ವರದಿ /ಚಿತ್ರ: ಈ ಮೀಡಿಯಾ
ಮಣಿಪಾಲ: ಮಣಿಪಾಲದ ಮಣಿಪಾಲ್ ಇನ್ಸಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂಐಸಿ)ಯ ಪ್ರಮುಖ ಮಾಧ್ಯಮ ಉತ್ಸವ ‘ಆರ್ಟಿಕಲ್-19’ಕ್ಕೆ ಅಕ್ಟೋಬರ್ 30ರಂದು ಚಾಲನೆ ನೀಡಲಾಯಿತು.ಮಾಹೆ ಮಣಿಪಾಲದ ಉಪಕುಲಪತಿ জে. ಶರತ್ ಕೆ. ರಾವ್ ಹಾಗೂ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಹಾಗೂ ಲಿಟಲ್ ಲ್ಯಾಂಬ್ ಫಿಲ್ಮ ಸಹ-ಸಂಸ್ಥಾಪಕ ಬೌದ್ಧಾಯನ್ ಮುಖರ್ಜಿ ಉತ್ಸವವನ್ನು ಉದ್ಘಾಟಿಸಿದರು.
ಕೋವಿಡ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಚರ್ಚಾ ಸ್ಪರ್ಧೆ ‘ಪ್ರೊವರ್ಬ್’ ಕೂಡ ಈ ಬಾರಿ ಮರು ಆರಂಭಗೊಂಡಿದ್ದು, ಉತ್ಸವದೊಂದಿಗೆ ಉದ್ಘಾಟಿಸಲಾಯಿತು.Bಯುದ್ಧ ಮತ್ತು ಶಾಂತಿ’ ಎಂಬುದು -19-20268 ಉತ್ಸವದ ವಿಷಯವಾಗಿದೆ. ನಡೆಯುತ್ತಿರುವ ಜಾಗತಿಕವಾಗಿ ವಿವಿಧವಿದ್ಯಮಾನಗಳನ್ನು ಚರ್ಚಿಸುವ ಉದ್ದೇಶದಿಂದ ಈ ವಿಷಯವನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪಕುಲಪತಿ ८. ಶರತ್ ಕೆ. ರಾವ್, ಸಾಮಾಜಿಕ ಮಾಧ್ಯಮ, ತಪ್ಪು ಮಾಹಿತಿ ಮತ್ತು ಪರಸ್ಪರ ವಿರುದ್ಧವಾದ ನಿರೂಪಣೆಗಳು ಇಂದು ಸಂಘರ್ಷಕ್ಕೆ ಕಾರಣವಾಗಿವೆ. ಶಾಂತಿ ಸ್ಥಾಪನೆಗೆ ಸಂವಾದ, ಮಾತುಕತೆ ಮತ್ತು ಕಾರ್ಯತಂತ್ರದ ಮೈತ್ರಿಗಳು ಮುಖ್ಯ ಎಂದು ಹೇಳಿದರು.
ಮುಖ್ಯ ಭಾಷಣ ಮಾಡಿದ ಬೌದ್ಧಾಯನ್ ಮುಖರ್ಜಿ, ಕ್ಯಾಮೆರಾದ ಹಿಂದಿನ ನಿರ್ಧಾರಗಳು ಪ್ರೇಕ್ಷಕರು ಘಟನೆಗಳನ್ನು ನೋಡುವ ರೀತಿಯನ್ನು ರೂಪಿಸುತ್ತವೆ. ದೃಶ್ಯ ಸಂಯೋಜನೆ, ಧ್ವನಿ ಮತ್ತು ಸಂಕಲನದಂತಹ ಅಂಶಗಳು ಪ್ರೇಕ್ಷಕರ ಗ್ರಹಿಕೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ವಿವರಿಸಿದರು.
ಬಳಿಕ ನಡೆದ ಸಂವಾದದಲ್ಲಿ,ನಿರ್ದೇಶಕನೊಬ್ಬನ ಚಿತ್ರವು ಒಬ್ಬ ವ್ಯಕ್ತಿಯ ಜೀವನದ ಮೇಲಾದರೂ ಸಕಾರಾತ್ಮಕ ಪರಿಣಾಮ ಬೀರಿದರೆ ಅದು ಯಶಸ್ವಿ ಚಿತ್ರವಾಗುತ್ತದೆ ಎಂದು ಹೇಳಿದರು.ಉತ್ಸವದ ಅಂಗವಾಗಿ ಎಂಐಸಿ ವಿದ್ಯಾರ್ಥಿಗಳು ರೂಪಿಸಿದ ಯೋಜನೆಗಳ ಪ್ರದರ್ಶನವೂ ನಡೆಯಿತು.ಛಾಯಾಗ್ರಹಣ, ಜಾಹೀರಾತು ಮತ್ತು ದೃಶ್ಯ ಕಥನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಈ ಪ್ರದರ್ಶನ ಪರಿಚಯಿಸಿತು.
ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಪ್ರತಿನಿಧಿಗಳು ಉತ್ಸವದಲ್ಲಿ ಪಾಲ್ಗೊಂಡು ‘ಬ್ಯಾಂಡ್ ಸ್ವಾಪ್’, ‘ಮಾಕ್ ಮುನ್, ‘ಮೀಡಿಯಾ ಎಸ್ಕೆಪ್ ರೂಮ್’ ಮತ್ತು ‘ಸ್ಕ್ಯಾವೆಂಜರ್ ಹಂಟ್’ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
