September 4, 2026
Uncategorizedಕ್ರೈಮ್/ಅವಘಡಜಿಲ್ಲಾ ಸುದ್ದಿರಾಜಕೀಯಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಪತ್ರಕರ್ತ-ರಂಗನಟ ನರೇಂದ್ರ ಕೆರೆಕಾಡು ಅವರಿಗೆ ಮಾತೃ ವಿಯೋಗ;

ಮಂಗಳೂರು : ಪತ್ರಕರ್ತ ಹಾಗೂ ಸಿನಿಮಾ ರಂಗಭೂಮಿ ಕಲಾವಿದ ನರೇಂದ್ರ ಕೆರೆಕಾಡು ಅವರ ಮಾತೃಶ್ರೀ ಮೂಲ್ಕಿಯ ಕೆರೆಕಾಡು ಸ್ವಾತಂತ್ರ್ಯ ಸೇನಾನಿ ದಿ.ಸೋಮಪ್ಪ ಪೂಜಾರಿ ಅವರ ಮನೆತನದ “ನಮ್ಮನೆ” ನಿವಾಸಿ ಮೋನಪ್ಪ ಪೂಜಾರಿ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಪೂಜಾರ್ತಿ (81) ಅವರು ಹೃದಯಾಘಾತದಿಂದ ಆಗಸ್ಟ್ 22ರಂದು ನಿಧನರಾಗಿದ್ದಾರೆ.

ಅವರು ಪುತ್ರ ನರೇಂದ್ರ ಕೆರೆಕಾಡು ಸಹಿತ ಪುತ್ರಿ ಜಾಗೂ ಪತಿಯನ್ನು ಅಗಲಿದ್ದಾರೆ.ಅವರ ಅಂತ್ಯ ಸಂಸ್ಕಾರದ ಅಂತಿಮ ವಿಧಿ ವಿಧಾನವು ಬಪ್ಪನಾಡುವಿನ ಬಡಗುಹಿತ್ಲುವಿನಲ್ಲಿ ನಡೆದು ಕೆರೆಕಾಡು ಸಾರ್ವಜನಿಕ ರುದ್ರಭೂಮಿಯಲ್ಲಿ ಶವ ಸಂಸ್ಕಾರ ನಡೆಯಿತು. ಕುಟುಂಬಿಕರು, ಆಪ್ತರು ಅಂತಿಮ ದರ್ಶನ ಪಡೆದರು.

ಮೃತರ ಆತ್ಮಕ್ಕೆ ಅಂತಾರಾಷ್ಟ್ರೀಯ ವಾಸ್ತುತಜ್ಞರು, ಆಧ್ಯಾತ್ಮಿಕ ಗುರುಗಳಾದ ಅಂತರಾಷ್ಟ್ರೀಯ ವಾಸ್ತುತಜ್ಞರು ಹಾಗೂ ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಯುವ ಉದ್ಯಮಿ ರಾಹುಲ್ ಚಂದ್ರಶೇಖರ್, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ ಬೆರ್ನಾರ್ಡ್, ಕಿನ್ನಿಗೋಳಿ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ನ್ಯಾಯವಾದಿ ಬಿಪಿನ್ ಪ್ರಸಾದ್ ಮೂಲ್ಕಿ, ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಶಿಮಂತೂರು, ಮೂಲ್ಕಿ-ಮೂಡಬಿದಿರೆಯ ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಮೂಲ್ಕಿ ಯುವವಾಹಿನಿ ಘಟಕದ ಅಧ್ಯಕ್ಷೆ ಶ್ರೀಮತಿ ಚರಿಷ್ಮಾ ಶ್ರೀನಿವಾಸ್ ಬಪ್ಪನಾಡು, ಬಿರುವೆರ್ ಕುಡ್ಲ ಮೂಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು, ಸಮಾಜ ಸೇವಕ ಗೋಪಿನಾಥ ಪಡಂಗ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಮೂಲ್ಕಿ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿವಾಸ್ ಬಪ್ಪನಾಡು, ಕಿನ್ನಿಗೋಳಿ ವಿಜಯಾ ಕಲಾವಿದರು ಸಂಸ್ಥೆಯ ಅಧ್ಯಕ್ಷ ಶರತ್ ಶೆಟ್ಟಿ, ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ಕುಮಾರ್ ಪಿ.ಆರ್. ಮತ್ತಿತರರು ತೀವ್ರ ಸಂತಾಪ ಸೂಚಿಸಿದ್ದಾರೆ.

Related posts

ಸಹೋದರತ್ವ ಸಾರುವ ರಕ್ಷಾ ಬಂಧನ ಭಾತೃತ್ವದ ಬೆಸುಗೆ ಬೆಸೆಯಲಿ : ಕುತ್ಯಾರು ನವೀನ್ ಶೆಟ್ಟಿ , ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ‘ಮಾಧ್ಯಮ ಬಂಧುಗಳೊಂದಿಗೆ ರಕ್ಷಾ ಬಂಧನ’ ಕಾರ್ಯಕ್ರಮ ;

Voiceoftulunadu

ಗಾಯಕರಿಗೆ ವೇದಿಕೆ ನಿರ್ಮಿಸೋಣ ; ಭುವನಾಭಿರಾಮ ಉಡುಪ :

voiceoftulunadu

ಬಂಟಕಲ್ಲು ದುರ್ಗಾಪರಮೇಶ್ವರಿ ದೇಗುಲದ ಸಭಾಭವನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯಹಸ್ತ ಮಂಜೂರಾತಿ ಪತ್ರ ಹಸ್ತಾಂತರಿಸಿದ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ;

Voiceoftulunadu

Leave a Comment