September 4, 2026
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ತುಂಬೆ: ಸೆ 6ರಂದು ಭಾಗ್ಯೋದಯ ಮಿತ್ರ ಕಲಾ ವೃಂದದ ನವೀಕೃತ ಕಟ್ಟಡ ಉದ್ಘಾಟನೆ : ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆ ;

ವರದಿ /ಚಿತ್ರ :ಸಂತೋಷ್ ಕುಲಾಲ್ ನೆತ್ತರಕೆರೆ

ಬಂಟ್ವಾಳ :ಭಾಗ್ಯೋದಯ ಮಿತ್ರ ಕಲಾ ವೃಂದ (ರಿ.) ತುಂಬೆ ಇದರ ನವೀಕೃತ ಕಟ್ಟಡ “ಭಾಗ್ಯೋದಯ”ದ ಉದ್ಘಾಟನಾ ಸಮಾರಂಭವು ಸೆ 6ರಂದು ಹನುಮ ನಗರ ತುಂಬೆಯಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 6ಕ್ಕೆ ಗಣಹೋಮ ಬಳಿಕ ಭಜನೆ ಹಾಗೂ 9.30ಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.11ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ಬಳಿಕ ಪ್ರಸಾದ ವಿತರಣೆ ಸಹಭೋಜನ ನಡೆಯಲಿದೆ.ಅಪರಾಹ್ನ 2ರಿಂದ ಅಷ್ಟಮಿ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿಕ್ಕಿದೆ, ಸಂಜೆ ಸಮಾರೋಪ ಸಮಾರಂಭ,ಬಹುಮಾನ ವಿತರಣೆ ಜರುಗಲಿದೆ.

ಬಳಿಕ ಸಂಘ ಸದಸ್ಯರಿಂದವಿವಿಧ ಮನರಂಜನಾ ಕಾರ್ಯಕ್ರಮಗಳು ಹಾಗೂ ಬಲೆ ತೆಲಿಪಾಲೆ ಖ್ಯಾತಿಯ ನಿತಿನ್ ತುಂಬೆ ಸಂಯೋಜನೆಯಲ್ಲಿ ಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಬಲೇ ತೆಲಿಪುಗ”ಎಂಬ ವಿನೂತನ ಶೈಲಿಯ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಭಾಗ್ಯೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಯೋಗೀಶ್ ಕಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಸುಮನಸಾ ಕೊಡವೂರು ಸಂಘಟನೆಯ ರಜತ ಮಹೋತ್ಸವದ ಅಂಗವಾಗಿ ವಿನೂತನ ಪ್ರಯೋಗ : ಕಾರ್ಯಕ್ರಮ ಉದ್ಘಾಟಿಸಿದ ರಂಗಕರ್ಮಿ, ನೀನಾಸಂ ಜಯರಾಮ ನೀಲಾವರ ;

Voiceoftulunadu

ಪತ್ರಕರ್ತ-ರಂಗನಟ ನರೇಂದ್ರ ಕೆರೆಕಾಡು ಅವರಿಗೆ ಮಾತೃ ವಿಯೋಗ;

Voiceoftulunadu

ಜೆಸಿಐ ಉಡುಪಿ ಸಿಟಿ : ಒಂದು ದಿನ 111 ತರಬೇತಿಗಳ ಹಬ್ಬ: ಉಡುಪಿಯ ಸೈಂಟ್ ಮೇರಿಸ್‌ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮ;

Voiceoftulunadu

Leave a Comment