September 4, 2026
Uncategorizedಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಪೊಳಲಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಇದರ ವಾರ್ಷಿಕ ಮಹಾಸಭೆ ;

ವರದಿ /ಚಿತ್ರ: ಸಂತೋಷ್ ಕುಲಾಲ್ ನೆತ್ತರಕೆರೆ

ಬಂಟ್ವಾಳ :ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ)ಪೊಳಲಿ ಇದರ ವಾರ್ಷಿಕ ಮಹಾಸಭೆಯು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ವೆಂಕಟೇಶ್ ನಾವಡ ಇವರ ಅದ್ಯಕ್ಷತೆಯಲ್ಲಿ ಆ 30ರಂದು ನಡೆಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಕೃಷಿ ಸಲಹಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ನಿರ್ದೇಶಕ ಡಿ ಎ ಅಬೂಬಕ್ಕರ್ ಅಮುಂಜೆ, ನಾಟಿ ವೈದ್ಯರಾದ ಚೆನ್ನಪ್ಪ ಪೂಜಾರಿ ಬಡಕಬೈಲು, ಈಶ್ವರ ಪೂಜಾರಿ ಕಲಾಯಿ ಇವರನ್ನು ಸನ್ಮಾನಿಸಲಾಯಿತು.

ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಶೇ 80ಕ್ಕಿಂತ ಅಧಿಕ ಅಂಕ ಪಡೆದ ಸದಸ್ಯರಮಕ್ಕಳನ್ನು ಗೌರವನಿಧಿಯೊಂದಿಗೆ ಗೌರವಿಸಲಾಯಿತು.

ಸಂಘದ ನಿರ್ದೇಶಕರಾದ ಡಿ ಎ ಅಬೂಬಕ್ಕರ್, ಕರುಣಾಕರ ಆಳ್ವ, ಸುಕೇಶ್ ಚೌಟ, ಯಶವಂತ ಪೂಜಾರಿ, ಲಕ್ಷ್ಮೀಶ ಶೆಟ್ಟಿ, ನಿರಂಜಿನಿ ಸಿ ಶೆಟ್ಟಿ, ಜಯಂತಿ,ಗೊಡ್ಫ್ರಿ ಫೆರ್ನಾಂಡಿಸ್,ಕರಿಯದ ಹಾಗೂ ವಲಯ ಮೇಲ್ವಿಚಾರಕ ಕೀರ್ತಿರಾಜ್, ಸಿಬಂದಿಗಳು ಉಪಸ್ಥಿತರಿದ್ದರು.

ಸಂಘದ ಕಾರ್ಯನಿರ್ವಾಹಣಾಧಿಕಾರಿ ವಿಜಯ ರವಿ ಫೆರ್ನಾಂಡಿಸ್ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು, ಉಪಾಧ್ಯಕ್ಷ ಗೋಪಾಲ ಅಂಚನ್ ಬಡಕಬೈಲು ಧನ್ಯವಾದವಿತ್ತರು.

Related posts

ತೆಂಕ ಎರ್ಮಾಳು ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮಲ್ಲಿಕಾರವರಿಗೆ ಹಳೇ ವಿಧ್ಯಾರ್ಥಿ ಸಂಘದ ಸನ್ಮಾನ;

Voiceoftulunadu

ಬಂಟರ ಯಾನೆ ನಾಡವರ ಮಾತೃ ಸಂಘದಿಂದ ದಿ. ರವಿಚಂದ್ರ ಶೆಟ್ಟಿಯವರಿಗೆ ನುಡಿನಮನ ಬಂಟ್ಸ್ ಹಾಸ್ಟೇಲ್ ಅಮೃತೋತ್ಸವದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ;

Voiceoftulunadu

ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಪತನದಲ್ಲಿ ಮೃತಪಟ್ಟಿದ್ದ ಉಡುಪಿಯ ಪೈಲೆಟ್ ಅಭಿಷೇಕ್ ಪೂಜಾರಿ : ಕಾರ್ಕಳದ ಕಣಜಾರಿನಲ್ಲಿ ಪೈಲೆಟ್ ಅಂತ್ಯಕ್ರಿಯೆ…!!

Voiceoftulunadu

Leave a Comment