟ್ರಸ್ಟ್ ನ ಅಧ್ಯಕ್ಷರಾದ ವಾಮನ ಸಾಲಿಯಾನ್, ಖಜಾಂಚಿ ರಮೇಶ್ ಉಚ್ಚಿಲ, ಸದಸ್ಯರಾದ ಜಗ್ಗು ಪಿ ಮಲ್ಲಾರ್, ಕೊರಗ ಬೆಳಪು, ಸುಂದರ್ ಗುಜ್ಜರಬೆಟ್ಟು, ಇವರು ಸಮವಸ್ತ್ರವಿತರಿಸಿದರು.
ಈ ಸಂದರ್ಭ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಪಂಚಾಯತ್ ಮಾಜಿ ಸದಸ್ಯರಾದ ಮಜೀದ್ ಹಸ್ಸನ್ ಬೀರಾಲಿ, ಅಂಗನವಾಡಿ ಅಧ್ಯಾಪಕಿ ಶ್ರೀಮತಿ ಪ್ರಮೀಳ ಎಸ್, ಸಹಾಯಕಿ ಶ್ರೀಮತಿ ಶೋಭಾ ಉಪಸ್ಥಿತರಿದ್ದರು.
