September 6, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಪಚ್ಚಿನಡ್ಕ:ಓಂ ಫ್ರೆಂಡ್ಸ್ ಕ್ಲಬ್ ಅಶ್ರಯದಲ್ಲಿ 27ನೇ ವರ್ಷದ ಮೊಸರು ಕುಡಿಕೆ ಉತ್ಸವ ;

ಬಂಟ್ವಾಳ :ಓಂ ಫ್ರೆಂಡ್ಸ್ ಕ್ಲಬ್ ( ರಿ ) ಕಳ್ಳಿಗೆ ಪಚ್ಚಿನಡ್ಕ ಬಂಟ್ವಾಳ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 27ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ.04ರಂದು ಸಂಘದ ಶ್ರೀ ಕೃಷ್ಣ ವೇದಿಕೆಯ ವಠಾರದಲ್ಲಿ ಬಹಳ ವಿಜೃಂಭಣೆ ಯಿಂದ ಜರಗಿತು

ಬೆಳಿಗ್ಗೆ 10.00 ಗಂಟೆಗೆ ಶ್ರೀ ಕೃಷ್ಣ ದೇವರ ಪ್ರತಿಷ್ಠಾಪನೆ ನಡೆದು ಓಂ ಫ್ರೆಂಡ್ಸ್ ರಾಧಾಕೃಷ್ಣ ಭಜನಾ ಮಂಡಳಿ ಯವರಿಂದ ಮದ್ಯಾನ ದ ವರೆಗೆ ಭಜನಾ ಸಂಕೀರ್ತನೆ ನಡೆಯಿತು.ನಂತರ ಮದ್ಯಾಹ್ನ 2.00 ಗಂಟೆಯಿಂದ ಹುಡುಗರ,ಹುಡುಗಿಯರ.ಪುರುಷರ ಮತ್ತು ಮಹಿಳೆ ಯರ ವಿಭಾಗ ಗಳಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಯೊಂದಿಗೆ ಚಿಲಿ ಪಿಲಿ ಗೊಂಬೆ ಬಳಗದ ಶ್ರೀ ಶಂಕರ ನಾರಾಯಣ ಹೊಳ್ಳ ಬಿಸಿರೋಡ್ ಹಾಗು ಬಿ.ಎಸ್.ಬ್ಯಾಂಡ್ ಸೆಟ್ ಬ್ರಹ್ಮರ ಕೂಟ್ಲು ಇದರ ಬಿ.ಭೋಜ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.ಸಭಾ ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಸಂಘದ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ ವಹಿಸಿದ್ದರು.

ಸಭೆಯಲ್ಲಿ ಸಂಘದ ಮಹಾ ಪೋಷಕರಾದ ಚಂದ್ರಾವತಿ ಸೇಸಪ್ಪ ಕೋಟ್ಯಾನ್,ಹಿರಿಯರಾದ ನಾರಾಯಣ ಆಚಾರ್ಯಕಳ್ಳಿಗೆ,ಸಂಘದ ಪದಾಧಿಕಾರಿಗಳಾದ ಸದಾಶಿವ ಆಚಾರ್ಯ, ರಾಜೇಶ್ ಆಚಾರ್ಯ, ಚರಣ್ ರಾಜ್ ಆಚಾರ್ಯ,ಮೊಸರು ಕುಡಿಕೆ ಉತ್ಸವ ಸಮಿತಿ ಯ ಸಂಚಾಲಕರಾದ ಸಂತೋಷ್ ಪಚ್ಚಿನಡ್ಕ, ಪ್ರಶಾಂತ್ ಪಚ್ಚಿನಡ್ಕ, ಅಮಿತಾ ವಿಶ್ವನಾಥ್ ದಾಸರಕೋಡಿ ಉಪಸ್ಥಿತರಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ಚರಣ್ ರಾಜ್ ಸ್ವಾಗತಿಸಿದರು.

ಕಾರ್ಯಕ್ರಮವನ್ನು ಹರೀಶ್ ಶೆಟ್ಟಿ ಪಡು ಹಾಗು ಕುಮಾರಿ ತೇಜಾಕ್ಷಿ ನಿರೂಪಿಸಿದರು.ನಂತರ ಶ್ರೀ ಕೃಷ್ಣ ದೇವರ ಶೋಭಾಯಾತ್ರೆ ಗೋರೆಮಾರ್ ನಿಂದ ಪಚ್ಚಿನಡ್ಕ ದ ವರೆಗೆ ಬಹಳ ವಿಜೃಂಭಣೆ ಯಿಂದ ಸಾಗಿತು. ಶ್ರೀ ಓಂ ಫ್ರೆಂಡ್ಸ್ ರಾಧಾಕೃಷ್ಣ ಭಜನಾ ಮಂಡಳಿ ಯ ಸದಸ್ಯರ ಕುಣಿತ ಭಜನೆ ಯೊಂದಿಗೆ ಸಾಗಿದ ಈ ಶೋಭಾ ಯಾತ್ರೆ ಯಲ್ಲಿ ಚಿಲಿ ಪಿಲಿ ಗೊಂಬೆ ಬಳಗ.ಬಿಸಿರೋಡ್ ,ಬಿ.ಸ್.ಬ್ಯಾಂಡ್ ಸೆಟ್,ಬ್ರಹ್ಮರ ಕೂಟ್ಲು,ಪೊಳಲಿ ಯುವಕರ ನಾಸಿಕ್ ಬ್ಯಾಂಡ್,ಕೇಶವ ಸಜಿಪ ಇವರ ವಿವಿಧ ರೀತಿಯ ಗೊಂಬೆಗಳು ಪ್ರದರ್ಶನ ನೀಡಿದವು..

Related posts

ನೀಟ್ ಚಳವಳಿಯ ಪ್ರೇರಣೆ: ಈಗ ‘E20 ಜನತಾ ಪಕ್ಷ’ ಹುಟ್ಟು, 100 ಪರ್ಸೆಂಟ್ ಶುದ್ಧ ಪೆಟ್ರೋಲ್‌ಗೆ ಆಗ್ರಹಿಸಿ ಆಗಸ್ಟ್ 4ಕ್ಕೆ ಸಂಸತ್ ಚಲೋ;

Voiceoftulunadu

ಖ್ಯಾತ ಹಾಸ್ಯ ನಟ ಶರಣ್ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ.ಶರಣ್ ಅವರನ್ನು ಗೌರವಿಸಿದ ಅಭಿವೃದ್ಧಿ ಸಮಿತಿ ಹಾಗೂ ವ್ಯವಸ್ಥಾಪನಾ ಸಮಿತಿ;

Voiceoftulunadu

ಪ್ರವಾದಿಯವರ ಜೀವನ, ಸಂದೇಶ ಎಲ್ಲರಿಗೂ ಮಾದರಿ: ಸಿ.ಎ. ಮುಹಮ್ಮದ್ ಇಸ್ಲಾಕ್ , ಪಡುಬಿದ್ರಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕಾಪು ಆಯೋಜನೆಯಲ್ಲಿ ಸೀರತ್ ಅಭಿಯಾನಕ್ರಾಂತಿಯ ಜ್ಯೋತಿ;

Voiceoftulunadu

Leave a Comment