November 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಯಕ್ಷಗಾನದಿಂದ ಭಾಷೆ, ಆರೋಗ್ಯ, ಭವಿಷ್ಯಕ್ಕೆ ಒಳಿತು : ಎಂ.ಎಲ್. ಸಾಮಗ ದಿವಂಗತ ಜಯಂತ್ ಕುಮಾರ್ ತೋನ್ಸೆ ಸಂಸ್ಮರಣೆ ;

ವರದಿ /ಚಿತ್ರ: ಈ ಮೀಡಿಯಾ

ಉಡುಪಿ: ಯಕ್ಷಗಾನದಂತಹ ಅದ್ಭುತ ಕಲೆ ಜಗತ್ತಿನಲ್ಲಿ ಎಲ್ಲೂ ಇಲ್ಲ. ಇದರಲ್ಲಿ ನೃತ್ಯ, ವೇಷಭೂಷಣ, ಗಾಯನ ಹಾಗೂ ಮಾತುಗಾರಿಕೆಯ ಅಪೂರ್ವ ಸಂಗಮವಿದೆ. ಈ ಕಲೆಯಿಂದ ಶರೀರ ಮತ್ತು ಬುದ್ಧಿಗೆ ಉತ್ತಮ ಕಸರತ್ತು ಸಿಗಲಿದ್ದು, ಆರೋಗ್ಯಕ್ಕೂ ಇದು ಬಹಳ ಒಳ್ಳೆಯದು ಎಂದು ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಸಂಭ್ರಮ ಸಮಿತಿಯ ಗೌರವಾಧ್ಯಕ್ಷ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್. ಸಾಮಗ ಹೇಳಿದರು.

ಸುಮನಸಾ ಕೊಡವೂರು ಸಂಸ್ಥೆಯ ರಜತ ಸಂಭ್ರಮದ ಸರಣಿ ಕಾರ್ಯಕ್ರಮಗಳ ಅಂಗವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಯಕ್ಷರಂಗದ ಸವ್ಯಸಾಚಿ ದಿವಂಗತ ಜಯಂತ್ ಕುಮಾರ್ ತೋನ್ಸೆ ಸ್ಮರಣೆಯಲ್ಲಿ ಆಯೋಜಿಸಲಾದ ‘ಯಕ್ಷಪಥ – ಚಿಣ್ಣರ ಯಕ್ಷ ಹೆಜ್ಜೆ’ಕಲಿಕಾ ಶಿಬಿರವನ್ನು ಇಲ್ಲಿನ ವಿಪ್ರಶ್ರೀ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

ಮಾಡಿಕೊಂಡರೆ ಇಂದು ಜಗತ್ತಿನಾದ್ಯಂತ ಯಕ್ಷಗಾನ ತಂಡಗಳಿದ್ದು, ಈ ಕಲೆಯನ್ನು ಕರಗತ ವಿದೇಶಗಳಲ್ಲೂ ಅವಕಾಶ ಸಿಗಲಿದೆ. ನಿಮ್ಮ ಭವಿಷ್ಯಕ್ಕೂ ಒಳ್ಳೆಯದು ಎಂದು ಹೇಳಿದರು.ತೋನ್ಸೆ ಜಯಂತ್ ಕುಮಾರ್ ಅವರ ತಂದೆಯವರು ಮೇಳಕ್ಕೆ ಹೋಗದ ಜನರಿಗೆ ಯಕ್ಷಗಾನ ಕಲಿಸಲು ಆರಂಭಿಸಿದ್ದರು. ಜಯಂತ್ ಕುಮಾರ್ ಅವರು ಕೂಡ ಆ ಪರಂಪರೆಯನ್ನು ಮುಂದುವರಿಸಿ ಯಕ್ಷಗಾನ ಹೇಳಿಕೊಟ್ಟು, ಹವ್ಯಾಸಿ ಕಲಾವಿದರನ್ನು ಸಿದ್ಧಪಡಿಸಿದರು.

ಉಡುಪಿ ಸುತ್ತಮುತ್ತ ಅನೇಕ ಯಕ್ಷಗಾನ ಸಂಘಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಶಂಕರನಾರಾಯಣ ಹಿಂದೆ ಕೊಡವೂರಿನಲ್ಲಿ ಯಕ್ಷಗಾನ ಮೇಳ ಇತ್ತು. ಆನಂತರ ಮೇಳ ನಿಂತುಹೋದರೂ, ಹವ್ಯಾಸಿ ತಂಡ ಮಾತ್ರ ಗಟ್ಟಿಯಾಗಿ ನಿಲ್ಲಲು ಇಂತಹ ಶ್ರಮವೇ ಕಾರಣ ಎಂದು ಮೆಲುಕು ಹಾಕಿದರು.ಯಕ್ಷಗಾನ ಕಲಿಯಬೇಕು. ಹಿಂದಿನ ದಿನ ಕಲಿಸಿದ್ದನ್ನು ಸ್ವತಃ ಅಭ್ಯಾಸ ಮಾಡಿ, ಗುರುಗಳಿಂದ ಕೇಳಿ ತಿಳಿದುಕೊಳ್ಳಿ.

ಯಕ್ಷಗಾನದಲ್ಲಿ ಕಥೆಗಳನ್ನು ತಿಳಿಯುವುದರಿಂದ ಅಜ್ಜಿ-ಅಮ್ಮ ಕಥೆ ಹೇಳುವ ಅಗತ್ಯವೇ ಬರುವುದಿಲ್ಲ. ಕೇವಲ ಒಂದು ಪ್ರದರ್ಶನ ನೀಡಿ, ಫೋಟೋ ಹಾಕಿಕೊಂಡು ಕಲಿಕೆಯನ್ನು ನಿಲ್ಲಿಸಬೇಡಿ. ಇತರರ ಅಭಿನಯವನ್ನು ಗಮನಿಸುತ್ತಾ ಯಕ್ಷ ಕಲಿಕೆಯನ್ನು ನಿರಂತರವಾಗಿ ಮುಂದುವರಿಸಿ” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಿಬಿರದ ಗುರುಗಳಾದ ಶೈಲೇಶ್ ತೀರ್ಥಹಳ್ಳಿ, ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ ಜಿ. ಕೊಡವೂರು, ಗೌರವಾಧ್ಯಕ್ಷರಾದ ಎಂ. ಎಸ್. ಭಟ್. ಸಂಚಾಲಕರಾದ ಭಾಸ್ಕರ್ ಪಾಲನ್ ಹಾಗೂ ಶಿಬಿರದ ಸಂಯೋಜಕರಾದ ಅಕ್ಷತ್ ಅಮೀನ್, ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಉಪಸ್ಥಿತರಿದ್ದರು’ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ

Related posts

ಇಂಟರ್ನೆಟ್‌ನಿಂದ ಡಿಪ್‌ಫೇಕ್ (Deepfake) ಚಿತ್ರ ಮತ್ತು ವೀಡಿಯೊಗಳನ್ನು ತೆಗೆದುಹಾಕುವುದು ಹೇಗೆ?

Voiceoftulunadu

ಸಂಧಾನದ ವೇಳೆ ಬೇಡಿಕೆ ಬದಲಾಯಿಸಿದ ರಾಹುಲ್ ಗಾಂಧಿ; ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಆರೋಪ;

Voiceoftulunadu

ಪೂರ್ಣಿಮಾ ಜನಾರ್ದನ್ ರವರ ಅಂಚೆ ಚೀಟಿ ಪ್ರದರ್ಶನ, ಉದ್ಘಾಟನೆ : ಕೊಡವೂರಿನ ಭಾಮಾ ಫಿಲಾಟಲಿ ಗ್ಯಾಲರಿಯಲ್ಲಿ “ಆಧ್ಯಾತ್ಮಿಕ – ಸಾಂಸ್ಕೃತಿಕ ಫಿಲಾಟಲಿ ಪಯಣ” ;

Voiceoftulunadu

Leave a Comment