ವರದಿ /ಚಿತ್ರ :ವಿನೋದ್ ಶೆಟ್ಟಿ ಉಡುಪಿ
ಹಾವಂಜೆ/ಉಡುಪಿ ಜಿಲ್ಲೆ : ಉಡುಪಿ ಜಿಲ್ಲೆಯ ಹಾವಂಜೆ ಗ್ರಾಮದ ಪ್ರಸಿದ್ಧ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ನವರಾತ್ರಿ ಪೂಜಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.
ದಿನಾಂಕ 11-10-2026 ರಿಂದ 21-10-2026 ರ ವರೆಗೆ ಕ್ಷೇತ್ರದಲ್ಲಿ ಪ್ರತಿದಿನ ವಿಶೇಷ ನವರಾತ್ರಿ ಪೂಜೆ ನೆರವೇರಲಿದೆ.
ವಿಶೇಷ ಪೂಜಾ ಕಾರ್ಯಕ್ರಮಗಳು :- ದಿನಾಂಕ 20-10-2026ನೇ ಮಂಗಳವಾರ, ನವರಾತ್ರಿಯ 10ನೇ ದಿನದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಬೆಳಿಗ್ಗೆ 10.00 ಗಂಟೆಗೆ ದುರ್ಗಾ ಹೋಮ ನಡೆಯಲಿದೆ.
ದಿನಾಂಕ 21-10-2026ನೇ ಬುಧವಾರ, ಮಧ್ಯಾಹ್ನ 1.00 ಗಂಟೆಗೆ ಅನ್ನ ಸಂತರ್ಪಣೆ ಹಾಗೂ ಮಧ್ಯಾಹ್ನ 3.00 ಗಂಟೆಗೆ ಸ್ವಾಮಿ ಕೊರಗಜ್ಜ ದೈವದ ಸಾಮೂಹಿಕ ಹಗಲು ಕೋಲ ಸೇವೆ ನಡೆಯಲಿದೆ.
ಈ ಎಲ್ಲಾ ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೈವದ ಸಿರಿಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಕ್ಷೇತ್ರದ ಧರ್ಮದರ್ಶಿ ಶ್ರೀ ಭರತ್ ಪೂಜಾರಿ, ಹಾವಂಜೆ ಹಾಗೂ ಸೇವಾ ಸಮಿತಿ ಸದಸ್ಯರು ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಭರತ್ ಪೂಜಾರಿ – 8904506697
