September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಸಹೋದರತ್ವ ಸಾರುವ ರಕ್ಷಾ ಬಂಧನ ಭಾತೃತ್ವದ ಬೆಸುಗೆ ಬೆಸೆಯಲಿ : ಕುತ್ಯಾರು ನವೀನ್ ಶೆಟ್ಟಿ , ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ‘ಮಾಧ್ಯಮ ಬಂಧುಗಳೊಂದಿಗೆ ರಕ್ಷಾ ಬಂಧನ’ ಕಾರ್ಯಕ್ರಮ ;

ವರದಿ /ಚಿತ್ರ: ಈ ಮೀಡಿಯಾ

ಉಡುಪಿ: ಪರಸ್ಪರ ಸಹಕಾರದೊಂದಿಗೆ ಜನಹಿತ ತೊಡಗಿಸಿಕೊಳ್ಳುವುದು ಜನತಾ ಕಾರ್ಯದಲ್ಲಿ ಭಾರತೀಯ ಪಾರ್ಟಿಯ ಉದ್ದೇಶ. ಸಹೋದರಿಯರ ರಕ್ಷಣೆಯ ಜೊತೆಗೆ ಎಲ್ಲರೂ ಒಟ್ಟಾಗಿ ಒಂದಾಗಿ ಸಾಗಬೇಕು ಎನ್ನುವ ದೃಷ್ಟಿಕೋನದಲ್ಲಿ ಬಿಜೆಪಿ ಇಂದು ಈ ಮಟ್ಟಕ್ಕೆ ಬೆಳೆದಿದೆ. ಸಹೋದರತ್ವ ಸಾರುವ ರಕ್ಷಾ ಬಂಧನ ಭಾತೃತ್ವದ ಬೆಸುಗೆ ಬೆಸೆಯಲಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಅಧ್ಯಕ್ಷೆ ಸಂಧ್ಯಾ ರಮೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಛೇರಿಯಲ್ಲಿ ನಡೆದ ‘ಮಾಧ್ಯಮ ಬಂಧುಗಳೊಂದಿಗೆ ರಕ್ಷಾ ಬಂಧನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾಧ್ಯಮ ಬಂಧುಗಳ ಪ್ರತಿನಿಧಿಗಳಾಗಿ ಗೋಪಾಲಕೃಷ್ಣ ಪಾದೂರು, ಜನಾರ್ದನ ಕೊಡವೂರು, ರಿಚಾರ್ಡ್ ಡಿಸೋಜಕಲ್ಯಾಣಪುರ, ಕಿರಣ್ ಮಂಜನಬೈಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ರಕ್ಷೆ ಸ್ವೀಕರಿಸಿದರು.ಪತ್ರಕರ್ತ ಜನಾರ್ದನ ಕೊಡವೂರು ಮಾತನಾಡಿ, ನಾಡಿನ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹಿಳಾ ಮೋರ್ಚಾದ ನಡೆ ಪ್ರಶಂಸನೀಯ. ಇಂತಹ ಭಾವನಾತ್ಮಕ ಮಾಧ್ಯಮ ಕಾರ್ಯಕ್ರಮಕ್ಕೆ ಪ್ರತಿನಿಧಿಗಳನ್ನೂ ಜೋಡಿಸಿಕೊಂಡಿರುವುದು ಸಂತಸ ತಂದಿದೆ ಎಂದರು.

ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ರಕ್ಷಾ ಬಂಧನದ ಸಂದೇಶ ನೀಡಿದರು.ಮಹಿಳಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದ ಎಲ್ಲರಿಗೂ ಆರತಿ ಬೆಳಗಿ, ತಿಲಕವನ್ನಿಟ್ಟು, ರಕ್ಷೆ ಕಟ್ಟಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರಾದಕಿರಣ್ ಕುಮಾರ್ ಬೈಲೂರು, ನಳಿನಿ ಪ್ರದೀಪ್ ರಾವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಶ್ರೀಕಾಂತ್ ನಾಯಕ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿಗಳಾದ ಶಿವಕುಮಾರ್ ಅಂಬಲಪಾಡಿ, ಎಮ್. ಅಂಚನ್, ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಭುಜಂಗ ನಾಯ್ಕ ಸಹಿತ ಮಹಿಳಾ ಮೋರ್ಚಾದ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಜ್ಯೋತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಉಷಾ ಪ್ರಕಾಶ್ ಶೆಟ್ಟಿ ವಂದಿಸಿದರು.

Related posts

ಎನ್‌ಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಅದ್ಧೂರಿಯಾಗಿ ಚಾಲನೆಗೊಂಡ ಕೊಂಕಣ್ ಮೆಲೋಡಿ ಸ್ಟಾರ್–2026ಕೊಂಕಣಿ ರಿಯಾಲಿಟಿ ಗಾಯನ ಸ್ಪರ್ಧೆಯ ಹೊಸತನದ ಪರಿಕಲ್ಪನೆ : ವಾಲ್ಟರ್ ನಂದಳಿಕೆ;

Voiceoftulunadu

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಣ್ಣೂರು ಮಾಲ್ಯಗುತ್ತು ಬಿ.ಬಿ. ಐತ್ತಪ್ಪ ರೈ ನೇಮಕ;

Voiceoftulunadu

ಬ್ಯಾಂಕ್‌ ಆಫ್‌ ಬರೋಡಾದಿಂದ ಡಿಜಿಟಲ್, ರಿಟೇಲ್ ಮತ್ತು ಎಂಎಸ್‌ಎಂಇ ಉಪಕ್ರಮಗಳ ಸಮಗ್ರ ಶ್ರೇಣಿಯೊಂದಿಗೆ 119ನೇ ಸಂಸ್ಥಾಪನಾ ದಿನಾಚರಣೆ;

Voiceoftulunadu

Leave a Comment