ವರದಿ /ಚಿತ್ರ : ಈ ಮೀಡಿಯಾ
ಮಣಿಪಾಲ, ಅಕ್ಟೋಬರ್ 30: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿಸಲಾದ ಉತ್ಕೃಷ್ಟ ಸಂಸ್ಥೆಯ ಅಂಗ ಸಂಸ್ಥೆಯಾದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಮನೋವೈದ್ಯಕೀಯ ವಿಭಾಗವು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಇತ್ತೀಚೆಗೆ ‘-2 (ಪತ್ತೆಹಚ್ಚುವಿಕೆ, ಶಿಫಾರಸು ಮತ್ತು ಮರುಸೇರ್ಪಡೆ ಎರಡನೇ ಆವೃತ್ತಿ)’ ಸಮುದಾಯ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.
ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಸುಮಾರು 110 ಕಾರ್ಯಕರ್ತೆಯರು ಭಾಗವಹಿಸಿದ್ದರು.ಮಾನಸಿಕ ಕಾಯಿಲೆಗಳ ಲಕ್ಷಣಗಳನ್ನು ಗುರುತಿಸುವುದು, ಚಿಕಿತ್ಸೆಗೆಶಿಫಾರಸು ಮಾಡುವ ವಿಧಾನಗಳನ್ನು ಅರಿಯುವುದು ಹಾಗೂ ಮಾನಸಿಕ ಅಸ್ವಸ್ಥರ ದೀರ್ಘಾವಧಿ ನಿರ್ವಹಣೆ ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯಕರ್ತೆಯರನ್ನು ಸಜ್ಜುಗೊಳಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಉಡುಪಿಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ (ಡಿಎಂಎಸ್ಪಿ) ಮತ್ತು ಮಣಿಪಾಲ ಕೆಎಂಸಿ ಮನೋವೈದ್ಯಕೀಯ ವಿಭಾಗದ ತಜ್ಞರು ಈ ಕುರಿತು ವಿಶೇಷ ಗೋಷ್ಠಿಗಳನ್ನು ನಡೆಸಿಕೊಟ್ಟರು.ಮಾಹೆ ಕುಲಸಚಿವರಾದ ১ে. ಪಿ. ಗಿರಿಧರ್ ಕಿಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮಣಿಪಾಲದ ಕೆಎಂಸಿ ಡೀನ್ ಡಾ. ಅನಿಲ್ಕಾ ಕೆ ಭಟ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಲತಾ ನಾಯಕ್ ಹಾಗೂ ಕೆಎನ್ನ್ನಿ ಅಸೋಸಿಯೇಟ್ಸ ರಾಘವೇಂದ್ರ ಹೊಳ್ಳ ಭಾಗವಹಿಸಿದ್ದರು.ಸಮುದಾಯ ಮಾನಸಿಕ ಆರೋಗ್ಯ ಸೇವೆಗಳನ್ನು ಬಲಪಡಿಸುವಲ್ಲಿ ಮುಂಚೂಣಿ ಕಾರ್ಯಕರ್ತೆಯರ ಪಾತ್ರವನ್ನು ಈ ಕಾರ್ಯಕ್ರಮ ಬಿಂಬಿಸಿದೆ.
ಮಾನಸಿಕ ಸಮಸ್ಯೆಗಳನ್ನು ಗುರುತಿಸಿ, ಸಕಾಲದಲ್ಲಿ ಚಿಕಿತ್ಸೆಗೆ ಮಾರ್ಗದರ್ಶನ ಮಾಡುವ ಆಶಾ ಕಾರ್ಯಕರ್ತೆಯರ ಸಾಮರ್ಥ್ಯವನ್ನು ವೃದ್ಧಿಸುವ ಮೂಲಕ ಸೂಕ್ತ ಮಾನಸಿಕ ಆರೋಗ್ಯ ಸೇವೆ ಒದಗಿಸುವುದು, ನಿರಂತರ ಆರೈಕೆ ನೀಡುವುದು ಮತ್ತು ಮಾನಸಿಕ ಅಸ್ವಸ್ಥರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬೆಂಬಲಿಸುವುದು ಈ ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ
