September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಅನ್ನಬ್ರಹ್ಮ ಸೇವಾ ಸಮಿತಿ ಉಡುಪಿಯಿಂದ ಬಡ ಹೆಣ್ಣುಮಗಳ ಮದುವೆಗೆ ಸೀರೆಗಳ ನೆರವು ;

ವರದಿ /ಚಿತ್ರ :ವಿನೋದ್ ಶೆಟ್ಟಿ ಉಡುಪಿ

ಉಡುಪಿ : ಮಾನವೀಯ ಸೇವೆಯ ಮೂಲಕ ಗುರುತಿಸಿಕೊಂಡಿರುವ ಅನ್ನಬ್ರಹ್ಮ ಸೇವಾ ಸಮಿತಿ, ಉಡುಪಿ ಇದರ ವತಿಯಿಂದ ಬ್ರಹ್ಮಾವರ ಶಿರೂರಿನ ಬಡ ಬಂಟ ಸಮುದಾಯದ ಹೆಣ್ಣು ಮಗಳ ಮದುವೆಗೆ ನೆರವಾಗುವ ಕಾರ್ಯ ನಡೆಯಿತು.

ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಲತಾ ಶೆಟ್ಟಿ ಅವರ ನೇತೃತ್ವದಲ್ಲಿ ಇಂದು ಆ ಕುಟುಂಬದ ಮನೆಗೆ ಭೇಟಿ ನೀಡಿ, ಮದುವೆಗೆ ಅವಶ್ಯಕವಾದ ದಾರೆ ಸೀರೆ, ಮೂರ್ತ ಸೀರೆ ಸೇರಿದಂತೆ ಒಟ್ಟು ಐದು ಸೀರೆಗಳನ್ನು ನೀಡಿ ಮಾನವೀಯತೆ ಮೆರೆದರು.

ಈ ಪುಣ್ಯ ಕಾರ್ಯದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ *ಶ್ರೀಮತಿ ವಿಶಾಲಾಕ್ಷಿ ಶೆಟ್ಟಿ, ಗೌರವಾಧ್ಯಕ್ಷರಾದ ಶ್ರೀ ವಿನೋದ್ ಶೆಟ್ಟಿ, ಗೌರವಾಧ್ಯಕ್ಷರಾದ ಶ್ರೀಮತಿ ಅನುಪಮಾ ಜಯಕುಮಾರ್, ಹಿತೈಷಿಗಳಾದ ಶ್ರೀಮತಿ ಜಯಶ್ರೀ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅರ್ಚನಾ ದೇವಾಡಿಗ, ಕೋಶಾಧಿಕಾರಿ ಶ್ರೇಯ ಪೂಜಾರಿ ಹಾಗೂ ಭವಿಷ್ ಉಪಸ್ಥಿತರಿದ್ದರು.ಬಡ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿ ಸಕಾಲದಲ್ಲಿ ನೆರವಾದ ಅನ್ನಬ್ರಹ್ಮ ಸೇವಾ ಸಮಿತಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

ನೂತನ ಸಿಎಂ ಡಿಕೆ ಶಿವಕುಮಾರ್ ಭರ್ಜರಿ ಕೊಡುಗೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಯುವ ಸಂಘಗಳಿಗೆ ತಲಾ 10 ಲಕ್ಷ ರೂ. ಅನುದಾನ!

Voiceoftulunadu

ವಾಲ್ಮೀಕಿ ನಿಗಮದ ಹಗರಣ; ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಿ. ನಾಗೇಂದ್ರ ;

Voiceoftulunadu

‘ಹಿಂದೂ ರಾಷ್ಟ್ರ’ ಅಂದ್ರೆ ಮುಸ್ಲಿಮರನ್ನ ಹೊರಹಾಕೋದಲ್ಲ, ಮುಸ್ಲಿಮರು ಇರಬಾರದೆಂದು ಭಾವಿಸಿದ್ರೆ ಆತ ಹಿಂದೂ ಅಲ್ಲ: ಭಾಗವತ್;

Voiceoftulunadu

Leave a Comment