November 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಅ.27 : ಸಮಸ್ತದ ಶತಮಾನೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಸಮಸ್ತ ತಾತ್ವಿಕ ಸಮಾವೇಶ : ಕಾಪು ಕೊಪ್ಪಲಂಗಡಿಯ ಇನಾಸನ್ ಆಡಿಟೋರಿಯಂನಲ್ಲಿ ನಡೆಯಲಿರುವ ಸಮಾವೇಶ ;

ವರದಿ /ಚಿತ್ರ : ಈ ಮೀಡಿಯಾ

ಕಾಪು : ಪ್ರಮುಖ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸರ ಸಂಘಟನೆಯಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಶತಮಾನೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಮತ್ತು ಸುನ್ನೀ ಜಂಇಯ್ಯತುಲ್ ಉಲಮಾ, ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಉಡುಪಿ ಜಿಲ್ಲಾ ಸಮಸ್ತ ತಾತ್ವಿಕ ಸಮಾವೇಶವನ್ನು ಅ. 27, ಮಂಗಳವಾರ ಸಂಜೆ 4:30 ಕ್ಕೆ ಕಾಪು ಕೊಪ್ಪಲಂಗಡಿಯ ಇನಾಸನ್ ಆಡಿಟೋರಿಯಂನಲ್ಲಿ, ತಾಜುಲ್ ಪುಖಹಾ ಖಾಝಿ ಬೇಕಲ್ ಉಸ್ತಾದ್ ವೇದಿಕೆಯಲ್ಲಿ ಆಯೋಜಿಸಲಾಗಿದೆ ಎಂದು ಸುನ್ನೀ ಉಲಮಾ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಬಹುಮಾನ್ಯ 2.2. ಇಸ್ಮಾಯಿಲ್ ಮದನಿ ಮಾವಿನಕಟ್ಟೆ ಹೇಳಿದರು.

ಅವರು ಸೋಮವಾರ ಕಾಪು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನೀಡಿದರು. ಜರಗಿದ ಮಾಹಿತಿಸಮಸ್ತ ಕೇರಳ ಜಂಇಯ್ಯತುಲ್ ಉಲಮಾ 1926 ರಲ್ಲಿ ಸ್ಥಾಪನೆಯಾಗಿ ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದೆ. ಧಾರ್ಮಿಕ ಶಿಕ್ಷಣದ ಪ್ರಸಾರ, ಸುನ್ನೀ ಆದರ್ಶಗಳ ಸಂರಕ್ಷಣೆ, ನೈತಿಕ ಮೌಲ್ಯಗಳ ಪ್ರಚಾರ ಹಾಗೂ ಸಮಾಜದಲ್ಲಿ ಧಾರ್ಮಿಕ ಜಾಗೃತಿಮೂಡಿಸುವ ಕಾರ್ಯಗಳಲ್ಲಿ ಸಮಸ್ತವು ಶತಮಾನಕಾಲದಿಂದ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ.

ಸಮಸ್ತದ ಶತಮಾನ ಕಾಲದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗಳನ್ನು ಸ್ಮರಿಸುವುದು, ಸಮಸ್ತದ ಆದರ್ಶಗಳು ಹಾಗೂ ತಾತ್ವಿಕ ನಿಲುವುಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವುದು, ಧಾರ್ಮಿಕ ಸಾಮರಸ್ಯ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ಸಾರುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ.

ಸಮಾವೇಶದಲ್ಲಿ ಇಂಡಿಯನ್ ಗ್ರಾಂಡ್ ಮುಪ್ತಿ ಸುಲ್ತಾನುಲ್ ಉಲಾಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ುನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಖುದುವತುಸ್ಸಾದಾತ್ ಅಸ್ಸಯ್ಯದ್ ಕೆ.ಎಸ್. ಅಟ್ಟಕೋಯ ತಂಬಳ್ ಕುಂಬೋಳ್, ಬದ್ರುಸ್ಸಾದಾತ್ ಇಬ್ರಾಹಿಂ ఖలిలులో ಬುಖಾರಿ ತಂಬಳ್ ಕಡಲುಂಡಿ, ಸಮಸ್ತ ಸೆಂಟಿನರಿ ಅಧ್ಯಕ್ಷ ಮೌಲಾನ ಪೇರೋಡ್ ಅಬ್ದುರಹ್ಮಾನ್ ಸಖಾಫಿ, ಮೌಲಾನ ಡಾ. ಮುಹಮ್ಮದ್ ಫಾಝಿಲ್ ರಝಿ ಕಾವಳಕಟ್ಟೆ, ಅಸ್ಸಯ್ಯದ್ ಜಾಫರ್ ಅಸ್ಸಖಾಫ್ ತಂಬಳ್ ಕೋಟೇಶ್ವರ ಹಾಗೂ ಮೌಲಾನ ಅಬೂಸುಫ್ಯಾನ್ಇಬ್ರಾಹಿಂ ಮದನಿ ಸೇರಿದಂತೆ ಪ್ರಮುಖ ಧಾರ್ಮಿಕ ನಾಯಕರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಝಾನ್ ಅರ್ಷದ್, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಸಮಾಜಸೇವಕ ಇನಾಯತ್ అలి ಮುಲ್ಕಿ ಸೇರಿದಂತೆ ಸಾಮಾಜಿಕ ಹಾಗೂ ಸಾರ್ವಜನಿಕ ಕ್ಷೇತ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಸುನ್ನೀ ಕೋ-ಆರ್ಡಿನೇಷನ್ ಅಧ್ಯಕ್ಷ ಕೆ.ಎ. ಅಬ್ದುರಹ್ಮಾನ್ ರು ಅಲ್ ಫುರ್ಖಾನಿ ಕಲ್ಕಟ್ಟ, ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ. ಅಬೂಬಕ್ಕರ್ ನೇಜಾರು, ಉಡುಪಿ ಜಿಲ್ಲಾ ಸುನ್ನೀ ಉಲಮಾ ಒಕ್ಕೂಟದ ಕಾರ್ಯದರ್ಶಿ ಎಂ.ಎಚ್. ಸುಲೈಮಾನ್ ಸಅದಿ ಅಲ್ ಅಫೈಲಿ ಕಾರ್ಕಳ, ಉಡುಪಿ ಜಿಲ್ಲಾ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಪ್ರ.ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು, ತಾತ್ವಿಕ ಸಮಾವೇಶದ ಸ್ವಾಗತ ಸಮಿತಿಯ ಚೇರ್ಮನ್ ಜಿ. ಅಶ್ರಫ್ ತೋನ್ಸೆ, ಜನರಲ್ ಕನರ್‌ ಎಂ.ಕೆ. ಅಬ್ದುರಶೀದ್ ಸಖಾಫಿ ಮಜೂರು ಉಪಸ್ಥಿತರಿದ್ದರು.

Related posts

ಮೂಲ್ಕಿ ಬಳಿಯ ಕೆರೆಕಾಡಿನ ನವೀಕರಣಗೊಂಡಿದ್ದ ಸಾರ್ವಜನಿಕ ಹಿಂದೂ ರುದ್ರಭೂಮಿಯ ಅನಾವರಣವನ್ನು ನೆರವೇರಿಸಿದ ಶಾಸಕ ಉಮಾನಾಥ ಕೋಟ್ಯಾನ್ ;

voiceoftulunadu

ಕೇರಳ ಸಿಎಂ ವಿ.ಡಿ. ಸತೀಶನ್ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ: ದೇವಳದ ಆಡಳಿತ ಮಂಡಳಿಯಿಂದ ವಿಶೇಷ ಗೌರವ ಸ್ವೀಕರಿಸಿದ ಸಿಎಂ ಸತೀಶನ್;

Voiceoftulunadu

ಮಾಹೆಯಿಂದ 110 ಆಶಾ ಕಾರ್ಯಕರ್ತೆಯರಿಗೆ ಮಾನಸಿಕ ಆರೋಗ್ಯದ ಅರಿವು, ಆರೈಕೆ ಕುರಿತು ತರಬೇತಿ : ಮಾನಸಿಕ ಕಾಯಿಲೆ ಲಕ್ಷಣ ಗುರುತಿಸಿ ಚಿಕಿತ್ಸೆಗೆ ಶಿಫಾರಸು ತರಲು ತರಬೇತಿ ;

Voiceoftulunadu

Leave a Comment